ಮಹಿಳೆಯರು ಗರ್ಭಾವಸ್ಥೆಯಲ್ಲಿ ಸುಂದರವಾದ ಕೂದಲು ಮತ್ತು ತ್ವಚೆಯನ್ನು ಹೊಂದಿರುತ್ತಾರೆ. ಆದರೆ ಹೆರಿಗೆಯ ಬಳಿಕ ತ್ವಚೆ ಹೊಳಪು ಕಳೆದುಕೊಂಡು ವಯಸ್ಸಾದಂತೆ ಕಾಣುತ್ತದೆ. ಹಾಗಾಗಿ ನಿಮ್ಮ ಚರ್ಮದ ಕಾಂತಿಯನ್ನು ಮರಳಿ ಪಡೆಯಲು ಈ ಟಿಪ್ಸ್ ಫಾಲೋ ಮಾಡಿ.
*ಮುಖಕ್ಕೆ ಪ್ರತಿದಿನ ಎಣ್ಣೆ ಮಸಾಜ್ ಮಾಡಿ. ಇದರಿಂದ ರಕ್ತಪರಿಚಲನೆ ಹೆಚ್ಚಾಗುತ್ತದೆ. ಇದು ಕಣ್ಣಿನ ಸುತ್ತಲಿನ ಕಪ್ಪುಕಲೆ, ಚರ್ಮ ಸುಕ್ಕುಗಟ್ಟಿರುವುದನ್ನು ನಿವಾರಿಸುತ್ತದೆ. ಮುಖದ ಹೊಳಪನ್ನು ಹೆಚ್ಚಿಸುತ್ತದೆ.
* ಕಣ್ಣಿನ ದಣಿವನ್ನು ನಿವಾರಿಸಿ ಇಲ್ಲವಾದರೆ ಕಣ್ಣಿನ ಸುತ್ತಲೂ ಕಪ್ಪು ಕಲೆಗಳು ಮೂಡುತ್ತವೆ. ಹಾಗಾಗಿ ರೋಸ್ ವಾಟರ್ ನಲ್ಲಿ ನೆನೆಸಿದ ಹತ್ತಿ ಪ್ಯಾಡ್ ಗಳನ್ನು ರಾತ್ರಿ ಮಲಗುವಾಗ ಕಣ್ಣಿನ ಮೇಲಿಡಿ.
*ಮುಖದಲ್ಲಿರುವ ಬ್ಯಾಕ್ಟೀರಿಯಾಗಳನ್ನು ನಿವಾರಿಸಲು ಮತ್ತು ಮಾಲಿನ್ಯಗಳನ್ನು ನಿವಾರಿಸಲು ಹಾಗೂ ಮುಖದ ಚರ್ಮವನ್ನು ಹೈಡ್ರೇಟ್ ಮಾಡಲು ಉತ್ತಮವಾದ ಫೇಸ್ ಪ್ಯಾಕ್ ನ್ನು ಹಚ್ಚುತ್ತಿರಿ.
*ಪ್ರತಿದಿನ ಆರೋಗ್ಯಕರವಾದ ಆಹಾರವನ್ನು ಸೇವಿಸಿ. ಜಂಕ್ ಫುಡ್, ಎಣ್ಣೆ, ಕೃತಕ ಸಕ್ಕರೆ ಬಳಸಿದಂತಹ ಆಹಾರವನ್ನು ಸೇವಿಸಬೇಡಿ.
*ಒತ್ತಡವನ್ನು ನಿವಾರಿಸಲು, ದೇಹದ ಮತ್ತು ಚರ್ಮದ ಆರೋಗ್ಯ ಕಾಪಾಡಲು ಪ್ರತಿದಿನ ವ್ಯಾಯಾಮ, ಯೋಗಗಳನ್ನು ಮಾಡಿ.