ಸುಂದರ ಕೈ ನಿಮ್ಮ ವ್ಯಕ್ತಿತ್ವವನ್ನು ಹೇಳಬಲ್ಲದು. ಸುಂದರ ಹಾಗೂ ಕೋಮಲ ಕೈ ಪಡೆಯಬೇಕೆನ್ನುವುದು ಎಲ್ಲರ ಆಸೆ. ಆದ್ರೆ ಚಳಿಗಾಲದಲ್ಲಿ ಕೈ ಕಳೆಗುಂದಿರುತ್ತದೆ. ಕೆಲವರ ಚರ್ಮ ಬಿರುಕು ಬಿಟ್ಟಂತಾಗಿದ್ದರೆ ಮತ್ತೆ ಕೆಲವರ ಕೈ ವಯಸ್ಸಾದಂತೆ ಕಾಣಿಸುತ್ತದೆ.
ಮುಖಕ್ಕೊಂದೆ ಅಲ್ಲ ಕೈಗೂ ಚಳಿಗಾಲದಲ್ಲಿ ಆರೈಕೆ ಬಹಳ ಮುಖ್ಯ. ನಿಯಮಿತವಾಗಿ ಆರೈಕೆ ಮಾಡಿದ್ರೆ ಸುಲಭವಾಗಿ ಕೋಮಲ ಕೈ ನಿಮ್ಮದಾಗಲಿದೆ.
ಪ್ರತಿದಿನ ಕೈ ಸ್ಕ್ರಬ್ ಮಾಡಬೇಕು. ಶುದ್ಧವಾಗಿ ಕೈ ತೊಳೆದು ಸ್ಕ್ರಬ್ ಮಾಡುವುದರಿಂದ ಕೈ ಸೌಂದರ್ಯ ಹೆಚ್ಚಾಗುತ್ತದೆ. ಸ್ನಾನ ಮಾಡುವಾಗ ಮೃದುತ್ವ ನೀಡುವ ಸೋಪ್ ಬಳಸುವುದು ಬಹಳ ಮುಖ್ಯ.
ಪಾತ್ರೆಗಳನ್ನು ತೊಳೆಯುವಾಗ ಕೈಗೆ ಪ್ಲಾಸ್ಟಿಕ್ ಕವರ್ ಹಾಕಿಕೊಳ್ಳಿ. ಪಾತ್ರೆ ತೊಳೆದ ನಂತ್ರ ಕೈಗೆ ಕ್ರೀಂ ಹಚ್ಚಲು ಮರೆಯಬೇಡಿ. ಪಾತ್ರೆ ತೊಳೆಯುವ ಸೋಪ್ ನಿಂದ ಕೈ ಒರಟಾಗುವುದಲ್ಲದೆ, ಒಣಗಿದಂತಾಗಿ ಸೌಂದರ್ಯ ಕಳೆದುಕೊಳ್ಳುತ್ತದೆ.
ಚಳಿಗಾಲದಲ್ಲಿ ಮಾಯಶ್ಚೈರೈಸರ್ ಕ್ರೀಂ ಬಳಸಲು ಮರೆಯಬೇಡಿ. ಪ್ರತಿಬಾರಿ ಕೈ ತೊಳೆದ ನಂತ್ರವೂ ಕೈಗೆ ಕ್ರೀಂ ಹಚ್ಚಿ.
ವ್ಯಾಕ್ಸಿಂಗ್ ಮಾಡುವುದರಿಂದ ನಿಮ್ಮ ಕೈ ಹೊಳಪು ಪಡೆಯುತ್ತದೆ. ವ್ಯಾಕ್ಸಿಂಗ್ ನಿಂದ ಚರ್ಮದ ಮೇಲ್ಪದರ ಕೊಳೆ ಹೋಗಿ ಚರ್ಮ ಸ್ವಚ್ಛವಾಗುತ್ತದೆ.
ನಿಂಬೆ ಹಣ್ಣಿನಲ್ಲಿ ಎಸಿಡ್ ಅಂಶವಿರುತ್ತದೆ. ಇದನ್ನು ಕೈಗೆ ಹಚ್ಚುವುದರಿಂದ ಕೈ ಹೊಳಪು ಪಡೆಯುತ್ತದೆ.