ಸುಂದರವಾಗಿ, ಪರ್ಫೆಕ್ಟ್ ಆಗಿ ಕಾಣಿಸಬೇಕು ಅನ್ನೋ ಆಸೆ ಎಲ್ಲರಿಗೂ ಇರುತ್ತೆ. ಅಷ್ಟೇ ಅಲ್ಲ ವಾತಾವರಣ ಕೂಡ ಬದಲಾಗುವುದರಿಂದ ನಿಮ್ಮ ಚರ್ಮಕ್ಕೆ ಹೆಚ್ಚಿನ ಕಾಳಜಿ ಬೇಕೇ ಬೇಕು.
ಚಳಿಗಾಲ ಆರಂಭವಾಗ್ತಿದ್ದಂತೆ ನಮ್ಮ ಚರ್ಮ ಒಣಗಿ ಹೋಗುತ್ತದೆ. ಹಾಗಾಗಿ ನಿಮ್ಮ ಚರ್ಮಕ್ಕೆ ಬೇಕಾದ ಹೆಚ್ಚು ನೀರಿನಂಶವಿರುವ ಆರೋಗ್ಯಕರ ಆಹಾರವನ್ನು ನೀವು ಸೇವಿಸಬೇಕು. ಇಡೀ ದಿನ ಮುಖ ಕಾಂತಿಯುಕ್ತವಾಗಿರಲು ಏನ್ಮಾಡ್ಬೇಕು ಅನ್ನೋದನ್ನು ನಾವ್ ಹೇಳ್ತೀವಿ.
ಬಿಸಿಲಿಗೆ ಸವಾಲೊಡ್ಡುವ ಮೊದಲ ಅಸ್ತ್ರ ನೀರು. ಹಾಗಾಗಿ ಸಾಕಷ್ಟು ನೀರು ಕುಡಿಯಿರಿ. ನಿಮ್ಮ ದೇಹ ಹೈಡ್ರೇಟ್ ಆಗಿದ್ದಷ್ಟು ನಿಮ್ಮ ಮುಖ ಮತ್ತು ಮೈ ಕಾಂತಿಯುಕ್ತವಾಗಿರುತ್ತದೆ.
ನೀವು ದಕ್ಷಿಣ ಭಾರತದ ಬೀಚ್ ಗಳಿಗೆ ಹೋದ್ರೆ ಎಳನೀರು ಹೆಚ್ಚು ಸೇವಿಸಿ. ಇದು ಕಡಿಮೆ ಕ್ಯಾಲೋರಿ ಹೊಂದಿದ್ದು, ಆ್ಯಂಟಿ ಒಕ್ಸಿಡೆಂಟ್ ಕೂಡ ಹೌದು. ಎಳನೀರಿನಲ್ಲಿರುವ ವಿಟಮಿನ್ ಸಿ ಮತ್ತು ಇತರ ಮಿನರಲ್ಸ್ ನಿಮ್ಮ ಚರ್ಮವನ್ನು ಉತ್ಕೃಷ್ಟಗೊಳಿಸುತ್ತವೆ.
ಅತಿಯಾದ ಎಣ್ಣೆ ಅಂಶವಿರುವ ಆಹಾರ ಸೇವಿಸಿದ್ರೆ ಮೊಡವೆ ಸಮಸ್ಯೆ ಶುರುವಾಗಬಹುದು. ವಿಟಮಿನ್ ಸಿ ಹೇರಳವಾಗಿರುವ ಕಿತ್ತಳೆ, ನಿಂಬೆ ಮತ್ತು ಕಿವಿ ಹಣ್ಣುಗಳನ್ನು ಹೆಚ್ಚಾಗಿ ಸೇವಿಸಿ. ನಿಮ್ಮ ಚರ್ಮದಲ್ಲಿ ತೇವಾಂಶವನ್ನು ಅವು ನಿಯಂತ್ರಿಸುತ್ತವೆ. ವಿಟಮಿನ್ ಸಿ ಚರ್ಮ ಸುಕ್ಕುಗಟ್ಟದಂತೆ ತಡೆಯುತ್ತದೆ.
ದಿನಪೂರ್ತಿ ಬಿಸಿಲಲ್ಲಿ ಕಳೆದ್ರೆ ಬಳಿಕ ನೈಸರ್ಗಿಕ ಆ್ಯಂಟಿ ಟ್ಯಾನ್ ಪೀಲ್ ಆಫ್ ಬಳಸಿ, ಸನ್ ಬರ್ನ್ ನಿಂದ ಪಾರಾಗಿ. ಕಿತ್ತಳೆಯ ಪೀಲ್ ಆಫ್ ಮಾಸ್ಕ್ ಗಳ ಬಳಕೆ ಒಳ್ಳೆಯದು. ಕಿತ್ತಳೆಯಲ್ಲಿ ವಿಟಮಿನ್ ಸಿ ಹೇರಳವಾಗಿರುವುದರಿಂದ ಅದು ನೈಸರ್ಗಿಕ ಕ್ಲೆನ್ಸರ್ ನಂತೆ ಕೆಲಸ ಮಾಡುತ್ತದೆ. ಜೇನುತುಪ್ಪದಲ್ಲಿ ಕೂಡ ಆ್ಯಂಟಿ ಬ್ಯಾಕ್ಟೀರಿಯಲ್ ಅಂಶಗಳಿವೆ.