
ತುಟಿಗಳು ಉಬ್ಬಿಕೊಂಡಿದ್ದರೆ ಅದು ಅಂದವಾಗಿ ಕಾಣುತ್ತದೆ ಮತ್ತು ನಿಮ್ಮ ಚೆಂದ ಕೂಡ ಹೆಚ್ಚಾಗುತ್ತದೆ. ಹಾಗೇ ಉಬ್ಬಿದ ತುಟಿಗಳಿಗೆ ತುಂಬಾ ಸುಲಭವಾಗಿ , ನೀಟಾಗಿ ಲಿಪ್ ಸ್ಟಿಕ್ ಹಚ್ಚಬಹುದು. ಆದರೆ ಕೆಲವರ ತುಟಿಗಳು ಚಿಕ್ಕದಾಗಿ, ಚಪ್ಪಟೆಯಾಗಿರುತ್ತದೆ. ಅಂತವರು ನಿಮ್ಮ ತುಟಿಗಳು ಉಬ್ಬಿಕೊಳ್ಳಲು ಹೀಗೆ ಮಾಡಿ.
*ನೀವು ಸ್ನಾನ ಮಾಡುವ ಮೊದಲು ತುಟಿಗಳಿಗೆ ಪೆಟ್ರೋಲಿಯಂ ಜೆಲ್ಲಿ ಹಚ್ಚಿ ಸ್ನಾನ ಮಾಡಿ. ಆದರೆ ತುಟಿಗಳಿಗೆ ಹಚ್ಚಿದ ಪೆಟ್ರೋಲಿಯಂ ಜೆಲ್ಲಿಯನ್ನು ಅಳಿಸಬೇಡಿ. ಇದರಿಂದ ಬಿಸಿ ನೀರಿನ ಶಾಖಕ್ಕೆ ಜೆಲ್ಲಿ ತುಟಿಯೊಳಗೆ ಹೋಗಿ ನಯವಾದ ಉಬ್ಬಿದ ತುಟಿಗಳನ್ನು ಪಡೆಯಬಹುದು.
*ಪುದೀನಾ ಎಣ್ಣೆಗಳನ್ನು ತುಟಿಗಳಿಗೆ ಉಜ್ಜಿ. ಇದರಿಂದ ತುಟಿಗಳು ಸ್ವಲ್ಪ ಮಟ್ಟಿಗೆ ಊದಿಕೊಳ್ಳುತ್ತದೆ. ಮತ್ತು ತಾತ್ಕಾಲಿಕ ಬಣ್ಣವನ್ನು ನೀಡುತ್ತದೆ.
*ಕಂದು ಸಕ್ಕರೆ ಮತ್ತು ತೆಂಗಿನೆಣ್ಣೆ ಮಿಕ್ಸ್ ಮಾಡಿ ತುಟಿಗಳಿಗೆ ಮಸಾಜ್ ಮಾಡಿ. ಇದು ರಕ್ತದ ಹರಿವನ್ನು ಹೆಚ್ಚಿಸಿ ನಿಮ್ಮ ತುಟಿಗಳು ದಪ್ಪವಾಗುವಂತೆ ಮಾಡುತ್ತದೆ.