alex Certify ಹೃದ್ರೋಗ ಸಮಸ್ಯೆಯಿಂದ ಪಾರಾಗಲು ಹೀಗೆ ಮಾಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೃದ್ರೋಗ ಸಮಸ್ಯೆಯಿಂದ ಪಾರಾಗಲು ಹೀಗೆ ಮಾಡಿ

ಹೃದ್ರೋಗ ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನರನ್ನು ಕಾಡುತ್ತಿರುವ ಸಮಸ್ಯೆ. ಕುಟುಂಬದಲ್ಲಿ ಯಾರಿಗಾದರೂ ಈ ರೀತಿ ಹೃದಯದ ತೊಂದರೆ ಇದ್ದರೆ ಎಲ್ಲಾ ಸದಸ್ಯರು ವಿಶೇಷ ಕಾಳಜಿ ವಹಿಸಬೇಕು. ಕುಟುಂಬದಲ್ಲಿ ಯಾರಿಗಾದರೂ ಹೃದಯಾಘಾತ ಅಥವಾ ಪಾರ್ಶ್ವವಾಯು ಆಗಿದ್ದರೆ, ಇತರರು ಕೂಡ ಹೃದಯ ಸಂಬಂಧಿ ಕಾಯಿಲೆಗಳಿಗೆ ತುತ್ತಾಗುವ ಅಪಾಯವು ಹೆಚ್ಚಾಗಿರುತ್ತದೆ. ಹಾಗಾಗಿ ಆರೋಗ್ಯದ ಬಗ್ಗೆ ಯಾವ ರೀತಿ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಎಂಬುದನ್ನು ನೋಡೋಣ.

ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿಡಿ: ಕೆಲವರಿಗೆ ಸಕ್ಕರೆ ಕಾಯಿಲೆಯಿಂದಾಗಿಯೇ ಹೃದಯದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹಾಗಾಗಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಕುಟುಂಬದಲ್ಲಿ ಯಾರಿಗಾದರೂ ಹೃದ್ರೋಗವಿದ್ದರೆ ಆಗಾಗ ವೈದ್ಯರಿಂದ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ.

ತೂಕವನ್ನು ನಿಯಂತ್ರಣದಲ್ಲಿಡಿ: ತೂಕ ನಿಯಂತ್ರಣ ತಪ್ಪಿದಲ್ಲಿ ಹಲವು ರೀತಿಯ ಸಮಸ್ಯೆಗಳು ಎದುರಾಗಬಹುದು. ಅತಿಯಾದ ತೂಕ ಹೃದಯಕ್ಕೂ ಅಪಾಯವನ್ನುಂಟು ಮಾಡುತ್ತದೆ. ಹಾಗಾಗಿ ಹೃದಯದ ಆರೋಗ್ಯ ಚೆನ್ನಾಗಿರಬೇಕೆಂದರೆ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ.

ಧೂಮಪಾನ ಮಾಡಬೇಡಿ: ಕುಟುಂಬದಲ್ಲಿ ಯಾರಿಗಾದರೂ ಹೃದಯದ ತೊಂದರೆ ಇದ್ದಲ್ಲಿ ಸಿಗರೇಟ್‌ನಿಂದ ದೂರವೇ ಇರಿ. ಧೂಮಪಾನ ನಿಮ್ಮ ದೇಹಕ್ಕೆ ಅತಿಯಾಗಿ ಹಾನಿ ಮಾಡುತ್ತದೆ. ಯೋಗಾಸನದ ಮೂಲಕ ಧೂಮಪಾನದ ಅಭ್ಯಾಸವನ್ನು ತ್ಯಜಿಸಲು ಪ್ರಯತ್ನಿಸಿ.

ಮದ್ಯಪಾನದಿಂದ ದೂರವಿರಿ: ಮದ್ಯಪಾನ ಆರೋಗ್ಯಕ್ಕೆ ಒಳ್ಳೆಯದಲ್ಲ.ಅದರಲ್ಲೂ ಕುಟುಂಬದಲ್ಲಿ ಹೃದ್ರೋಗದ ಇತಿಹಾಸವಿದ್ದರೆ ನೀವು ಖಂಡಿತವಾಗಿಯೂ ಆಲ್ಕೋಹಾಲ್‌ನಿಂದ ದೂರವೇ ಇರಬೇಕು. ಮದ್ಯ ಸೇವನೆಯಿಂದ ಹೃದಯಾಘಾತದ ಅಪಾಯವು ಹೆಚ್ಚಾಗುತ್ತದೆ. ಈ ನಾಲ್ಕು ಅಂಶಗಳನ್ನು ನೀವು ಗಮನದಲ್ಲಿಟ್ಟುಕೊಂಡರೆ ಹೃದಯಾಘಾತದ ಅಪಾಯದಿಂದ ಪಾರಾಗಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...