ವಾರದಲ್ಲಿ ಕನಿಷ್ಠ 2 ದಿನ ಕೂದಲನ್ನು ತೊಳೆಯುವುದರಿಂದ ಕೂದಲು ಆರೋಗ್ಯವಾಗಿರುತ್ತದೆ ಎಂದು ಹೇಳುತ್ತಾರೆ. ಆದರೆ ಕೆಲವು ಕಡೆ ಗಡಸು ನೀರು ಇರುತ್ತದೆ. ಇದರಿಂದ ಕೂದಲನ್ನು ತೊಳೆಯುವುದರಿಂದ ಕೂದಲು ಹಾನಿಗೊಳಗಾಗುತ್ತದೆ. ಮತ್ತು ಕೂದಲುದುರುತ್ತದೆ. ಹಾಗಾಗಿ ಈ ಸಮಸ್ಯೆಯನ್ನು ನಿವಾರಿಸಲು ಈ ಪರಿಹಾರವನ್ನು ಮಾಡಿ.
ಗಡಸು ನೀರಿನಿಂದ ಕೂದಲು ಹಾಳಾಗುತ್ತಿದ್ದರೆ ಆ ನೀರಿಗೆ ಸ್ವಲ್ಪ ವಿನೆಗರ್ ಅಥವಾ ನಿಂಬೆಯನ್ನು ಹಾಕಿ. ಇವುಗಳಲ್ಲಿರುವ ಆಮ್ಲೀಯ ಅಂಶ ಕೂದಲಿನ ಮೇಲಿನ ಖನಿಜಗಳ ಸಂಗ್ರಹವನ್ನು ತಡೆಯುತ್ತದೆ.
ಗಡಸು ನೀರಿನಿಂದ ಕೂದಲು ತೊಳೆದು ಕೂದಲು ಉದುರುತ್ತಿದ್ದರೆ ಸ್ನಾನ ಮಾಡಿದ ನಂತರ ಸ್ವಲ್ಪ ಫಿಲ್ಟರ್ ನೀರಿನಿಂದ ನಿಮ್ಮ ಕೂದಲನ್ನು ಕೊನೆಯಲ್ಲಿ ತೊಳೆಯಿರಿ. ಇದರಿಂದ ಕೂದಲು ಹಾನಿಗೊಳಗಾಗುವುದನ್ನು ತಪ್ಪಿಸಬಹುದು.
ಹಾಗೇ ನೀವು ಬಳಸುವ ನೀರು ಗಡಸಾಗಿದ್ದರೆ ನಿಮ್ಮ ಕೂದಲಿಗೆ ಕ್ಲಾರಿಫೈ ಶಾಂಪೂ ಬಳಸಿ. ಇದು ಕೂದಲು ಹಾಳಾಗುವುದನ್ನು ತಡೆಯುತ್ತದೆ.
ಹಾಗಾಗಿ ನಿಮ್ಮ ಊರಿನಲ್ಲಿ ನೀರು ಗಡುಸಾಗಿದ್ದರೆ ಅದಕ್ಕಾಗಿ ಕೂದಲಿನ ಆರೋಗ್ಯದ ಬಗ್ಗೆ ಚಿಂತಿಸುವ ಬದಲು ಈ ಸಲಹೆಯನ್ನು ಅನುಸರಿಸಿ.