ಬಹುತೇಕ ಮಕ್ಕಳು ರಾತ್ರಿ ಹಾಸಿಗೆ ಒದ್ದೆ ಮಾಡಿಕೊಳ್ತವೆ. ಸಣ್ಣವರಿರುವಾಗ ಇದು ಮಾಮೂಲಿ. ಆದ್ರೆ ಈ ಅಭ್ಯಾಸ ವಯಸ್ಸಿನ ಜೊತೆಗೆ ಮುಂದುವರೆದ್ರೆ ಕಷ್ಟ.
ಮಗು ದೊಡ್ಡದಾಗ್ತಿದ್ದಂತೆ ಹಾಸಿಗೆ ಒದ್ದೆ ಮಾಡಿಕೊಂಡ್ರೆ ಹೊರಗಡೆ ಹೋದಾಗ ಪಾಲಕರು ಮುಜುಗರಪಡುವಂತಾಗುತ್ತದೆ. ಸಿಟ್ಟು ಮಾಡಿಕೊಳ್ಳುವ ಪಾಲಕರು ಮಕ್ಕಳಿಗೆ ಬೈದು ಸುಮ್ಮನಾಗ್ತಾರೆ. ಆದ್ರೆ ಬೈದು ಬೆದರಿಸುವ ಮೊದಲು ಮನೆ ಮದ್ದನ್ನು ಬಳಸಿ ಮಕ್ಕಳ ಈ ಅಭ್ಯಾಸವನ್ನು ತಪ್ಪಿಸಿ.
ಒಂದು ಚಮಚ ನೇರಳೆ ಹಣ್ಣಿನ ಬೀಜದ ಪುಡಿಗೆ ಒಂದು ಚಮಚ ಸಕ್ಕರೆ ಸೇರಿಸಿ ದಿನದಲ್ಲಿ ಒಂದು ಬಾರಿ ಬಿಸಿ ಬಿಸಿ ನೀರಿಗೆ ಹಾಕಿ ಕುಡಿಯಲು ಕೊಡಿ. ಇದ್ರಿಂದ ಸಾಕಷ್ಟು ಉಪಯೋಗವಿದೆ.
ಬೆಲ್ಲಕ್ಕೆ ಎಳ್ಳು ಸೇರಿಸಿ ಉಂಡೆ ಮಾಡಿ ಮಕ್ಕಳಿಗೆ ತಿನ್ನಿಸಿ. ಇದ್ರಿಂದ ಮಕ್ಕಳು ಹಾಸಿಗೆ ಒದ್ದೆ ಮಾಡುವುದು ತಪ್ಪುತ್ತದೆ.
ಒಣಗಿಸಿ ಪುಡಿ ಮಾಡಿದ ಕಹಿ ಬೇವಿನ ಪುಡಿ, ಜೀರಿಗೆ ಪುಡಿಯನ್ನು ಮಿಶ್ರಣ ಮಾಡಿ ದಿನಕ್ಕೆ ಎರಡು ಬಾರಿ ತಿನ್ನಲು ನೀಡಿ. ಇದ್ರ ಜೊತೆಗೆ ಜೇನು ತುಪ್ಪವನ್ನೂ ಮಿಕ್ಸ್ ಮಾಡಿಕೊಡಬಹುದು.
ರಾತ್ರಿ ಮಲಗುವ ಮೊದಲು ಮಕ್ಕಳಿಗೆ ಮೂತ್ರ ಮಾಡಿ ಮಲಗಿಸಿ. ರಾತ್ರಿ ಎರಡು ಬಾರಿ ಏಳಿಸಿ ಶೌಚಾಲಯಕ್ಕೆ ಕರೆದುಕೊಂಡು ಹೋಗಿ.
ವಾಲ್ನಟ್ ಹಾಗೂ ಒಣ ದ್ರಾಕ್ಷಿಯನ್ನು ಮಕ್ಕಳು ಇಷ್ಟಪಟ್ಟು ತಿನ್ನುತ್ತಾರೆ. ಈ ಎರಡನ್ನೂ ಮಿಶ್ರಣ ಮಾಡಿ ಸುಮಾರು 10 ದಿನಗಳ ಕಾಲ ನೀಡಿದ್ರೆ ಹಾಸಿಗೆ ಒದ್ದೆಯಾಗೋದು ತಪ್ಪಲಿದೆ.
ಮಕ್ಕಳು ಮಲಗುವ ಮೊದಲು ಹಾಲಿನ ಜೊತೆ ಉತ್ತುತ್ತಿ ತಿನ್ನಿಸಿ. ಇದ್ರಿಂದಲೂ ಮಕ್ಕಳು ರಾತ್ರಿ ಹಾಸಿಗೆ ಒದ್ದೆ ಮಾಡಿಕೊಳ್ಳುವ ಅಭ್ಯಾಸ ಬಿಡ್ತಾರೆ.