alex Certify ನರಕ ಚತುರ್ದಶಿಯಂದು ಅವಶ್ಯವಾಗಿ ಮಾಡಿ ಈ ಪೂಜೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನರಕ ಚತುರ್ದಶಿಯಂದು ಅವಶ್ಯವಾಗಿ ಮಾಡಿ ಈ ಪೂಜೆ

ದೀಪಾವಳಿ ಹಬ್ಬ ಬಂದಿದೆ. ದೀಪಾವಳಿಗೆ ತಯಾರಿ ಜೋರಾಗಿ ನಡೆದಿದೆ. ದೀಪಾವಳಿಯನ್ನು ಐದು ದಿನಗಳ ಕಾಲ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ನರಕ ಚತುರ್ದಶಿ ದೀಪಾವಳಿಯಲ್ಲಿ ವಿಶೇಷ ಮಹತ್ವ ಪಡೆದಿದೆ. ಈ ದಿನ ಎಣ್ಣೆ ಸ್ನಾನ ಮಾಡುವ ಜೊತೆಗೆ ಸಂಜೆ ಯಮ ದೀಪವನ್ನು ಹಚ್ಚಲಾಗುತ್ತದೆ.

ನರಕ ಚತುರ್ಥಿಯಂದು ಕೆಲ ದೇವಾನುದೇವತೆಗಳ ಪೂಜೆಯನ್ನು ಅವಶ್ಯಕವಾಗಿ ಮಾಡಬೇಕು. ಶ್ರೀಕೃಷ್ಣನು ಈ ದಿನ ನರಕಾಸುರನನ್ನು ಕೊಂದನೆಂದು ಹೇಳಲಾಗುತ್ತದೆ. ಆದ್ದರಿಂದ ಇದನ್ನು ನರಕ ಚತುರ್ದಶಿ ಎಂದು ಕರೆಯಲಾಗುತ್ತದೆ. ಈ ದಿನ ಭಗವಂತ ಕೃಷ್ಣನನ್ನು ಪತ್ನಿ ಸತ್ಯಭಾಮೆ ಜೊತೆ ಪೂಜಿಸಬೇಕು.

 ಈ ದಿನವನ್ನು ಶಿವ ಚತುರ್ದಶಿ ಎಂದೂ ಕರೆಯಲಾಗುತ್ತದೆ. ಹಾಗಾಗಿ ಶಿವನ ಪೂಜೆ ಕೂಡ ಮಾಡಬೇಕಾಗುತ್ತದೆ.

ಈ ವಾಮನ ಬಲಿ ರಾಜನಿಗೆ ವರ ನೀಡುತ್ತಾನೆ. ನಿನ್ನ ರಾಜ್ಯದಲ್ಲಿ ಯಮನ ಹೆಸರಿನಲ್ಲಿ ದೀಪ ಹಚ್ಚುವವರ ಪೂರ್ವಜರು ನರಕದಲ್ಲಿರುವುದಿಲ್ಲ ಎನ್ನುತ್ತಾನೆ. ಈ ದಿನ ವಾಮನ ಪೂಜೆ ಕೂಡ ನಡೆಯುತ್ತದೆ.

 ಈ ದಿನದ ಮುಸ್ಸಂಜೆ ಸಮಯದಲ್ಲಿ  ಮನೆಯ ಸುತ್ತಲೂ ದೀಪ ಬೆಳಗಿಸಲಾಗುತ್ತದೆ. ಅಕಾಲಿಕ ಮರಣ ಬರದಂತೆ ಮತ್ತು ಆರೋಗ್ಯಕರ ಜೀವನಕ್ಕಾಗಿ ಯಮನಲ್ಲಿ ಪ್ರಾರ್ಥಿಸಲಾಗುತ್ತದೆ.

ಈ ದಿನ ಹನುಮಂತ ಜನಿಸಿದ್ದ ಎನ್ನಲಾಗುತ್ತದೆ. ಇದೇ ಕಾರಣಕ್ಕೆ ಹನುಮಂತನ ಪೂಜೆ ನಡೆಯುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...