ಪಿತೃ ಪಕ್ಷ ಪೂರ್ವಜರನ್ನು ಮೆಚ್ಚಿಸಲು ಇದು ಒಳ್ಳೆ ಸಮಯವಾಗಿದೆ. ಅ. 14ರಂದು ಪಿತೃ ಪಕ್ಷದ ಕೊನೆ ದಿನ. ಆ ದಿನ ಪೂರ್ವಜರ ಶ್ರಾದ್ಧ ಮಾಡಲಾಗುತ್ತದೆ. ಪಿತೃ ಪಕ್ಷದಲ್ಲಿ ಪೂರ್ವಜರು ಭೂಮಿಗೆ ಬರ್ತಾರೆ ಎನ್ನಲಾಗುತ್ತದೆ. ಅವರನ್ನು ಪ್ರಸನ್ನಗೊಳಿಸುವುದು ಮುಖ್ಯವಾಗುತ್ತದೆ. ಪಿತೃ ಪಕ್ಷದಲ್ಲಿ ಪೂರ್ವಜರ ಕೃಪೆ ಸಿಗಬೇಕು ಎನ್ನುವವರು ಕೆಲ ವಿಷ್ಯಗಳ ಬಗ್ಗೆ ಗಮನ ಹರಿಸಬೇಕು.
ದಕ್ಷಿಣ ದಿಕ್ಕನ್ನು ಪೂರ್ವಜರ ದಿಕ್ಕು ಎಂದು ಪರಿಗಣಿಸಲಾಗುತ್ತದೆ. ಪಿತೃ ಪಕ್ಷದಲ್ಲಿ ಪೂರ್ವಜರು ದಕ್ಷಿಣ ದಿಕ್ಕಿನಿಂದ ಬರುತ್ತಾರೆ ಎನ್ನಲಾಗುತ್ತದೆ. ಹಾಗಾಗಿ ದಕ್ಷಿಣ ದಿಕ್ಕಿನಲ್ಲಿ ಪೂರ್ವಜರಿಗೆ ಪೂಜೆ, ತರ್ಪಣ ಬಿಡಬೇಕು ಎಂಬ ನಂಬಿಕೆಯಿದೆ. ಹಾಗೆಯೇ ಪಿತೃಗಳ ಶ್ರಾದ್ಧ ಮಾಡುವ ಸ್ಥಳವನ್ನು ಶುದ್ಧವಾಗಿ ಇಡಬೇಕು. ಈ ಕೋಣೆಯ ಗೋಡೆಗಳು ತಿಳಿ ಹಳದಿ, ಗುಲಾಬಿ, ಹಸಿರು ಬಣ್ಣದಲ್ಲಿದ್ದರೆ ಒಳ್ಳೆಯದು. ತರ್ಪಣ ಬಿಡುವಾಗ, ಬಿಡುವವರ ಮುಖ ದಕ್ಷಿಣ ದಿಕ್ಕಿಗೆ ಇರಬೇಕು.
ಎಲ್ಲರ ಕಣ್ಣಿಗೆ ಬೀಳುವಂತೆ ಪೂರ್ವಜರ ಫೋಟೋವನ್ನು ಹಾಕಬಾರದು. ಹಾಗೆಯೇ ಮಲಗುವ ಕೋಣೆ, ಪೂಜಾ ಸ್ಥಳಗಳಲ್ಲೂ ಪೂರ್ವಜರ ಫೋಟೋ ಇಡಬಾರದು. ಅಡುಗೆ ಮನೆಯಲ್ಲಿ ಕೂಡ ಪೂರ್ವಜರ ಫೋಟೋ ನಿಶಿದ್ಧ.
ಪಿತೃಪಕ್ಷದಲ್ಲಿ ಕೂದಲು ಕತ್ತರಿಸಬಾರದು. ಶೇವಿಂಗ್ ಕೂಡ ಮಾಡಬಾರದು. ಯಾವುದೇ ಶುಭ ಕಾರ್ಯವನ್ನು ಈ ಸಮಯದಲ್ಲಿ ಮಾಡಬಾರದು. ಶ್ರಾದ್ಧದ ಸಮಯದಲ್ಲಿ ಮತ್ತು ಪಿತೃ ಪಕ್ಷದಲ್ಲಿ ಬಡವರಿಗೆ ದಾನ ಮಾಡುವುದನ್ನು ಮರೆಯಬಾರದು. ಪಿತೃ ಪಕ್ಷದಲ್ಲಿ ಪ್ರತಿ ದಿನ ಸಂಜೆ ದಕ್ಷಿಣ ದಿಕ್ಕಿಗೆ ದೀಪವನ್ನು ಬೆಳಗಬೇಕು.