
ಚೂಯಿಂಗ್ ಗಮ್ ಜಗಿಯಲು ಮಾತ್ರ ಸೀಮಿತ. ಬಳಿಕ ಅದನ್ನು ಉಗಿಯಲೇ ಬೇಕು. ಕೆಲವೊಮ್ಮೆ ಮಕ್ಕಳು ಆಟವಾಡುವ ಭರದಲ್ಲಿ ಚೂಯಿಂಗ್ ಗಮ್ ಅನ್ನು ನುಂಗಿ ಬಿಡುತ್ತಾರೆ. ಹೀಗಾದಾಗ ಏನು ಮಾಡುವುದೆಂದು ತಿಳಿಯದೆ ಕಂಗಾಲಾಗುತ್ತಾರೆ.
ಒಮ್ಮೆ ಹೊಟ್ಟೆಯೊಳಗೆ ಸೇರಿಕೊಂಡ ಚೂಯಿಂಗ್ ಗಮ್ 40 ಗಂಟೆಗಳ ಕಾಲ ಹೊಟ್ಟೆಯೊಳಗೇ ಇರುತ್ತದೆ. ಬಳಿಕ ಅದು ಮಲದ ರೂಪದಲ್ಲಿ ಹೊರಬರುತ್ತದೆ. ಇದು ಯಾವಾಗಲಾದರೊಮ್ಮೆ ಘಟಿಸಿದರೆ ಯಾವುದೇ ಸಮಸ್ಯೆ ಇಲ್ಲ. ಪದೇ ಪದೇ ಮಗು ಚ್ಯೂಯಿಂಗ್ ಗಮ್ ನುಂಗುತ್ತಿದ್ದರೆ ಸಮಸ್ಯೆ ಕಾಣಿಸಿಕೊಳ್ಳಬಹುದು.
ಮಕ್ಕಳಿಗೆ ಮಲಬದ್ಧತೆ ಸಮಸ್ಯೆ ಇದ್ದರೆ ಅದು ಕರುಳಿಗೆ ಅಂಟಿಕೊಂಡು ಬ್ಲಾಕೇಜ್ ಮೊದಲಾದ ಸಮಸ್ಯೆಗಳಿಗೆ ಕಾರಣವಾಗಬಹುದು. ಹಾಗಾದಾಗ ವಿಪರೀತ ಹೊಟ್ಟೆನೊವು, ವಾಂತಿ ಕಾಣಿಸಿಕೊಳ್ಳುತ್ತದೆ.
ಸಾಧ್ಯವಾದಷ್ಟು ಮಕ್ಕಳಿಂದ ಚೂಯಿಂಗ್ ಗಮ್ ಅನ್ನು ದೂರವಿಡಿ. ಹಾಗೊಂದು ವೇಳೆ ನುಂಗಿದರೆ ಸಾಕಷ್ಟು ನೀರು ಕುಡಿಸಿ. ಮಲದ ಮೂಲಕ ಹೊರಬರಲು ಸುಲಭವಾಗುತ್ತದೆ.