ಈಗ ಫೋನ್ ನಮ್ಮ ದೇಹದ ಒಂದು ಅಂಗದಂತಾಗಿದೆ. ಫೋನ್ ಇಲ್ಲದೆ ಜನರು ಒಂದು ನಿಮಿಷ ಕೂಡ ಇರುವುದಿಲ್ಲ. ಬಾತ್ ರೂಮ್ ಗೂ ಜನರು ಫೋನ್ ಹಿಡಿದುಕೊಂಡು ಹೋಗ್ತಾರೆ. ಕೆಲವೊಮ್ಮೆ ಕೈ ತಪ್ಪಿ ಫೋನ್ ನೀರಿನಲ್ಲಿ ಬಿದ್ರೆ ಜನರು ಜೀವ ಹೋದಷ್ಟು ದುಃಖಪಡ್ತಾರೆ. ಫೋನ್ ನೀರಿನಲ್ಲಿ ಬಿದ್ರೆ ಆಘಾತಕ್ಕೊಳಗಾಗಬೇಕಾಗಿಲ್ಲ.
ಕೆಲ ಫೋನ್ ಗಳು ವಾಟರ್ ಫ್ರೂಫ್ ಆಗಿರುತ್ತವೆ. ಹಾಗಾಗಿ ಬೇಗ ನೀರನ್ನು ಹೀರಿಕೊಳ್ಳುವುದಿಲ್ಲ. ನೀರಿನಲ್ಲಿ ಫೋನ್ ಬಿದ್ದ ತಕ್ಷಣ ಅದನ್ನು ತೆಗೆಯಬೇಕು. ನಂತ್ರ ಫೋನ್ ಸ್ವಿಚ್ ಆಫ್ ಮಾಡಿ. ಇಲ್ಲವಾದ್ರೆ ಶಾರ್ಟ್ ಸರ್ಕ್ಯೂಟ್ ಆಗುವ ಸಾಧ್ಯತೆಯಿರುತ್ತದೆ. ಫೋನ್ ಆಫ್ ಮಾಡಿದ ನಂತ್ರ ಬ್ಯಾಟರಿ, ಸಿಮ್ ಕಾರ್ಡ್, ಕವರ್ ಸೇರಿದಂತೆ ಎಲ್ಲವನ್ನು ತೆಗೆಯಬೇಕು.
ಒಣ ಬಟ್ಟೆಯಲ್ಲಿ ಎಲ್ಲವನ್ನು ಸ್ವಚ್ಛಗೊಳಿಸಬೇಕು. ನಂತ್ರ ಒಣಗಿದ ಬ್ಯಾಗ್ ನಲ್ಲಿ ಫೋನ್ ಹಾಕಿಡಿ. 45 ಗಂಟೆಗಳ ಕಾಲ ತೆಗೆಯಲು ಹೋಗಬೇಡಿ. 45 ಗಂಟೆಗಳ ನಂತ್ರ ಫೋನ್ ಜೋಡಿಸಿ ಸರಿಯಾಗಿ ಕೆಲಸ ಮಾಡ್ತಿದೆಯಾ ಎಂಬುದನ್ನು ಪರೀಕ್ಷಿಸಿ. ಹೀಗೆ ಮಾಡಿದ್ರೆ ಫೋನ್ ಸಂಪೂರ್ಣ ಸರಿಯಾಗುತ್ತದೆ ಎಂದಲ್ಲ. ಹಾಳಾಗುವ ಸಾಧ್ಯತೆಯನ್ನು ಕಡಿಮೆ ಮಾಡಬಹುದು.