ಮಾರುಕಟ್ಟೆಯಲ್ಲಿ ಪ್ರಸ್ತುತ ಹಲವು ವಿಧದ ಶ್ಯಾಂಪೂಗಳು ಲಭ್ಯವಿದ್ದು, ಅವುಗಳಲ್ಲಿ ಹೆಚ್ಚಿನವು ರಾಸಾಯನಿಕಯುಕ್ತವೇ ಆಗಿರುತ್ತದೆ. ಹಾಗಾಗಿ ಇವುಗಳಿಂದ ಎಷ್ಟು ಪ್ರಯೋಜನಗಳಿವೆಯೋ ಅದಕ್ಕಿಂತ ಹೆಚ್ಚಿನ ದುಷ್ಪರಿಣಾಮಗಳೂ ಇರುತ್ತವೆ.
ಇವುಗಳ ಮಧ್ಯೆ ಕೂದಲು ವೇಗವಾಗಿ ಉದ್ದಕ್ಕೆ ಬೆಳೆಯಬೇಕೆಂದು ಬಯಸುವವರು ಹೀಗೆ ಮಾಡಬಹುದು. ಕೂದಲನ್ನು ಆಗಾಗ ಟ್ರಿಮ್ ಮಾಡುತ್ತಿರಿ. ಅಂದರೆ ತುದಿಯನ್ನು ಕನಿಷ್ಠ ತಿಂಗಳಿಗೊಮ್ಮೆ 45 ದಿನಕ್ಕೊಮ್ಮೆ ಕತ್ತರಿಸುತ್ತಿರಿ.
ನಿತ್ಯ ಶಾಂಪೂ ಬಳಸುವ ಅಭ್ಯಾಸವಿದ್ದರೆ ಬಿಟ್ಟುಬಿಡಿ. ಇದು ಕೂದಲಿನಲ್ಲಿ ನೈಸರ್ಗಿಕವಾಗಿ ಇರುವ ಎಣ್ಣೆಯ ಅಂಶವನ್ನು ತೆಗೆದು ಹಾಕುತ್ತದೆ. ಇದರಿಂದ ಕೂದಲು ಬಲಹೀನವಾಗಿ ಕಾಣಿಸುತ್ತದೆ.
ಕೂದಲು ತೊಳೆದ ಬಳಿಕ ಕಂಡೀಷನರ್ ಹಾಕದಿದ್ದರೆ ಕೂದಲು ಬೇಗ ಬೆಳೆಯುವುದೇ ಇಲ್ಲ. ಕಂಡಿಷನರ್ ಹಚ್ಚುವುದರಿಂದ ಕೂದಲಿಗೆ ಉಂಟಾಗುವ ಹಾನಿಯೂ ಕಡಿಮೆಯಾಗುತ್ತದೆ. ತುದಿ ಸೀಳುವ ಸಮಸ್ಯೆಯೂ ದೂರವಾಗುತ್ತದೆ.