ಎಲ್ಲಾ ಹುಡುಗಿಯರಿಗೂ ತಮ್ಮ ಮುಖ ಹೊಳೆಯುವಂತಿರಬೇಕು ಎಂಬ ಆಸೆ ಇರುತ್ತದೆ. ಹಾಗಾಗಿ ಪಾರ್ಲರ್ ಗಳಿಗೆ ಹೋಗಿ ಸಿಕ್ಕಾಪಟ್ಟೆ ದುಡ್ಡು ಖರ್ಚು ಮಾಡಿ ಬ್ಲೀಚ್ ಫೇಶಿಯಲ್ ಮಾಡಿಸಿಕೊಳ್ಳುತ್ತಾರೆ. ಆದರೆ ಇದು ತಾತ್ಕಾಲಿಕವಷ್ಟೇ. ಅದು ಅಲ್ಲದೇ ಅದರಲ್ಲಿರುವ ಕೆಮಿಕಲ್ಸ್ ಎಲ್ಲರ ಮುಖಕ್ಕೂ ಹೊಂದುವುದಿಲ್ಲ.
ಹಾಗಾಗಿ ದೇಹದ ಒಳಗೆ ನಾವು ಏನು ಸೇವಿಸುತ್ತವೆಯೋ ಅದು ನಮ್ಮ ಸೌಂದರ್ಯವನ್ನು ಹೆಚ್ಚಿಸುತ್ತದೆ. ಗ್ಲೋಯಿಂಗ್ ಸ್ಕೀನ್ ಬೇಕಾದರೆ ಇಂದಿನಿಂದ ಇದನ್ನು ಸೇವಿಸಿ.
*ಟೀ, ಕಾಫಿ ಸೇವನೆ ಬದಲು ಕಿತ್ತಳೆ ಹಣ್ಣಿನ ಜ್ಯೂಸ್ ಕುಡಿಯಿರಿ. ಕಿತ್ತಳೆಹಣ್ಣಿನಲ್ಲಿ ವಿಟಮಿನ್ ಸಿ ಹೇರಳವಾಗಿರುವುದರಿಂದ ಇದು ಚರ್ಮವನ್ನು ಕಾಂತಿಯುತಗೊಳಿಸುತ್ತದೆ.
*ನಿಂಬೆ ಹಣ್ಣಿನ ಜ್ಯೂಸ್ ಗೆ ಸಕ್ಕರೆ ಬದಲು ಜೇನುತುಪ್ಪ ಬಳಸಿ ಸೇವಿಸುವುದರಿಂದ ಆರೋಗ್ಯವೂ ಚೆನ್ನಾಗಿರುತ್ತದೆ. ತ್ವಚೆಯು ನಳನಳಿಸುತ್ತದೆ.
*ತಿಂಡಿ ತಿಂದ ನಂತರ ಪಪ್ಪಾಯ ಹಣ್ಣಿನ ಜ್ಯೂಸ್ ಕುಡಿಯುವುದು, ಸಂಜೆ ಕರಿದ ತಿಂಡಿಯ ಬದಲು ಹಣ್ಣುಗಳ ಸಲಾಡ್ ಮಾಡಿಕೊಂಡು ತಿನ್ನುವುದರಿಂದ ಕೂಡ ಮುಖದ ಕಾಂತಿ ಹೆಚ್ಚುತ್ತದೆ.
*ಬಿಟ್ರೂಟ್ ನಲ್ಲಿ ವಿಟಮಿನ್ ಸಿ, ಕಬ್ಬಿಣದಂಶ, ಪೊಟ್ಯಾಷಿಯಂ ಹೆಚ್ಚಾಗಿರುತ್ತದೆ. ಹಾಗಾಗಿ ಜಂಕ್ ಫುಡ್ ಬದಲು ಬಿಟ್ರೂಟ್ ಕತ್ತರಿಸಿಕೊಂಡು ತಿನ್ನುವುದು ಅಥವಾ ಬಿಟ್ರೂಟ್ ಜ್ಯೂಸ್ ಕುಡಿಯುವುದರಿಂದ ಮುಖದಲ್ಲಿನ ಕಲೆ, ಮೊಡವೆಗಳು ಮಾಯವಾಗಿ ಗ್ಲೋಯಿಂಗ್ ಸ್ಕಿನ್ ನಿಮ್ಮದಾಗುತ್ತದೆ.