ಒಂದು ಪಾತ್ರೆಯಲ್ಲಿ ಒಂದು ಲೋಟದಷ್ಟು ನೀರನ್ನು ಕುದಿಸಿ, ಅರ್ಧ ಚಮಚದಷ್ಟು ಕೊತ್ತಂಬರಿ ಬೀಜ ಹಾಕಿ ಚೆನ್ನಾಗಿ ಕುದಿಸಿ ಬೆಳಿಗ್ಗೆ ಕುಡಿಯಿರಿ. ಇದರಲ್ಲಿ ಪೊಟ್ಯಾಷಿಯಂ, ಐರನ್, ಮ್ಯಾಗ್ನಿಶಿಯಮ್, ಕ್ಯಾಲ್ಸಿಯಂ ಹಾಗೇನೇ ಫೋಲಿಕ್ ಆಸಿಡ್ ಇದೆ. ಜೊತೆಗೆ ವಿಟಮಿನ್ ಸಿ ಇದ್ದು ದೇಹದಲ್ಲಿ ಇರುವ ಕಲ್ಮಶಗಳನ್ನು ದೂರ ಮಾಡುತ್ತದೆ.
ಅದರೊಂದಿಗೆ ದೇಹದ ತೂಕ ಕೂಡ ಕಡಿಮೆ ಆಗುತ್ತದೆ. ದೇಹದಲ್ಲಿ ಇರುವ ಬೊಜ್ಜು ಕೂಡ ಕರಗುತ್ತದೆ.
ಹಾಗೇ 1 ಗ್ಲಾಸ್ ಬಿಸಿ ನೀರಿಗೆ ಒಂದು ಚಮಚ ಜೀರಿಗೆ ಹಾಕಿ ಕುದಿಸಿ ಇದರ ನೀರನ್ನು ಸೇವಿಸುವುದರಿಂದ ಮೆಟಾಬಾಲಿಸಮ್ ಜಾಸ್ತಿ ಆಗುತ್ತದೆ. ಜೀರ್ಣಕ್ರಿಯೆ ಕೂಡ ಹೆಚ್ಚಾಗುತ್ತದೆ. ಜೀರಿಗೆಯಲ್ಲಿ ಐರನ್ ಅಂಶ ಇರುವುದರಿಂದ ನಮ್ಮ ದೇಹದಲ್ಲಿ ಇರುವ ಕೆಟ್ಟ ಕೊಬ್ಬನ್ನು ತೆಗೆದು ಹಾಕುತ್ತದೆ. ಸೇವಿಸಿದ ಆಹಾರದಲ್ಲಿ ಜಾಸ್ತಿ ಪ್ರಮಾಣದಲ್ಲಿ ಕ್ಯಾಲೊರಿಗಳು ಇದ್ದರೆ ಅದನ್ನು ಕೂಡ ತೆಗೆದು ಹಾಕುತ್ತದೆ. ಇದರಿಂದ ದೇಹದ ತೂಕ ಕೂಡ ಇಳಿಯುತ್ತದೆ.