ಎಷ್ಟೇ ಶ್ರಮ ವಹಿಸಿದ್ರೂ ಕೆಲವರಿಗೆ ಯಶಸ್ಸು ಲಭಿಸುವುದಿಲ್ಲ. ಜೀವನದಲ್ಲಿ ಒಂದಾದ ಮೇಲೆ ಒಂದು ಕಷ್ಟಗಳು ಬರ್ತಾನೆ ಇರುತ್ವೆ. ಮಾಡಿದ ಕೆಲಸಕ್ಕೆ ಯಶಸ್ಸು ಸಿಗಲಿ, ಜೀವನದಲ್ಲಿ ಸಫಲತೆ ಕಾಣಲಿ ಅಂತಾ ಎಲ್ಲರೂ ಬಯಸ್ತಾರೆ. ಒಂದೇ ಸಮನೆ ಕೆಲಸ ಮಾಡಿದ್ರೆ ಸಾಲದು, ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ.
ಭಕ್ತರ ಬಾಯಲ್ಲಿ ತನ್ನ ಹೆಸರು ಬಂದ್ರೆ ಪುನೀತನಾಗ್ತಾನೆ ಈಶ್ವರ. ಹಾಗಾಗಿ ಬೋಲೇನಾಥನ ನಾಮ ಸ್ಮರಣೆ ಮಾಡುವುದು ಬಹಳ ಒಳ್ಳೆಯದು. ಯಾವದೇ ಕಷ್ಟ ಬಂದಾಗ ಈಶ್ವರನನ್ನು ಸ್ಮರಿಸಿ. ಬೆಳಿಗ್ಗೆ ಎದ್ದ ತಕ್ಷಣ ಈಶ್ವರನ ದರ್ಶನ ಮಾಡಿ ಇಲ್ಲವೆ ನಾಮ ಸ್ಮರಣೆ ಮಾಡಿ.
ಹೊಸ ಕಾರ್ಯ ಮಾಡಲು ಏಕಾದಶಿ ಒಳ್ಳೆಯ ದಿನ. ಸಾಧ್ಯವಾದ್ರೆ ಏಕಾದಶಿಯ ವೃತ ಮಾಡಿ. ಹಸಿದ ವ್ಯಕ್ತಿಗೆ ಏಕಾದಶಿಯ ದಿನ ಭೋಜನ ನೀಡಿ.
ತುಳಸಿ ವಿಷ್ಣುವಿನ ಸ್ವರೂಪವೆಂದು ಪರಿಗಣಿಸಲಾಗಿದೆ. ಯಾವ ವ್ಯಕ್ತಿ ತುಳಸಿಯ ಪೂಜೆಯನ್ನು ಭಯಭಕ್ತಿಯಿಂದ ಮಾಡ್ತಾನೋ ಆತನಿಗೆ ಯಶಸ್ಸು ಲಭಿಸುತ್ತದೆ. ಪ್ರತಿದಿನ ತುಳಸಿಗೆ ನೀರು ಹಾಕಿ ಪೂಜೆ ಮಾಡಬೇಕು.
ಹಿಂದು ಧರ್ಮದಲ್ಲಿ ಆಕಳನ್ನು ದೇವರೆಂದು ಪರಿಗಣಿಸಲಾಗಿದೆ. ಪ್ರತಿದಿನ ಮೊದಲ ರೊಟ್ಟಿಯನ್ನು ಆಕಳಿಗೆ ನೀಡಿ ನಂತರ ತಾನು ಆಹಾರ ಸೇವನೆ ಮಾಡುವ ವ್ಯಕ್ತಿಗೆ ಯಶಸ್ಸು ಹುಡುಕಿಕೊಂಡು ಬರುತ್ತದೆ.
ಮನೆಯಿಂದ ಹೊರ ಹೋಗುವಾಗ ಹಿರಿಯರ ಆಶೀರ್ವಾದ ಪಡೆದು ಹೊರಗೆ ಹೋಗುವುದು ಮಂಗಳಕರ.