ರಾತ್ರಿ ಸುಖವಾದ ನಿದ್ದೆಯೊಂದಿಗೆ ಹಿತವಾದ ಕನಸು ಕಾಣುವ ವೇಳೆ, ಕಾಲಿನಲ್ಲಿ ಅದೇನೋ ಸೆಳೆತ ಉಂಟಾಗುತ್ತದೆ. ಆ ನೋವು ಸಹಿಸಲಾಗದ್ದು. ಮನೆಯ ಸದಸ್ಯರೊಬ್ಬರು ಬಂದು ಮಸಾಜ್ ಮಾಡಿದ ಬಳಿಕವೇ ಈ ನೋವು ಕಡಿಮೆಯಾಗುವುದು.
ತುಂಬಾ ಹೊತ್ತು ನಿಂತು ಕೆಲಸ ಮಾಡುವವರಲ್ಲಿ, ವ್ಯಾಯಾಮ ಮಾಡದಿರುವವರಲ್ಲಿ ಅಥವಾ ಅತಿ ಹೆಚ್ಚು ಮಾಡುವವರಲ್ಲಿ, ಗರ್ಭಿಣಿಯರಲ್ಲಿ ಈ ಸಮಸ್ಯೆ ಕಾಡುವುದು ಸಹಜ.
ಪ್ರತಿನಿತ್ಯ ಮಲಗುವ ಮುನ್ನ ಕಾಲುಗಳಿಗೆ ತುಸುವೇ ತೆಂಗಿನೆಣ್ಣೆಯಿಂದ ಮಸಾಜ್ ಮಾಡಿಕೊಂಡರೆ ಸ್ನಾಯುಗಳ ನೋವು ಕಾಣಿಸಿಕೊಳ್ಳದು.
ಕಾಲುಗಳಿಗೆ ವಿಶ್ರಾಂತಿ ನೀಡಿ. ಹಿಮ್ಮಡಿಯಲ್ಲೇ ಹೆಚ್ಚು ನಡೆಯಿರಿ.
ಬಿಸಿನೀರಿಗೆ ಉಪ್ಪು ಹಾಕಿ ಅದರಲ್ಲಿ ಹತ್ತು ನಿಮಿಷಗಳ ಕಾಲ ನಿಮ್ಮ ಕಾಲನ್ನು ಅದ್ದಿಡಿ. ಇದರಿಂದ ನೋವು ಕಡಿಮೆಯಾಗುತ್ತದೆ.
ಮೆಗ್ನೀಷಿಯಂ ಪ್ರಮಾಣ ದೇಹಕ್ಕೆ ಹೆಚ್ಚು ಸೇರುವಂತೆ ಮಾಡಿ. ಕುಂಬಳಕಾಯಿ, ನೆಲಕಡಲೆಯನ್ನು ಆಹಾರದಲ್ಲಿ ಸೇವಿಸಿ.