ಸ್ವಲ್ಪ ಕೆಲಸ ಮಾಡಿದರೆ ಸಾಕು ಆಯಾಸವೆನಿಸುತ್ತದೆ. ಇದರಿಂದ ಹಿಡಿದ ಕೆಲಸವನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ ಎಂದು ಅನೇಕರು ಗೊಣಗುತ್ತಾರೆ.
ದೇಹಕ್ಕೆ ದಣಿವಾದಾಗ ಕೊಂಚ ವಿಶ್ರಾಂತಿ ಬೇಕೇ ಬೇಕು. ಯಾವುದೇ ಕೆಲಸ ಕಾರ್ಯಗಳಿರಲಿ, ಮೊದಲಿಗೆ ನೀವು ಅದನ್ನು ಪೂರ್ಣಗೊಳಿಸಲು ಸಾಧ್ಯವೇ ಎಂಬುದನ್ನು ಯೋಚಿಸಿ. ಒಂದೇ ಉಸಿರಿಗೆ ಕೆಲಸ ಮಾಡದೇ, ಹಂತ ಹಂತವಾಗಿ ಕೆಲಸ ಮಾಡಿ. ನಡುವೆ ಅಲ್ಪ ವಿರಾಮ ಸಿಕ್ಕರೆ, ಮತ್ತಷ್ಟು ಹೊಸ ಉತ್ಸಾಹದೊಂದಿಗೆ ನಿಮ್ಮ ಕೆಲಸವನ್ನು ಬೇಗನೆ ಪೂರ್ಣಗೊಳಿಸಬಹುದು.
ನಿಮಗೆ ವಹಿಸಲಾದ ಕೆಲಸದ ಬಗ್ಗೆ ಯೋಚಿಸಿ ಪ್ಲಾನ್ ಮಾಡಿಕೊಳ್ಳಿ. ಗೊತ್ತಿಲ್ಲದ ಕೆಲಸವನ್ನು ಒಪ್ಪಿಕೊಳ್ಳದಿರುವುದು ಒಳ್ಳೆಯದು. ಇಲ್ಲವಾದರೆ, ಬೇರೆಯವರು ತಮ್ಮ ಪಾಲಿನ ವರ್ಕ್ ಮುಗಿಸಿದರೂ, ನೀವು ಅರ್ಧದಲ್ಲೇ ಉಳಿಯಬೇಕಾಗುತ್ತದೆ.
Work is Worship ಎಂಬಂತೆ ನೀವು ಮಾಡಲಿರುವ ಕೆಲಸದ ಮೇಲೆ ಶ್ರದ್ಧೆ ಇರಲಿ. ಕೆಲಸವನ್ನು ಕೆಲಸದಂತೆ ಮಾಡದೇ ಇಷ್ಟಪಟ್ಟು ಸಂಭ್ರಮದಿಂದ ಮಾಡಿ. ಆಯಾಸವೇ ಕಾಣುವುದಿಲ್ಲ. ಹೊಸ ಚೈತನ್ಯ ನಿಮ್ಮದಾಗಿ ಬಹುಬೇಗನೇ ನಿಮ್ಮ ಕೆಲಸ ಪೂರ್ಣಗೊಳ್ಳುತ್ತದೆ.