ವಾಸ್ತು ಶಾಸ್ತ್ರ ನಮ್ಮ ಜೀವನದ ಮೇಲೆ ಮಹತ್ವದ ಬದಲಾವಣೆಯನ್ನುಂಟು ಮಾಡುತ್ತದೆ. ವಾಸ್ತು ದೋಷಗಳು ಮಾನಸಿಕ ಒತ್ತಡವನ್ನು ಹೆಚ್ಚು ಮಾಡುತ್ತವೆ. ಮಾನಸಿಕ ಒತ್ತಡ, ಮನೆ ಶಾಂತಿ, ನೆಮ್ಮದಿ ನಷ್ಟಕ್ಕೆ ಕಾರಣವಾಗುತ್ತದೆ. ನಮಗೆ ತಿಳಿಯದೆ ಆಗುವ ವಾಸ್ತು ದೋಷವನ್ನು ಕೆಲ ಉಪಾಯದ ಮೂಲಕ ಕಡಿಮೆ ಮಾಡಬಹುದು. ಮನೆಯಲ್ಲಿ ಸದಾ ಖುಷಿ ನೆಲೆಸಿರುವಂತೆ ಮಾಡಬಹುದು.
ವಾರದಲ್ಲಿ ಒಂದು ದಿನವಾದ್ರೂ ಮನೆಗೆ ಧೂಪದ ಹೊಗೆ ತೋರಿಸಿ. ಹೀಗೆ ಮಾಡುವುದ್ರಿಂದ ನಕಾರಾತ್ಮಕ ಶಕ್ತಿ ದೂರವಾಗುತ್ತದೆ. ಸಗಣಿ, ಕಹಿ ಬೇವು, ಕರ್ಪೂರದಿಂದ ಮಾಡಿದ ಧೂಪ ಬಹಳ ಒಳ್ಳೆಯದು.
ಮನೆಯ ಉತ್ತರ-ದಕ್ಷಿಣ ದಿಕ್ಕಿನಲ್ಲಿ ಓಡುತ್ತಿರುವ ಕುದುರೆ ಫೋಟೋ ಹಾಕಿ. ಇದ್ರಿಂದ ಮನೆಯಲ್ಲಿ ಆರ್ಥಿಕ ವೃದ್ಧಿಯಾಗಲಿದೆ. ಓಡುತ್ತಿರುವ ಕುದುರೆ ಶಕ್ತಿಯ ಸಂಕೇತ.
ಮನೆಯಲ್ಲಿ ಸಾಸಿವೆ ಎಣ್ಣೆಯ ದೀಪವನ್ನು ಹಚ್ಚಿ. ಹಾಗೆ ಲವಂಗದ ಹೊಗೆಯನ್ನು ಹಾಕಿ. ಇದು ಸಕಾರಾತ್ಮಕ ಪರಿಣಾಮ ಬೀರುತ್ತದೆ.
ಮನೆಯಲ್ಲಿರುವ ಹಾಳಾದ, ಮುರಿದ ವಸ್ತುಗಳನ್ನು ಹೊರಗೆ ಹಾಕಿ. ಮನೆಯ ಮುಂದೆ ತುಳಸಿ ಗಿಡವನ್ನಿಟ್ಟು ಸದಾ ಪೂಜೆ ಮಾಡಿ.