alex Certify ಕ್ಷಣಮಾತ್ರದಲ್ಲಿ ಒತ್ತಡ ನಿವಾರಿಸಲು ಹೀಗೆ ಮಾಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ಷಣಮಾತ್ರದಲ್ಲಿ ಒತ್ತಡ ನಿವಾರಿಸಲು ಹೀಗೆ ಮಾಡಿ

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಒತ್ತಡದಲ್ಲಿ ಬದುಕುತ್ತಿದ್ದಾರೆ. ಮನೆ, ಕಚೇರಿ ಕೆಲಸ ಹೀಗೆ ಎಲ್ಲದರಲ್ಲೂ ಒತ್ತಡ ಇದ್ದೇ ಇರುತ್ತದೆ. ಈ ಒತ್ತಡವನ್ನು ಕ್ಷಣಮಾತ್ರದಲ್ಲಿ ನಿವಾರಿಸಲು ಕೆಲವೊಂದು ಸುಲಭದ ತಂತ್ರಗಳಿವೆ, ಅವುಗಳ ಬಗ್ಗೆ ತಿಳಿಯೋಣ.

ಡಿಜಿಟಲ್‌ ಡಿಟಾಕ್ಸ್‌

ತೀವ್ರ ಒತ್ತಡ ಅನುಭವಿಸುತ್ತಿದ್ದರೆ ಡಿಜಿಟಲ್‌ ಡಿಟಾಕ್ಸ್‌ ಮಾಡಿಕೊಳ್ಳಬೇಕು. ಕನಿಷ್ಠ 10-15 ನಿಮಿಷಗಳ ಕಾಲ ಮೊಬೈಲ್‌ ಮತ್ತಿತರ ಸಾಧನಗಳಿಂದ ದೂರವಿರಿ. ಇದು ಒತ್ತಡವನ್ನು ಕಡಿಮೆ ಮಾಡುತ್ತದೆ. ಏಕೆಂದರೆ ಸಾಮಾಜಿಕ ಮಾಧ್ಯಮಗಳ ಹೊರತಾಗಿ ಏನನ್ನಾದರೂ ಮಾಡಲು ಇದು ನಿಮ್ಮನ್ನು ಪ್ರೇರೇಪಿಸುತ್ತದೆ.

ನೀರು ಕುಡಿಯಿರಿ

ಒತ್ತಡದಿಂದ ಬಳಲುತ್ತಿರುವ ಸಂದರ್ಭದಲ್ಲಿ ಸ್ವಲ್ಪ ನೀರು ಕುಡಿಯಿರಿ. ನಟ್ಸ್‌ ಹಾಗೂ ಹಣ್ಣುಗಳನ್ನು ಕೂಡ ಸೇವಿಸಬಹುದು. ದೇಹವನ್ನು ಹೈಡ್ರೇಟ್‌ ಆಗಿಡುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಕೂಡ ನಿಯಂತ್ರಣಕ್ಕೆ ಬರುತ್ತದೆ. ಇದರಿಂದ ಒತ್ತಡ ನಿವಾರಣೆಯಾಗುತ್ತದೆ. ಉತ್ತಮ ಪೋಷಣೆಯು ಆರೋಗ್ಯದ ಜೊತೆಗೆ ಮನಸ್ಥಿತಿಯನ್ನು ಸುಧಾರಿಸುತ್ತದೆ.

ಸಂಗೀತ ಆಲಿಸಿ

ಒತ್ತಡದಿಂದ ಮುಕ್ತಿ ಪಡೆಯಲು ಸಂಗೀತ ಬಹಳ ಉತ್ತಮವಾದ ಮಾರ್ಗ. ಒತ್ತಡದ ಸಂದರ್ಭದಲ್ಲಿ ಲಘು ಸಂಗೀತವನ್ನು ಆಲಿಸಿ. ಸಂಗೀತವು ಒತ್ತಡದ ಮಟ್ಟವನ್ನು ಕಡಿಮೆ ಮಾಡುತ್ತದೆ. ಸಂಗೀತ ನಮ್ಮ ಗಮನವನ್ನು ಬೇರೆಡೆಗೆ ತಿರುಗಿಸುತ್ತದೆ.

ಧ್ಯಾನ

ಧ್ಯಾನವು ಒತ್ತಡವನ್ನು ಕಡಿಮೆ ಮಾಡುವಲ್ಲಿ ಔಷಧದಂತೆ ಕಾರ್ಯನಿರ್ವಹಿಸುತ್ತದೆ. ಎಲ್ಲಾ ಆಲೋಚನೆಗಳನ್ನು ಬಿಟ್ಟು ಉಸಿರಾಟದ ಮೇಲೆ ಗಮನ ಕೇಂದ್ರೀಕರಿಸಿ. ಇದರಿಂದ ಒತ್ತಡ ಮುಕ್ತರಾಗಬಹುದು.

ವ್ಯಾಯಾಮ

ಜಾಗಿಂಗ್, ಸ್ಟ್ರೆಚಿಂಗ್ ಅಥವಾ ಯೋಗಾಸನ ಒತ್ತಡ ನಿವಾರಣೆಗೆ ಉತ್ತಮ ಮಾರ್ಗಗಳು. ದಿನಕ್ಕೆ ಕನಿಷ್ಠ 10 ರಿಂದ 15 ನಿಮಿಷಗಳ ಕಾಲ ಜಾಗಿಂಗ್, ಸ್ಟ್ರೆಚಿಂಗ್ ಅಥವಾ ಯೋಗಾಸನ ಮಾಡಿದರೆ ಒತ್ತಡದಿಂದ ಮುಕ್ತರಾಗಬಹುದು. ವ್ಯಾಯಾಮವು ಎಂಡಾರ್ಫಿನ್‌ಗಳನ್ನು ಬಿಡುಗಡೆ ಮಾಡುತ್ತದೆ, ಇದು ಮನಸ್ಥಿತಿಯನ್ನು ಸುಧಾರಿಸಲು ಮತ್ತು ಮೆದುಳನ್ನು ಸಕ್ರಿಯವಾಗಿರಿಸಲು ಸಹಾಯ ಮಾಡುತ್ತದೆ.

ವಾಕಿಂಗ್

ಒತ್ತಡವನ್ನು ಅನುಭವಿಸಿದಾಗ ವಾಕಿಂಗ್‌ ಮಾಡಿ. 10 ನಿಮಿಷಗಳ ಕಾಲ ನಡೆದರೂ ಸಾಕು, ಒತ್ತಡ ಕಡಿಮೆಯಾಗುತ್ತದೆ. ದೈಹಿಕ ಚಟುವಟಿಕೆಯೊಂದಿಗೆ ತಾಜಾ ಗಾಳಿ ಮತ್ತು ಪರಿಸರದಲ್ಲಿನ ಬದಲಾವಣೆಯು ಒತ್ತಡವನ್ನು ಕಡಿಮೆ ಮಾಡುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...