ನೀಳ ಉಗುರು ಬೆಳೆಸುವುದು ನಿಮ್ಮ ಬಹುದಿನಗಳ ಕನಸೇ, ಆದರೆ ಅದು ಕೈಗೂಡುತ್ತಿಲ್ಲವೇ. ಹೌದು ಹಲವು ಕಾರಣಗಳಿಗೆ ಉಗುರು ಅರ್ಧದಲ್ಲೇ ತುಂಡಾಗಬಹುದು. ಅದನ್ನು ತಪ್ಪಿಸಲು ಹೀಗೆ ಮಾಡಬಹುದು.
ದೇಹಕ್ಕೆ ಸಂಬಂಧಿಸಿದ ಹಲವು ಸೋಂಕುಗಳು ಉಗುರಿನ ಸಂದಿನಿಂದಲೇ ಬರುತ್ತವೆ ಎಂದು ಹೇಳಲಾಗುತ್ತದೆ. ಹಾಗಾಗಿ ಉಗುರನ್ನು ಸ್ವಚ್ಚವಾಗಿಟ್ಟುಕೊಳ್ಳುವುದು ಬಹಳ ಮುಖ್ಯ. ಹೆಚ್ಚು ನೀರು ಕುಡಿಯುವುದರಿಂದ ನಿಮ್ಮ ಉಗುರನ್ನು ಸದೃಢವಾಗಿ ಇಟ್ಟುಕೊಳ್ಳಬಹುದು.
ತೆಂಗಿನೆಣ್ಣೆಯಿಂದ ವಾರಕ್ಕೆರಡು ಬಾರಿ ನಿಮ್ಮ ಬೆರಳು ಹಾಗೂ ಉಗುರುಗಳಿಗೆ ಮಸಾಜ್ ಮಾಡಿ. ಇದರಿಂದ ಉಗುರು ಅರ್ಧಕ್ಕೆ ಸೀಳುವುದು ಮತ್ತು ಮುರಿಯುವುದು ತಪ್ಪುತ್ತದೆ. ಕೊಬ್ಬರಿ ಎಣ್ಣೆಯಿಂದ ಉಗುರು ಮೃದುವಾಗಿಯೂ ಆಕರ್ಷಕವಾಗಿಯೂ ಬೆಳೆಯುತ್ತದೆ.
ಬೆಚ್ಚಗಿನ ನೀರಿನಲ್ಲಿ ಒಂದು ತುಂಡು ನಿಂಬೆ ಹಣ್ಣನ್ನು ಬೆರೆಸಿ ನಿಮ್ಮ ಬೆರಳಿಗೆ ಮಸಾಜ್ ಮಾಡುವುದರಿಂದ ಉಗುರು ಹೊಳೆಯುತ್ತದೆ. ನಿಮ್ಮ ಉಗುರಿನ ಮೇಲಿನ ಹಳದಿ ಬಣ್ಣದ ಕಲೆಯನ್ನು ಇದು ಹೋಗಲಾಡಿಸುತ್ತದೆ. ಉಗುರಿನ ಸಂದಿನಲ್ಲಿರುವ ಕೊಳೆಯನ್ನು ದೂರಮಾಡುತ್ತದೆ.
ಆಲಿವ್ ಆಯಿಲ್ ನಲ್ಲಿ ನಿಮ್ಮ ಉಗುರುಗಳನ್ನು ಸ್ವಲ್ಪ ಹೊತ್ತು ನೆನೆಯಲು ಹಾಕುವುದರಿಂದಲೂ ನಿಮ್ಮ ಉಗುರಿನ ಮೇಲಿರುವ ಕಲೆಗಳು ದೂರವಾಗುತ್ತವೆ. ಉಗುರು ಸದೃಢವಾಗಿ ಉದ್ದವಾಗಿ ಬೆಳೆಯುತ್ತದೆ.