ಶ್ರಾವಣ ಮಾಸ ಶುರುವಾಗಿದೆ. ಶ್ರಾವಣ ಮಾಸದಲ್ಲಿ ಶಿವನ ಪೂಜೆ ಶ್ರೇಷ್ಠ. ಶ್ರಾವಣ ಮಾಸದಲ್ಲಿ ಈಶ್ವರನ ಪೂಜೆ ಮಾಡುವುದರಿಂದ ಜಾತಕದಲ್ಲಿರುವ ಎಲ್ಲ ಸಮಸ್ಯೆ ದೂರವಾಗುತ್ತದೆ ಎಂಬ ನಂಬಿಕೆ ಭಕ್ತರದ್ದು. ಶ್ರಾವಣ ಮಾಸದಲ್ಲಿ ಶಿವಪುರಾಣ ಹಾಗೂ ಶಿವ ಚಾಲೀಸ್ ಓದುವುದು ಬಹಳ ಒಳ್ಳೆಯದು.
ಶ್ರಾವಣ ಮಾಸದ ಸೋಮವಾರಕ್ಕೆ ಬಹಳ ಮಹತ್ವವಿದೆ. ಈ ದಿನ ಭಗವಂತ ಶಿವನಿಗೆ ವಿಶೇಷ ಪೂಜೆ, ಅರ್ಚನೆ ಮಾಡಲಾಗುತ್ತದೆ. ಶ್ರಾವಣ ಮಾಸ ಆರಂಭವಾಗ್ತಿದ್ದಂತೆ ಶಿವನ ದೇವಾಲಯದಲ್ಲಿ ವಿಶೇಷ ಪೂಜೆ, ಅರ್ಚನೆಗಳು ಶುರುವಾಗುತ್ತವೆ. ಶಿವಾಲಯಗಳಲ್ಲಿ ನೀರು, ಹಾಲು, ಪಂಚಾಮೃತದ ಅಭಿಷೇಕ ಮಾಡಲಾಗುತ್ತದೆ. ಭಕ್ತರು ಪೂಜೆ ವೇಳೆ ಶಿವನಿಗೆ ಬಿಲ್ವಪತ್ರೆ ಅರ್ಪಿಸುವುದು ಬಹಳ ಶ್ರೇಷ್ಠ.
ಶ್ರಾವಣ ಮಾಸದ ಸೋಮವಾರ ಹರ್ ಹರ್ ಮಹಾದೇವ್, ಬಂಬ್ ಬಂಬ್ ಭೋಲೇನಾಥ್ ಎಂದು ಶಿವನ ನಾಮಸ್ಮರಣೆ ಮಾಡಿದ್ರೆ ಎಲ್ಲ ಕಷ್ಟಗಳೂ ದೂರವಾಗುತ್ತವೆ. ಸೋಮವಾರ ಮಾಡುವ ವ್ರತ, ಉಪವಾಸ, ಪೂಜೆಯಿಂದ ವಿಶೇಷ ಫಲ ಪ್ರಾಪ್ತಿಯಾಗುತ್ತದೆ.
ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ನೀರಿಗೆ ಕರಿ ಎಳ್ಳನ್ನು ಹಾಕಿ ಸ್ನಾನ ಮಾಡಿ ನಂತ್ರ ವ್ರತ ಶುರು ಮಾಡಬೇಕು. ನೀರು, ಗಂಗಾಜಲದ ಜೊತೆಗೆ ಬೇಡಿಕೆಗನುಸಾರವಾಗಿ ಅಭಿಷೇಕ ಮಾಡಬೇಕು. ಮೊದಲ ಸೋಮವಾರದ ನಂತ್ರ 16 ಸೋಮವಾರ ವ್ರತ ಹಾಗೂ ಉಪವಾಸ ಮಾಡುವುದರಿಂದ ಈಶ್ವರನ ಕೃಪೆಗೆ ಪಾತ್ರರಾಗಬಹುದು.