ಕೆಲವೊಮ್ಮೆ ಓಡುವಾಗ, ನಡೆಯುವಾಗ ಕಾಲುಗಳು ಎಡವಿ ಪಾದದ ಮೂಳೆ ಮುರಿತಕ್ಕೊಳಗಾಗುತ್ತದೆ. ಇದರಿಂದ ನಡೆಯಲು ಕಷ್ಟವಾಗುತ್ತದೆ. ಆಗ ಪಾದಗಳಿಗೆ ರೆಸ್ಟ್ ನೀಡುವುದು ಅವಶ್ಯಕ. ಆದರೆ ಮುರಿತ ಸರಿಯಾದ ಬಳಿಕ ನಡೆಯುವಾಗ ತುಂಬಾ ಕಷ್ಟವಾಗುತ್ತದೆ, ಹಾಗಾಗಿ ನೀವು ಮೊದಲಿನಂತೆ ಸುಲಭವಾಗಿ ನಡೆಯಲು ಪಾದಗಳ ಈ ವ್ಯಾಯಾಮ ಮಾಡಿ.
ಮುರಿದ ಪಾದದ ನಮ್ಯತೆಯನ್ನು ಹೆಚ್ಚಿಸಲು ಟವೆಲ್ ಬಳಸಿ ವ್ಯಾಯಾಮ ಮಾಡುವುದು ಹೆಚ್ಚು ಪರಿಣಾಮಕಾರಿಯಾಗಿದೆ. ಈ ವ್ಯಾಯಾಮವು ಪಾದದ ಹಿಂಭಾಗದ ಮತ್ತು ಮುಂಭಾಗದ ಸ್ನಾಯುಗಳನ್ನು ವಿಸ್ತರಿಸುತ್ತದೆ. ಹಾಗಾಗಿ ನೇರವಾಗಿ ನೆಲದ ಮೇಲೆ ಕುಳಿತು ಟವೆಲ್ ಹಿಡಿದುಕೊಳ್ಳಿ. ನಿಮ್ಮ ಪೀಡಿತ ಪಾದದ ಟೋ ಸುತ್ತಲೂ ಟವೆಲ್ ಅನ್ನು ಕಟ್ಟಿಕೊಳ್ಳಿ. ನಿಮ್ಮ ಕೈಗಳು ನಿಮ್ಮ ಮೊಣಕಾಲುಗಳ ಮೇಲೆ ಇರುವ ರೀತಿಯಲ್ಲಿ ನಿಮ್ಮ ಎರಡೂ ಕೈಗಳಿಂದ ಟವೆಲ್ ನ ತುದಿಗಳನ್ನು ಹಿಡಿದುಕೊಳ್ಳಿ. ಟವೆಲ್ ಅನ್ನು ಸ್ವಲ್ಪ ಹಿಂದಕ್ಕೆ ಮತ್ತು ನಿಮ್ಮ ಪಾದವನ್ನು ಮುಂದಕ್ಕೆ ಎಳೆಯಿರಿ. ಸುಮಾರು 15-30 ಸೆಕೆಂಡುಗಳ ಕಾಲ ಈ ಸ್ಥಾನವನ್ನು ಹಿಡಿದುಕೊಳ್ಳಿ.
ಪಾದದ ಮುರಿತದ ಬಳಿಕ ಪಾದದ ಚಲನೆಯನ್ನು ಸುಧಾರಿಸಲು ಚಲನೆಯ ವ್ಯಾಯಾಮಗಳನ್ನು ಮಾಡಿ. ಇದರಲ್ಲಿ ಪಾದವನ್ನು ಒಳಗೆ, ಹೊರಗೆ ಚಲಿಸುವ ಮೂಲಕ ಪಾದಕ್ಕೆ ವ್ಯಾಯಾಮ ಮಾಡಲಾಗುತ್ತದೆ. ನೀವು ಕುರ್ಚಿಯ ಮೇಲೆ ಕುಳಿತು ನಿಮ್ಮ ಬೆನ್ನನ್ನು ನೇರವಾಗಿ ಇಟ್ಟುಕೊಳ್ಳಿ. ಮೊಣಕಾಲುಗಳನ್ನು ನೇರವಾಗಿಟ್ಟುಕೊಂಡು ಪಾದವನ್ನು ನಿಮ್ಮ ಮುಂದೆ ತನ್ನಿ. ಈಗ ನಿಮ್ಮ ಟೋ ಪೆನ್ ಎಂದು ಊಹಿಸಿ ಅದರಿಂದ ಚಿತ್ರ ಬಿಡಿಸುವ ರೀತಿಯಲ್ಲಿ ಹಿಂದಕ್ಕೆ ಮುಂದಕ್ಕೆ ಚಲಿಸುವಂತೆ ಮಾಡಿ.