ಕಂಪ್ಯೂಟರ್, ಮೊಬೈಲ್ ನ ಅತಿಯಾದ ಬಳಕೆಯಿಂದ ಕಣ್ಣಿನ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಇದರಿಂದ ಮುಂದೆ ಕಣ್ಣಿನ ದೃಷ್ಟಿ ಸಮಸ್ಯೆ ಕಾಡಬಹುದು. ಹಾಗಾಗಿ ಹೆಚ್ಚು ಹೊತ್ತು ಕೆಲಸ ಮಾಡಿ ಕಣ್ಣಿಗೆ ಆಯಾಸವಾಗಿದ್ದರೆ ಈ ವ್ಯಾಯಾಮಗಳನ್ನು ಮಾಡಿ.
*ಪಾಮಿಂಗ್ : ನಿಮ್ಮ ಕಣ್ಣುಗಳನ್ನು 15 ಸೆಕೆಂಡುಗಳ ಕಾಲ ನಿಧಾನವಾಗಿ ಒಟ್ಟಿಗೆ ಉಜ್ಜಿದಾಗ ಅವು ಬೆಚ್ಚಗಿರುತ್ತದೆ ಮತ್ತು ಶಕ್ತಿಯುತವಾಗುತ್ತವೆ. ಬೆರಳುಗಳನ್ನು ನಿಮ್ಮ ಹಣೆಯ ಮೇಲಿಟ್ಟು ಕೈಗಳಿಂದ ಕಣ್ಣುಗಳನ್ನು ಮುಚ್ಚಿ. ಅಂಗೈಯನ್ನು ಟೊಳ್ಳಾಗಿಸಿ ಕಣ್ಣುಗುಡ್ಡೆಗಳನ್ನು ನೇರವಾಗಿ ಸ್ಪರ್ಶಿಸದಂತೆ ತಡೆಯಿರಿ. ಕಣ್ಣಿನ ಮುಂದೆ ಕಪ್ಪು ಪರದೆಯನ್ನು ರಚಿಸಿ ಕೈಗಳಿಂದ ನಿಧಾನವಾಗಿ ಉಜ್ಜಿ. ಇದನ್ನು 5 ನಿಮಿಷಗಳ ಕಾಲ ಮಾಡಿ.
*ಐ ರೋಲಿಂಗ್ : ನೇರವಾಗಿ ಕುಳಿತುಕೊಳ್ಳಿ. ನಿಮ್ಮ ದೃಷ್ಟಿ ಮೃದುಗೊಳಿಸಿ ಮತ್ತು ಕಣ್ಣು ಹಾಗೂ ಮುಖದ ಸ್ನಾಯುಗಳನ್ನು ಸಡಿಲಗೊಳಿಸಿ ತಲೆಯನ್ನು ಅಲುಗಾಡದಂತೆ ಕೇಂದ್ರಿಕರಿಸಿ. ನಿಮ್ಮ ದೃಷ್ಟಿಯನ್ನು ವೃತ್ತಾಕಾರದ ಪ್ರದಕ್ಷಿಣಾಕಾರದಲ್ಲಿ ಚಲಿಸುವಂತೆ ಮಾಡಿ. ಇದನ್ನು ಮೂರು ಬಾರಿ ಮಾಡಿ. ಬಳಿಕ ಕಣ್ಣು ಮುಚ್ಚಿ ವಿಶ್ರಾಂತಿ ಮಾಡಿ. ಬಳಿಕ ಅಪ್ರದಕ್ಷಿಣಾಕಾರದಲ್ಲಿ ಮತ್ತೆ ಮಾಡಿ.
*ಪೋಕಸ್ ಶಿಫ್ಟಿಂಗ್ : ನಿಮ್ಮ ದೇಹವನ್ನು ಶಾಂತವಾಗಿರಿಸಿ. ನಿಮ್ಮ ಮುಂದೆ ತೋಳುಗಳನ್ನು ಚಾಚಿ ಮುಷ್ಟಿಯನ್ನು ಸಡಿಲಗೊಳಿಸಿ ನಿಮ್ಮ ಹೆಬ್ಬೆರಳನ್ನು ಮೇಲಕ್ಕೆತ್ತಿ. ನಿಮ್ಮ ಬೆರಳಿನ ಮೇಲೆ ನೋಟವನ್ನು ಕೇಂದ್ರೀಕರಿಸಿ. ನಿಧಾನವಾಗಿ ನಿಮ್ಮ ಹೆಬ್ಬೆರಳನ್ನು ಮೂಗಿನ ಬಳಿ ತನ್ನಿ. ನಿಧಾನವಾಗಿ ಉಸಿರಾಡಿ. ಬಳಿಕ ಹೆಬ್ಬೆರಳನ್ನು ನಿಧಾನ ವಾಗಿ ಹಿಂದೆ ತನ್ನಿ. ಇದನ್ನು 10 ಬಾರಿ ಪುನರಾವರ್ತಿಸಿ.