alex Certify ‘ಸಂಗಾತಿ’ ಪ್ರೀತಿ ಉಳಿಸಿಕೊಳ್ಳಲು ಪ್ರತಿ ರಾತ್ರಿ ಮಾಡಿ ಈ ಕೆಲಸ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಸಂಗಾತಿ’ ಪ್ರೀತಿ ಉಳಿಸಿಕೊಳ್ಳಲು ಪ್ರತಿ ರಾತ್ರಿ ಮಾಡಿ ಈ ಕೆಲಸ

ಜಗತ್ತು ಸಮಯದ ಹಿಂದೆ ಓಡ್ತಿದೆ. ಕೆಲಸದ ಒತ್ತಡ ಪ್ರತಿಯೊಬ್ಬರನ್ನೂ ಹೈರಾಣ ಮಾಡಿದೆ. ದಾಂಪತ್ಯದಲ್ಲಿ ರುಚಿ ಕಳೆದು ಹೋಗಲೂ ಇದೇ ಕಾರಣವಾಗಿದೆ. ಆರಂಭದಲ್ಲಿ ಸಾಮಾನ್ಯ ಎನಿಸಿದ್ರೂ ಬರ್ತಾ ಬರ್ತಾ ಸಮಯದ ಅಭಾವ ದಂಪತಿಯನ್ನು ದೂರ ಮಾಡುತ್ತದೆ. ನಿಮ್ಮ ದಾಂಪತ್ಯದಲ್ಲೂ ಈ ದೂರ, ಪ್ರೀತಿ ಅಭಾವ ಕಾಣುತ್ತಿದ್ದರೆ ರಾತ್ರಿ ಅವಶ್ಯವಾಗಿ ಇದನ್ನು ಮಾಡಿ.

ರಾತ್ರಿ ಊಟ : ಇಡೀ ದಿನ ಇಬ್ಬರು ಬ್ಯುಸಿ ಇರ್ತೀರಾ ಎಂದಾದ್ರೆ ಆದಷ್ಟು ರಾತ್ರಿ ಇಬ್ಬರೂ ಒಟ್ಟಿಗೆ ಊಟ ಮಾಡಲು ಸಮಯ ಹೊಂದಿಸಿಕೊಳ್ಳಿ. ಎಲ್ಲ ಕೆಲಸ ಮುಗಿಸಿ ಒಂದಾಗಿ ಕುಳಿತು ಊಟ ಮಾಡಿ. ಈ ಸಮಯದಲ್ಲಿ ನಿಮ್ಮ ಭಾವನೆಗಳನ್ನು ಹಂಚಿಕೊಳ್ಳಬಹುದು.

ಪ್ರೀತಿಯ ಮಾತು : ಎಷ್ಟೇ ಒತ್ತಡದಲ್ಲಿದ್ದರೂ ರಾತ್ರಿ ಸಂಗಾತಿ ಜೊತೆ ಪ್ರೀತಿಯ ಮಾತುಗಳನ್ನಾಡಿ. ಪ್ರೀತಿಯ ಮಾತಿಗೆ ದೊಡ್ಡ ದೊಡ್ಡ ಸಮಸ್ಯೆಯನ್ನೂ ಕ್ಷಣದಲ್ಲಿ ಬಗೆಹರಿಸುವ ಶಕ್ತಿಯಿದೆ.

ಪ್ರೀತಿ ವ್ಯಕ್ತಪಡಿಸಿ : ಮನಸ್ಸಿನಲ್ಲಿ ಎಷ್ಟೇ ಪ್ರೀತಿಯಿರಲಿ ಅದನ್ನು ಹೇಳಿಕೊಂಡರೆ, ತೋರಿಸಿಕೊಂಡರೆ ಮಾತ್ರ ಸಂಗಾತಿಗೆ ತಿಳಿಯುತ್ತದೆ. ಹಾಗಾಗಿ ನಿಮಗೆ ನಿಮ್ಮ ಸಂಗಾತಿ ಎಷ್ಟು ಮುಖ್ಯ. ಅವರನ್ನು ನೀವು ಎಷ್ಟು ಪ್ರೀತಿ ಮಾಡ್ತೀರಾ ಎಂಬುದನ್ನು ಮಾತಿನ ಮೂಲಕವೊಂದೇ ಅಲ್ಲ ನಿಮ್ಮ ಕೈರುಚಿಯಿಂದಲೂ ತೋರಿಸಬಹುದು.

ಐ ಲವ್ ಯೂ : ಇದು ಕೇವಲ ಶಬ್ಧವಲ್ಲ. ಎರಡು ಮನಸ್ಸುಗಳನ್ನು ಬೆಸೆಯುವಂತಹದ್ದು. ಇದನ್ನು ಹೇಳಲು ರಾತ್ರಿ ಬೇಕಾಗಿಲ್ಲ. ಸಮಯ ಸಿಕ್ಕಾಗ ಒಂದು ಸಂದೇಶವನ್ನು ಕೂಡ ರವಾನೆ ಮಾಡಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...