ಹಣದ ಸಮಸ್ಯೆಯಿಂದ ಮುಕ್ತಿ ಪಡೆಯಲು ಎಲ್ಲರೂ ಕಸರತ್ತು ಮಾಡ್ತಾರೆ. ಮನೆಯಲ್ಲಿ ಆರ್ಥಿಕ ವೃದ್ಧಿಯಾಗಬೇಕಾದ್ರೆ ತುಂಬಾ ಕಷ್ಟಪಡಬೇಕಾಗಿಲ್ಲ. ದಿನನಿತ್ಯದ ಕೆಲವೊಂದು ಕೆಲಸಗಳ ಬಗ್ಗೆ ಗಮನ ನೀಡಿದ್ರೆ ಸಾಕು. ಎಂದೂ ಬಡತನ ನಿಮ್ಮನ್ನು ಕಾಡುವುದಿಲ್ಲ.
ಒಂದು ಗ್ಲಾಸ್ ನಲ್ಲಿ ಉಪ್ಪನ್ನು ಹಾಕಿ ಮನೆಯ ಪ್ರತಿಯೊಂದು ರೂಮಿನಲ್ಲಿ ಇಡಿ. ಪ್ರತಿ ತಿಂಗಳು ನಿಯಮಿತವಾಗಿ ಇದನ್ನು ಬದಲಾಯಿಸಿ.
ಸಂಜೆ ನಿಯಮಿತವಾಗಿ ತುಳಸಿ ಗಿಡದ ಬಳಿ ಆಕಳ ತುಪ್ಪದ ದೀಪವನ್ನು ಹಚ್ಚಿ. ಹೀಗೆ ಮಾಡಿದ್ರೆ ನಕಾರಾತ್ಮಕ ಶಕ್ತಿ ದೂರವಾಗಿ ಬಡತನ ಕಾಡುವುದಿಲ್ಲ.
ಮನೆಯ ಹೊರ ಭಾಗವನ್ನು ಸದಾ ಸ್ವಚ್ಛವಾಗಿಡಿ. ಹಾಳಾದ ವಸ್ತು, ಕಸವನ್ನು ಎಸೆಯಿರಿ.
ಹಾಸಿಗೆ, ವಸ್ತ್ರಗಳನ್ನು ಕಂಡ ಕಂಡಲ್ಲಿ ಎಸೆಯಬಾರದು. ಸ್ವಚ್ಛವಾಗಿ ಹಾಗೂ ಸುಂದರವಾಗಿಡಬೇಕು.
ಹಾಳಾದ ಪೊರಕೆ ತುಂಬಾ ಸಮಯ ಮನೆಯಲ್ಲಿದ್ದರೆ ಬಡತನ ಆವರಿಸುತ್ತದೆ.
ಉತ್ತರ ಭಾಗಕ್ಕೆ ತಲೆಯಿಟ್ಟು ಮಲಗಬೇಡಿ. ಎಂದೂ ದಕ್ಷಿಣ ದಿಕ್ಕಿಗೆ ತಲೆಯಿಟ್ಟು ಮಲಗಿ.