ದೇಹ ತೂಕ ಕಡಿಮೆ ಮಾಡಿಕೊಳ್ಳಲು ವ್ಯಾಯಾಮ ಅಥವಾ ದೇಹದಂಡನೆ ಅನಿವಾರ್ಯ. ಅದರ ಹೊರತಾಗಿ ನೀವು ಸೇವಿಸುವ ಆಹಾರದಲ್ಲಿ ಇವುಗಳನ್ನು ಸೇರಿಸಿಕೊಂಡರೆ ಸಹಜವಾಗಿಯೇ ದೇಹದ ಕೊಬ್ಬು ಕರಗುತ್ತದೆ.
ಬೆಳಿಗ್ಗೆ ಎದ್ದಾಕ್ಷಣ ಬಿಸಿನೀರಿಗೆ ನಿಂಬೆರಸ ಹಾಗೂ ಜೇನುತುಪ್ಪ ಹಾಕಿ ಕುಡಿಯುವುದರಿಂದ ದೇಹದ ಅನಾವಶ್ಯಕ ಕೊಬ್ಬು ಕಡಿಮೆಯಾಗಿ ಕಲ್ಮಶಗಳು ದೇಹದಿಂದ ಹೊರಹೋಗುತ್ತದೆ.
ಇದೇ ಪ್ರಭಾವವನ್ನು ಬೀರುವ ಇನ್ನೊಂದು ಪಾನೀಯವೆಂದರೆ ಆಪಲ್ ಸೈಡರ್ ವಿನೆಗರ್. ಇದರಲ್ಲಿ ವಿಟಮಿನ್ ಸಿ ಮತ್ತು ಆಂಟಿ ಆಕ್ಸಿಡೆಂಟ್ ಗಳು ಹೇರಳವಾಗಿವೆ. ಇವು ಮಧುಮೇಹವನ್ನೂ ನಿಯಂತ್ರಿಸುತ್ತದೆ. ದೇಹತೂಕ ಕಡಿಮೆ ಮಾಡಲು. ಪಿಸಿಓಡಿ ಸಮಸ್ಯೆಗೆ ಮುಕ್ತಿ ಹಾಡಲು ಇದು ಒಳ್ಳೆಯದು.
ಈ ಎರಡು ಪಾನೀಯಗಳ ಪೈಕಿ ಒಂದನ್ನು ಕುಡಿದು ಹದಿನೈದು ನಿಮಿಷದ ಬಳಿಕ ವ್ಯಾಯಾಮ ಮಾಡುವುದರಿಂದ ದೇಹ ಚೆನ್ನಾಗಿ ಬೆವರುವುದು ಮಾತ್ರವಲ್ಲ, ದೇಹದ ಅನಗತ್ಯ ಅಂಶಗಳೂ ದೂರವಾಗುತ್ತದೆ. ಹಣ್ಣುಗಳನ್ನು ಅದರಲ್ಲು ತಾಜಾ ಹಣ್ಣುಗಳನ್ನು ಸೇವಿಸುವುದರಿಂದ ಹೆಚ್ಚು ಹೊತ್ತು ನಿಮಗೆ ಹಸಿವಾಗದು. ಕಡಿಮೆ ಕ್ಯಾಲೊರಿ ಹೊಂದಿರುವ ಹಣ್ಣುಗಳು ದೇಹ ತೂಕ ಇಳಿಸಲು ನೆರವಾಗುತ್ತವೆ.