ಯಂಗ್ ಆಗಿ ಕಾಣ್ಬೇಕೆಂದು ಎಲ್ಲರೂ ಬಯಸ್ತಾರೆ. ಆದ್ರೆ ಅದಕ್ಕೆ ಹೆಚ್ಚಿನ ಸಮಯ ನೀಡಲು ಸಾಧ್ಯವಾಗ್ತಿಲ್ಲ. ಫಿಟ್ನೆಸ್ ಮೆಂಟೇನ್ ಮಾಡಲು ಸಮಯವಿಲ್ಲದ ಜನರು ಬ್ಯೂಟಿಪಾರ್ಲರ್ ಗೆ ಹೋಗಿ ಬಣ್ಣ ಬಳಿದುಕೊಂಡು ಬರ್ತಾರೆ. ಸಮಯವಿಲ್ಲ ನಿಜ. ಆದ್ರೆ ದಿನದಲ್ಲಿ ಮೂರು ನಿಮಿಷ ನಿಮಗಾಗಿ ಸಮಯ ಹೊಂದಿಸಿಕೊಳ್ಳಿ. ರಾತ್ರಿ ಮಲಗುವ ಮೊದಲು ಸಣ್ಣ ವ್ಯಾಯಾಮ ಮಾಡಿ ನಿಮ್ಮ ಮುಖದ ಸೌಂದರ್ಯ ಕಾಪಾಡಿಕೊಳ್ಳಿ. ಸರಳವಾಗಿ ಮುಖದ ವ್ಯಾಯಾಮ ಮಾಡುವುದು ಹೇಗೆ ಎಂಬುದನ್ನು ಹೇಳ್ತೇವೆ.
ಕಣ್ಣುಗಳು ಮುಖದ ಮುಖ್ಯ ಅಂಗ. ಕಣ್ಣಿನ ಸುತ್ತ ಕಪ್ಪು ಕಲೆಯಾಗಿದ್ದರೆ ಮುಖದ ಅಂದವನ್ನು ಇದು ಹಾಳು ಮಾಡುತ್ತದೆ. ಹಾಗಾಗಿ ರಾತ್ರಿ ಮಲಗುವ ಮೊದಲು ಕಣ್ಣಿನ ಸುತ್ತ ಹಾಲಿನ ಕೆನೆಯನ್ನು ಹಾಕಿ, ನಿಧಾನವಾಗಿ ಮಸಾಜ್ ಮಾಡಿ. ದಣಿದ ಕಣ್ಣುಗಳಿಗೆ ಇವು ವಿಶ್ರಾಂತಿ ನೀಡುತ್ತವೆ. ಕಣ್ಣಿನಲ್ಲಿ ಹೊಳಪು ಮೂಡುತ್ತದೆ.
ಒಂದೇ ಸಮನೆ ಕೆಲಸ ಮಾಡಿ ಇಡೀ ದೇಹವೇ ದಣಿದಿರುತ್ತದೆ ನಿಜ. ಅದ್ರ ಜೊತೆಗೆ ಕುತ್ತಿಗೆ ಕೂಡ ಆಯಾಸಗೊಂಡಿರುತ್ತದೆ. ರಾತ್ರಿ ಮಲಗುವ ಮೊದಲು ಕುತ್ತಿಗೆಯನ್ನು ನಿಧಾನವಾಗಿ ಮಸಾಜ್ ಮಾಡಿ. ಪ್ರತಿ ದಿನ 30 ಸೆಕೆಂಡುಗಳ ಕಾಲ ಕುತ್ತಿಗೆ ಮಸಾಜ್ ಮಾಡುತ್ತ ಬಂದರೆ ಪರಿಣಾಮ ಶೀಘ್ರವೇ ಗೋಚರವಾಗುತ್ತದೆ.
ಬಾಯಿ ಕೂಡ ಮುಖ್ಯ ಅಂಗ. ರಾತ್ರಿ ಮಲಗುವ ಮುನ್ನ ಬಾಯಿಯ ಸುತ್ತ ಹಾಲಿನ ಕೆನೆ ಹಚ್ಚಿ, ನಿಧಾನವಾಗಿ ಮಸಾಜ್ ಮಾಡಿ.