alex Certify ʼಮಕ್ಕಳುʼ ಶಾಲೆಯಿಂದ ಬರ್ತಿದ್ದಂತೆ ಈ ಕೆಲಸ ಮಾಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಮಕ್ಕಳುʼ ಶಾಲೆಯಿಂದ ಬರ್ತಿದ್ದಂತೆ ಈ ಕೆಲಸ ಮಾಡಿ

ಮಕ್ಕಳು ಶಾಲೆಯಿಂದ ಮನೆಗೆ ಬರ್ತಿದ್ದಂತೆ ಮಕ್ಕಳ ಜೊತೆ ಪಾಲಕರು ಅತ್ಯಗತ್ಯವಾಗಿ ಮಾತನಾಡಬೇಕು. ಮಕ್ಕಳು ಹೇಳಿದ್ದೆಲ್ಲವನ್ನೂ ತಾಳ್ಮೆಯಿಂದ ಕೇಳುವ ಜೊತೆ ಕೆಲವೊಂದು ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆಯುವ ಪ್ರಯತ್ನ ನಡೆಸಬೇಕು. ಇದು ಮಕ್ಕಳು-ಪಾಲಕರನ್ನು ಮತ್ತಷ್ಟು ಹತ್ತಿರ ತರುವ ಜೊತೆಗೆ ಅಹಿತಕರ ಘಟನೆ ನಡೆಯದಂತೆ ತಡೆಯುತ್ತದೆ.

ಕ್ಲಾಸ್ ನಲ್ಲಿ ನಡೆದ ಅಭ್ಯಾಸದಿಂದ ಹಿಡಿದು ಕ್ಲಾಸ್ ರೂಂ ಹೊರಗೆ ನಡೆದ ಫೈಟ್ ವರೆಗೆ, ವಾಶ್ ರೂಂನಿಂದ ಲೈಬ್ರರಿವರೆಗೆ ಮಕ್ಕಳು ಶಾಲೆಯಲ್ಲಿ ಮಾಡಿದ ಎಲ್ಲ ಕೆಲಸಗಳ ಬಗ್ಗೆ ಅವಶ್ಯವಾಗಿ ತಿಳಿಯಬೇಕು. ಪಾಲಕರು ಕೆಲಸಕ್ಕೆ ಹೋಗುವವರಾಗಿದ್ದರೆ ಸಂಜೆ ಬಂದ ನಂತ್ರ ಸ್ವಲ್ಪಹೊತ್ತು ಮಕ್ಕಳ ಜೊತೆ ಕಳೆಯಬೇಕು. ತಂದೆ-ತಾಯಿಯೊಂದೇ ಅಲ್ಲ ಮನೆಯ ಇತರೆ ಸದಸ್ಯರು ಕೂಡ ಮಕ್ಕಳ ಶಾಲೆಯ ಬಗ್ಗೆ ವಿಚಾರಿಸಬಹುದು.

ಮಕ್ಕಳನ್ನು ಬೆದರಿಸಿ ಕೇಳಿದ್ರೆ ಯಾವುದೇ ಉತ್ತರ ನಿಮಗೆ ಸಿಗೋದಿಲ್ಲ. ಮಕ್ಕಳ ಜೊತೆ ಪ್ರೀತಿಯಿಂದ ಆಟವಾಡ್ತಾ, ತಮಾಷೆ ಮಾಡ್ತಾ ಎಲ್ಲ ವಿಷ್ಯವನ್ನು ಕೇಳಬೇಕಾಗುತ್ತದೆ. ಸಾಮಾನ್ಯವಾಗಿ ಶಾಲೆಯಲ್ಲಿ ನಡೆದ ಅನೇಕ ವಿಷ್ಯಗಳನ್ನು ಮಕ್ಕಳು ಮುಚ್ಚಿಡುತ್ತಾರೆ. ಪಾಲಕರು ಬೈತಾರೆ ಎನ್ನುವ ಭಯಕ್ಕೆ ಅವರು ಮುಚ್ಚಿಡುತ್ತಾರೆ.

ಪಾಲಕರು ಪ್ರೀತಿಯಿಂದ ಸ್ನೇಹಿತರಂತೆ ಕೇಳಿದಾಗ ಅವರು ನಡೆದ ಎಲ್ಲ ಘಟನೆಗಳನ್ನು ಹೇಳ್ತಾರೆ. ಪ್ರತಿದಿನ ಶಾಲೆಯಲ್ಲಿ ನಡೆದ ವಿಷ್ಯಗಳನ್ನು ಮಕ್ಕಳಿಂದ ತಿಳಿದುಕೊಂಡಲ್ಲಿ ಸಾಕಷ್ಟು ಪ್ರಯೋಜನಗಳಿವೆ. ಮಕ್ಕಳ ಸಾಮಾಜಿಕ ವಿಕಾಸದ ಜೊತೆ ರಕ್ಷಣೆಗೂ ನೆರವಾಗುತ್ತದೆ. ಮಕ್ಕಳ ವಿಷ್ಯದಲ್ಲಿ ಪಾಲಕರು ಸೆನ್ಸಿಟಿವ್ ಆಗಿರುತ್ತಾರೆ. ಆದ್ರೆ ಮಕ್ಕಳ ಶಿಕ್ಷಣ, ಪರೀಕ್ಷೆ, ಓದು, ಮಾರ್ಕ್ಸ್ ಈ ವಿಚಾರವನ್ನು ಮಾತ್ರ ಮಕ್ಕಳ ಜೊತೆ ಮಾತನಾಡ್ತಾರೆ. ಮಾರ್ಕ್ಸ್ ಹಿಂದೆ ಪಾಲಕರು ಬಿದ್ದಾಗ ಮಕ್ಕಳು ಒತ್ತಡಕ್ಕೊಳಗಾಗುವ ಸಾಧ್ಯತೆ ಹೆಚ್ಚಿರುತ್ತದೆ.

ಶಾಲೆಯಲ್ಲಿ ನಡೆದ ಉಳಿದ ವಿಷ್ಯಗಳನ್ನು ಮುಚ್ಚಿಟ್ಟು ಮಾರ್ಕ್ಸ್ ಬಗ್ಗೆ ಮಾತ್ರ ಮಾತನಾಡಲು ಶುರುಮಾಡ್ತಾರೆ. ಮಕ್ಕಳು ಶಾಲೆಯಲ್ಲಿ ಏನೆಲ್ಲ ಮಾಡಿದ್ರು? ಯಾರ ಜೊತೆ ಹೊರಗೆ ಮಾತನಾಡಿದ್ರು? ಯಾರ ಜೊತೆ ವಾಶ್ ರೂಂಗೆ ಹೋಗಿದ್ದರು? ಶಿಕ್ಷಕರನ್ನು ಹೊರತುಪಡಿಸಿ ಯಾವ ಸಿಬ್ಬಂದಿ ಅವರ ಜೊತೆ ಮಾತನಾಡಿದ್ರು? ಸಹಪಾಠಿಗಳು ಅಥವಾ ಮುಂದಿನ ಕ್ಲಾಸ್ ವಿದ್ಯಾರ್ಥಿಗಳ ಜೊತೆ ಇವರ ವ್ಯವಹಾರ ಹೇಗಿದೆ? ಈ ಎಲ್ಲ ಪ್ರಶ್ನೆಗಳಿಗೆ ಪಾಲಕರು ಪ್ರತಿದಿನ ಉತ್ತರ ಪಡೆಯಬೇಕು.

ಸದ್ಯ ಶಾಲೆಗಳಲ್ಲಿ ಅಪರಾಧ ಪ್ರಕರಣ ಹೆಚ್ಚಾಗ್ತಿದೆ. ವಿದ್ಯಾರ್ಥಿಗಳಿಂದ ಹಿಡಿದು ಕೆಲ ಶಿಕ್ಷಕರು, ಸಿಬ್ಬಂದಿ ಕೂಡ ದಾರಿ ತಪ್ಪುತ್ತಿದ್ದಾರೆ. ಘಟನೆ ನಡೆದ ನಂತ್ರ ಪಶ್ಚಾತಾಪ ಪಡುವುದಕ್ಕಿಂತ ಮೊದಲಿನಿಂದಲೇ ಮಕ್ಕಳ ಮೇಲೆ ಗಮನವಿದ್ದರೆ ಮುಂದಾಗುವ ಅಪಾಯವನ್ನು ತಪ್ಪಿಸಬಹುದಾಗಿದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...