ಮದುವೆ, ಹಾಗೂ ಇನ್ನಿತರ ಸಮಾರಂಭಕ್ಕೆ ಹೋದಾಗ ನಿಮಗಿಷ್ಟವಾದ ಆಹಾರವನ್ನು ಅತಿಯಾಗಿ ಸೇವಿಸುತ್ತೀರಿ. ಇದರಿಂದ ನಿಮ್ಮ ತೂಕ ಹೆಚ್ಚಾಗಬಹುದೆಂಬ ಭಯ ಕಾಡುತ್ತದೆ. ಆದರೆ ಫಿಟ್ ನೆಸ್ ಬಗ್ಗೆ ಚಿಂತೆ ಇರುವವರು ಅತಿಯಾಗಿ ಆಹಾರ ಸೇವಿಸಿದ ಬಳಿಕ ಈ ನಿಯಮ ಪಾಲಿಸಿ.
*ಅತಿಯಾಗಿ ಆಹಾರ ಸೇವಿಸಿದ್ದರಿಂದ ತೂಕ ಹೆಚ್ಚಾಗುತ್ತದೆ ಎಂದು ಹೆಚ್ಚು ಚಿಂತಿಸಬೇಡಿ. ಒತ್ತಡಕ್ಕೆ ಒಳಗಾಗಬೇಡಿ. ಇದರಿಂದ ನಿಮ್ಮ ತೂಕ ಮತ್ತಷ್ಟು ಹೆಚ್ಚಾಗಬಹುದು. ಹಾಗಾಗಿ ಒತ್ತಡಕ್ಕೆ ಒಳಗಾಗದೆ ಸಕರಾತ್ಮಕವಾಗಿ ಯೋಚಿಸಿ.
*ಪಾರ್ಟಿಯಲ್ಲಿ ಇಷ್ಟಪಟ್ಟ ಆಹಾರ ಸೇವಿಸಿದ ಬಳಿಕ ಲಘ ವ್ಯಾಯಾಮ ಮಾಡಿ. ಓಟ, ವಾಕಿಂಗ್ ಇತ್ಯಾದಿ ಮಾಡಬಹುದು. ಇದರಿಂದ ನಿಮ್ಮ ಒತ್ತಡವು ಕಡಿಮೆಯಾಗುತ್ತದೆ, ತೂಕ ಹೆಚ್ಚಾಗುವುದನ್ನು ನಿಯಂತ್ರಿಸಬಹುದು.
*ಪಾರ್ಟಿಯಲ್ಲಿ ತಿಂದ ಮರುದಿನ ಅತಿ ಹೆಚ್ಚು ನೀರನ್ನು ಸೇವಿಸಿ. ಎಳನೀರು, ಜೀರಿಗೆ ಕಷಾಯ ಮುಂತಾದವುಗಳನ್ನು ಸೇವಿಸಿ. ಇದರಿಂದ ದೇಹದಲ್ಲಿ ಸೇರಿಕೊಂಡ ಕೊಬ್ಬು ಕರಗುತ್ತದೆ.
*ಹೆಚ್ಚು ಫೈಬರ್ ಯುಕ್ತ ಆಹಾರ ಸೇವಿಸಿ. ಇದು ನಿಮ್ಮ ಹೊಟ್ಟೆಯಲ್ಲಿ ಉತ್ತಮ ಬ್ಯಾಕ್ಟೀರಿಯಾವನ್ನು ಉತ್ಪಾದಿಸುತ್ತದೆ. ಕರುಳಿನಲ್ಲಿ ಸೇರಿಕೊಂಡ ಅನಗತ್ಯ ವಸ್ತುಗಳನ್ನು ಹೊರಹಾಕುತ್ತದೆ.