ಉತ್ತಮವಾದ ಅಭ್ಯಾಸಗಳು ನಮ್ಮ ಆರೋಗ್ಯವನ್ನು ಉತ್ತಮವಾಗಿಸುತ್ತದೆ. ಇಲ್ಲವಾದರೆ ಅನಾರೋಗ್ಯಕ್ಕೆ ಗುರಿಯಾಗುತ್ತೀರಿ. ಹಾಗಾಗಿ ನೀವು ಆರೋಗ್ಯವಾಗಿರಲು ರಾತ್ರಿ ಊಟವಾದ ಬಳಿಕ ಈ ಅಭ್ಯಾಸಗಳನ್ನು ಬೆಳೆಸಿಕೊಳ್ಳಿ.
*ಊಟವಾದ ಬಳಿಕ ಹಲ್ಲುಜ್ಜಿ. ಇದರಿಂದ ಹಲ್ಲಿನ ಸಮಸ್ಯೆ ಕಾಡುವುದಿಲ್ಲ. ಬಾಯಿಯಲ್ಲಿ ಬ್ಯಾಕ್ಟೀರಿಯಗಳು ಬೆಳೆಯುವುದಿಲ್ಲ.
*ರಾತ್ರಿ ಊಟವಾದ ಬಳಿಕ 10 ನಿಮಿಷ ವಾಕಿಂಗ್ ಮಾಡಿ. ಇದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ. ಮತ್ತು ಕೊಬ್ಬು ಸಂಗ್ರಹವಾಗುವುದಿಲ್ಲ.
- ತುಂಬಾ ತಡವಾಗಿ ಊಟ ಮಾಡುವುದನ್ನು ತಪ್ಪಿಸಿ.
*ರಾತ್ರಿ ಊಟ ಮಾಡಿದ ಬಳಿಕ ಮೊಬೈಲ್ ಗಳನ್ನು ಬಳಸುವ ಬದಲು ಸಂಗೀತವನ್ನು ಕೇಳಿ. ಇದರಿಂದ ಒತ್ತಡ ಕಡಿಮೆಯಾಗುತ್ತದೆ.
*ಊಟವಾದ ಬಳಿಕ ಹಣ್ಣುಗಳನ್ನು, ಡ್ರೈ ಫ್ರೂಟ್ಸ್ ಗಳನ್ನು ಸೇವಿಸಿದರೆ ತುಂಬಾ ಒಳ್ಳೆಯದು. ಇದು ನಿಮ್ಮನ್ನು ಆರೋಗ್ಯವಾಗಿಸುತ್ತದೆ.