ಜಂಪ್ ರೋಪ್ ಅಥವಾ ಸ್ಕಿಪ್ಪಿಂಗ್ ಅದ್ಭುತವಾದ ವರ್ಕೌಟ್ ಅಸ್ತ್ರಗಳಲ್ಲೊಂದು. ಯಾರು ಬೇಕಾದ್ರೂ ಎಲ್ಲಿ ಬೇಕಾದ್ರೂ ಆರಾಮಾಗಿ ಮಾಡಬಹುದಾದ ವ್ಯಾಯಾಮ ಇದು. ನಿಮ್ಮ ಇಡೀ ದೇಹದಲ್ಲೂ ಚಲನವಲನ ಉಂಟು ಮಾಡುತ್ತದೆ. ರನ್ನಿಂಗ್ ಗಿಂತ ಹೆಚ್ಚು ಕ್ಯಾಲೋರಿಯನ್ನು ಸ್ಕಿಪ್ಪಿಂಗ್ ಮೂಲಕ ಬರ್ನ್ ಮಾಡಬಹುದು.
ಒಂದು ನಿಮಿಷದಲ್ಲಿ 100-120 ಸ್ಕಿಪ್ಸ್ ಮಾಡಿದ್ರೆ 13 ಕ್ಯಾಲೋರಿ ಬರ್ನ್ ಮಾಡಬಹುದು. ದೇಹವನ್ನು ಫಿಟ್ ಆಗಿಟ್ಟುಕೊಳ್ಳಲು ಇದು ಬೆಸ್ಟ್. ಬಹು ಬೇಗನೆ ತೂಕವನ್ನು ಕೂಡ ಇಳಿಸಿಕೊಳ್ಳಬಹುದು. 30 ನಿಮಿಷ ಸ್ಕಿಪ್ಪಿಂಗ್ ಮಾಡಿದ್ರೆ 300 ಕ್ಯಾಲೋರಿ ಬರ್ನ್ ಮಾಡಲು ಸಾಧ್ಯ.
ಅಂದ್ರೆ ಒಂದು ವಾರ ಸತತವಾಗಿ ಪ್ರತಿ ದಿನ ನೀವು 30 ನಿಮಿಷ ಸ್ಕಿಪ್ಪಿಂಗ್ ಮಾಡಿದ್ರೆ ಅರ್ಧ ಕೆಜಿ ತೂಕ ಕಡಿಮೆಯಾಗುತ್ತದೆ. ಜಾಗಿಂಗ್ ಮತ್ತು ರನ್ನಿಂಗ್ ಗಿಂತ ಇದು ಸುರಕ್ಷಿತವಾದ ವ್ಯಾಯಾಮ. ದೇಹದ ಕೆಳ ಮತ್ತು ಮೇಲ್ಭಾಗದ ಮಾಂಸಖಂಡಗಳನ್ನು ಇದು ಬಲಗೊಳಿಸುತ್ತದೆ.
ಆರಂಭದಲ್ಲಿ ಕಷ್ಟ ಎನಿಸಿದ್ರೂ ನಿಧಾನವಾಗಿ ನಿಮ್ಮ ಕೈಕಾಲುಗಳು ಸ್ಟ್ರಾಂಗ್ ಆಗುತ್ತವೆ. ಇದೊಂದು ಅದ್ಭುತವಾದ ಕಾರ್ಡಿಯೋ ಎಕ್ಸರ್ಸೈಸ್. ನಿಮ್ಮ ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ರೋಪ್ ಜಂಪಿಂಗ್ ಅನ್ನು ಹೆಚ್ಚಾಗಿ ಟೆನಿಸ್ ಆಟಗಾರರು, ಬಾಕ್ಸರ್ ಗಳು ಮತ್ತು ಅಥ್ಲೀಟ್ ಗಳು ಅಭ್ಯಾಸ ಮಾಡ್ತಾರೆ.
ಇದೊಂದು ಸರಳ ಸಾಧನವಾಗಿರೋದ್ರಿಂದ ಪ್ರತಿಯೊಬ್ಬರೂ ತಮ್ಮ ನಿತ್ಯದ ವ್ಯಾಯಾಮದಲ್ಲಿ ಅಳವಡಿಸಿಕೊಳ್ಳುವುದು ಉತ್ತಮ. ಸ್ಕಿಪ್ಪಿಂಗ್ ನಿಮ್ಮ ಇಡೀ ದೇಹಕ್ಕೂ ಕೆಲಸ ಕೊಡುತ್ತದೆ. ಹೆಗಲು, ಕೈ, ಕಾಲು ಹೊಟ್ಟೆ ಹೀಗೆ ಎಲ್ಲಾ ಭಾಗಗಳ ಮೇಲೂ ಒತ್ತಡ ಬಿದ್ದು ವ್ಯಾಯಾಮವಾಗುತ್ತದೆ. ಹಾಗಾಗಿ ಆರೋಗ್ಯವಾಗಿರಬೇಕು ಅಂದ್ರೆ ಸ್ಕಿಪ್ಪಿಂಗ್ ಕೂಡ ಶುರು ಮಾಡಿ.