alex Certify ಮನೆಯಲ್ಲಿ ‘ಧನಾತ್ಮಕ’ ಶಕ್ತಿ ನೆಲೆಸಲು ಈ ಕೆಲಸಗಳನ್ನು ತಪ್ಪದೇ ಮಾಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯಲ್ಲಿ ‘ಧನಾತ್ಮಕ’ ಶಕ್ತಿ ನೆಲೆಸಲು ಈ ಕೆಲಸಗಳನ್ನು ತಪ್ಪದೇ ಮಾಡಿ

ಮನೆ ಅಂದಮೇಲೆ ಅಲ್ಲಿ ಧನಾತ್ಮಕ ಹಾಗೂ ಋಣಾತ್ಮಕ ಅಂಶಗಳೆರಡೂ ಇರುತ್ತೆ. ಕೆಲವೊಂದು ವಿಚಾರಗಳು ನಿಮಗೆ ಅದೃಷ್ಟವನ್ನು ತಂದುಕೊಟ್ಟರೆ ಇನ್ನು ಕೆಲವು ನಿಮ್ಮನ್ನು ಪಾತಾಳಕ್ಕೆ ತಳ್ಳಬಹುದು.

ಆದರೆ ವಾಸ್ತು ಶಾಸ್ತ್ರದಲ್ಲಿ ನಿಮ್ಮ ಮನೆಯಲ್ಲಿರುವ ನಕರಾತ್ಮಕ ಶಕ್ತಿಯನ್ನು ಹೋಗಲಾಡಿಸಲು ಮಾರ್ಗಗಳು ಸಿಗುತ್ತದೆ.

ಹಾಗಾದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸಲು ನೀವು ತೆಗೆದುಕೊಳ್ಳಬಹುದಾದ ಕ್ರಮಗಳು ಯಾವುವು ಅನ್ನೋದಕ್ಕೆ ಮಾಹಿತಿ ಇಲ್ಲಿದೆ :

ಸರಿಯಾದ ದಿಕ್ಕಿನಲ್ಲಿ ತುಳಸಿ ಗಿಡವನ್ನು ನೆಡಬೇಕು :

ಸಾಮಾನ್ಯವಾಗಿ ಎಲ್ಲಾ ಮನೆಯಲ್ಲೂ ತುಳಸಿ ಗಿಡ ಇದ್ದೇ ಇರುತ್ತದೆ. ಆದರೆ ಅನೇಕರಿಗೆ ಯಾವ ದಿಕ್ಕಿನಲ್ಲಿ ತುಳಸಿ ಗಿಡವನ್ನು ನೆಡಬೇಕು ಎಂಬುದು ತಿಳಿದಿರೋದಿಲ್ಲ.

ವಾಸ್ತು ಶಾಸ್ತ್ರದ ಪ್ರಕಾರ ನೀವು ತುಳಸಿ ಗಿಡವನ್ನು ಮನೆಯ ಅಂಗಳದ ಮಧ್ಯದಲ್ಲಿ ನೆಡಬೇಕು. ಮನೆಯಲ್ಲಿ ಅಂಗಳ ಇಲ್ಲದೇ ಹೋದಲ್ಲಿ ಮನೆಯ ಉತ್ತರ ದಿಕ್ಕಿನಲ್ಲಿ ತುಳಸಿ ಗಿಡವನ್ನು ನೆಟ್ಟರೆ ಉತ್ತಮ.

ದೇವರ ಕೋಣೆಯು ಸೂಕ್ತ ದಿಕ್ಕಿನಲ್ಲಿ ಇರಬೇಕು :

ವಾಸ್ತುಶಾಸ್ತ್ರದ ಪ್ರಕಾರ ದೇವರ ಕೋಣೆ ಎಂದಿಗೂ ಈಶಾನ್ಯ ದಿಕ್ಕಿನಲ್ಲಿ ಇರಬೇಕು. ಈ ದಿಕ್ಕಿನಲ್ಲಿ ನಿಮ್ಮ ಮನೆಯ ದೇವರ ಕೋಣೆ ಇಲ್ಲ ಎಂದಾದಲ್ಲಿ ನೀವು ಈಗಲೇ ದಿಕ್ಕನ್ನು ಬದಲಾಯಿಸುವುದು ಸೂಕ್ತ. ಈ ರೀತಿ ಮಾಡುವುದರಿಂದ ಮನೆಯಲ್ಲಿ ಎಲ್ಲ ಕಾರ್ಯವೂ ಮಂಗಳದಾಯಕವಾಗಿ ಸಾಗಲಿದೆ.

ಮನೆಯ ಮುಖ್ಯದ್ವಾರವು ಈ ರೀತಿ ಇರಲಿ :

ಮನೆಯ ಮುಖ್ಯ ದ್ವಾರವು ಎಂದಿಗೂ ಉತ್ತರ, ಈಶಾನ್ಯ ಅಥವಾ ಪಶ್ಚಿಮ ದಿಕ್ಕಿನಲ್ಲೇ ಇರಬೇಕು. ಈ ದಿಕ್ಕುಗಳನ್ನು ಮಂಗಳಕರ ದಿಕ್ಕು ಎಂದೇ ಪರಿಗಣಿಸಲಾಗಿದೆ.

ಒಂದು ವೇಳೆ ನಿಮ್ಮ ಮನೆಯ ಮುಖ್ಯದ್ವಾರವು ಈ ದಿಕ್ಕಿನಲ್ಲಿ ಇಲ್ಲವಾದಲ್ಲಿ ನೀವು ದ್ವಾರವನ್ನು ಧ್ವಂಸ ಮಾಡುವ ಅಗತ್ಯವೇನಿಲ್ಲ. ಬದಲಾಗಿ ಮುಖ್ಯ ದ್ವಾರಕ್ಕೆ ಕೆಂಪು ಬಣ್ಣದ ಪರದೆಯನ್ನು ಹಾಕಿ. ಇದರಿಂದ ನಕರಾತ್ಮಕ ಅಂಶ ದೂರಾಗಲಿದೆ.

ಉಪ್ಪಿನ ಮಹತ್ವ :

ನಿತ್ಯ ಮನೆ ಒರೆಸುವಾಗ ನೀವು ಫಿನೈಲ್​ಗಳನ್ನು ಬಳಕೆ ಮಾಡುತ್ತೀರಿ. ಆದರೆ ವಾರದಲ್ಲಿ ಒಮ್ಮೆಯಾದರೂ ಕಲ್ಲುಪ್ಪನ್ನು ನೀರಿಗೆ ಕಲಿಸಿ ಮನೆಯನ್ನು ಉಜ್ಜಬೇಕು. ಈ ರೀತಿ ಮಾಡೋದ್ರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಮಾಯವಾಗಲಿದೆ.

– ಶ್ರೀ ಕ್ಷೇತ್ರ ಕೊಲ್ಲೂರು ಮೂಕಾಂಬಿಕೆ ದೇವಿ ಜ್ಯೋತಿಷ್ಯ ಪೀಠಂ

ನಿಮ್ಮ ಜೀವನದ ಯಾವುದೇ ಗುಪ್ತ ಪ್ರೀತಿ – ಪ್ರೇಮ, ದಾಂಪತ್ಯ, ವೈವಾಹಿಕ, ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋಕ್ತವಾದ ಮಾರ್ಗವನ್ನು ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ.

ತಪ್ಪದೆ ಕರೆ ಮಾಡಿ:
ಪಂಡಿತ್ ಕೇಶವ್ ಕೃಷ್ಣ ಭಟ್ (ಜ್ಯೋತಿಷ್ಯ ಶಾಸ್ತ್ರಜ್ಞರು) 8971498358

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...