ನಮ್ಮ ಮೆದುಳು ನಿರಂತರವಾಗಿ ಚಲಿಸುತ್ತಿರುತ್ತದೆ. ಯಾವಾಗಲೂ ಚುರುಕಾಗಿರುತ್ತದೆ. ನಮ್ಮ ಇತರ ಕೆಲಸಗಳೆಲ್ಲ ಸುಸೂತ್ರವಾಗಿ ಸಾಗಬೇಕೆಂದರೆ ಮೆದುಳಿನ ಆರೋಗ್ಯ ಚೆನ್ನಾಗಿರಬೇಕು. ಆದರೆ ಜೀವನಶೈಲಿಯಲ್ಲಿನ ಕೆಲವು ಬದಲಾವಣೆಗಳಿಂದಾಗಿ ಮೆದುಳಿನ ಮೇಲೆ ಬಹಳಷ್ಟು ಪರಿಣಾಮ ಉಂಟಾಗುತ್ತದೆ. ಮೆದುಳಿನ ಶಕ್ತಿ, ನಮ್ಮ ಬುದ್ಧಿಮತ್ತೆ ಎಲ್ಲವೂ ಕುಂದಿಹೋಗಬಹುದು.
ಮೆದುಳು ಯಾವಾಗಲೂ ಆರೋಗ್ಯಕರವಾಗಿರಲು, ಕೆಲವು ಕೆಲಸಗಳನ್ನು ಮಾಡುವುದು ಬಹಳ ಮುಖ್ಯ. ಸದೃಢವಾದ ಮೆದುಳು ಮತ್ತು ಜ್ಞಾಪಕ ಶಕ್ತಿಗಾಗಿ ಉತ್ತಮ ಆಹಾರ ಸೇವಿಸಬೇಕು. ಜೀವನಶೈಲಿಯಲ್ಲಿ ಕೆಲವು ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು. ಯಾವಾಗಲೂ ಹೊಸದನ್ನು ಕಲಿಯುವ ಉತ್ಸಾಹ ನಮ್ಮಲ್ಲಿರಬೇಕು.
ಮನಸ್ಸನ್ನು ಚುರುಕುಗೊಳಿಸಲು ಸಾಕಷ್ಟು ನಿದ್ರೆ ಮಾಡುವುದು ಬಹಳ ಮುಖ್ಯ. ಕಣ್ತುಂಬಾ ನಿದ್ದೆ ಮಾಡದಿದ್ದರೆ ಮೆದುಳು ಮಂದವಾಗುತ್ತದೆ. ಚುರುಕಾಗಿ ಕೆಲಸ ಮಾಡುವುದಿಲ್ಲ.
ಒತ್ತಡವನ್ನು ನಿವಾರಿಸಲು ಬಯಸಿದರೆ ಹತ್ತಿರದ ಸ್ಥಳಗಳಲ್ಲಿ ಸುತ್ತಾಡಿ. ಈ ಮೂಲಕ ದೇಹ ಮತ್ತು ಮನಸ್ಸು ಎರಡೂ ಉತ್ಸಾಹಭರಿತವಾಗುತ್ತವೆ.
ನಿಯಮಿತವಾಗಿ ಯೋಗ ಮತ್ತು ವ್ಯಾಯಾಮ ಮಾಡುವುದರಿಂದ ದೇಹ ಮತ್ತು ಮನಸ್ಸು ಆರೋಗ್ಯವಾಗಿರುತ್ತದೆ. ಮೆದುಳಿನ ಆರೋಗ್ಯಕ್ಕೆ ವ್ಯಾಯಾಮ ಸಹ ಮುಖ್ಯವಾಗೊದೆ.
ಮೆದುಳನ್ನು ಸಂಪೂರ್ಣವಾಗಿ ಆರೋಗ್ಯವಾಗಿಡಲು ಉತ್ತಮ ಆಹಾರವನ್ನು ಸೇವಿಸಬೇಕು. ಹಸಿರು ತರಕಾರಿ ಮತ್ತು ಹಣ್ಣುಗಳನ್ನು ನಿಯಮಿತವಾಗಿ ಸೇವನೆ ಮಾಡಬೇಕು.