ಒಂದು ವೇಳೆ ನೀವು ನಿಮ್ಮ ಹೆಂಡತಿಯ ಹುಟ್ಟಿದಹಬ್ಬವನ್ನು ಮರೆತರೆ ಏನಾಗಬಹುದು..? ಮನೆಯಲ್ಲಿ ಬಿರುಗಾಳಿ, ಸುಂಟರಗಾಳಿ ಒಮ್ಮೆಲೆ ಸೃಷ್ಟಿಯಾಗೋದಂತೂ ಖಂಡಿತಾ. ಅದ್ಯಾಕೋ ಗೊತ್ತಿಲ್ಲ, ಹಲವಾರು ಮಂದಿ ಪುರುಷರು ತಮ್ಮ ಹೆಂಡತಿಯ ಜನ್ಮದಿನವನ್ನು ಮರೆತುಬಿಡುತ್ತಾರೆ. ಆದರೀಗ ಇಲ್ಲೊಂದು ದೇಶದಲ್ಲಿ ಪತ್ನಿಯ ಜನ್ಮದಿನ ಮರೆತ್ರೆ ಜೈಲೂಟ ಫಿಕ್ಸಂತೆ..!
ಏನು ತಪ್ಪು ಮಾಡದಿದ್ದರೂ ಕೆಲವೊಂದು ವಿಷಯಗಳು ನಿಮ್ಮನ್ನು ಕಾನೂನು ತೊಂದರೆಗೆ ಸಿಲುಕಿಸಬಹುದಾದ ದೇಶಗಳು ಪ್ರಪಂಚದಾದ್ಯಂತ ಇವೆ. ಉದಾಹರಣೆಗೆ, ನಿಮ್ಮ ಹೆಂಡತಿಯ ಜನ್ಮದಿನವನ್ನು ಮರೆತುಬಿಡುವುದು. ಹೌದು, ನಿಮ್ಮ ಸಂಗಾತಿಯ ಜನ್ಮದಿನವನ್ನು ಮರೆತುಬಿಡುವುದು ಸಮೋವಾದಲ್ಲಿ ಅಪರಾಧವಂತೆ.
ಸುಂದರ ದೇಶವಾದ ಸಮೋವಾದಿಂದ ಇತ್ತೀಚೆಗೆ ವೈರಲ್ ಆಗಿರುವ ಸುದ್ದಿಯಿಂದ ಹಲವರು ಆಘಾತಗೊಂಡಿದ್ದಾರೆ. ಸಮೋವಾದಲ್ಲಿ ತಮ್ಮ ಸಂಗಾತಿಯ ಜನ್ಮದಿನವನ್ನು ಮರೆತಿರುವ ಪುರುಷರನ್ನು ಜೈಲಿಗೆ ತಳ್ಳಿದೆ. ಸಮೋವನ್ ಪುರುಷರು ತಮ್ಮ ಪತ್ನಿಯರ ಜನ್ಮದಿನವನ್ನು ಮರೆತರೆ ಜೈಲಿಗೆ ಹೋಗುವ ಅಪಾಯವಿದೆ ಎಂದು ಜರ್ಮನ್ ಭಾಷೆಯ ಫೇಸ್ ಚೆಕ್ ಪೇಜ್ ಫ್ಯಾಕ್ಟಾಸ್ಟಿಚ್ ನಲ್ಲಿ ವರದಿ ಪ್ರಕಟಿಸಿದ್ದು, ತನ್ನ ಓದುಗರನ್ನು ಬೆಚ್ಚಿಬೀಳಿಸಿದೆ.
ಸಮೋವಾ ಅಬ್ಸರ್ವರ್ ವರದಿಯ ಪ್ರಕಾರ, ಸಮೋವಾದಲ್ಲಿ ಇಂತಹ ಯಾವುದೇ ಕಾನೂನುಗಳಿಲ್ಲ ಎಂಬ ಬಗ್ಗೆ ವರದಿ ಪ್ರಕಟಿಸಿದೆ. ಇಂತಹ ಕಾನೂನಿನ ಬಗ್ಗೆ ವಕೀಲರಾದ ಫಿಯೋನಾ ಐ ಅವರು ಸಂಪೂರ್ಣವಾಗಿ ಅಲ್ಲಗಳೆದಿದ್ದಾರೆ.
ಪ್ರಪಂಚದ ಹಲವು ದೇಶಗಳಲ್ಲಿ ಚಿತ್ರ-ವಿಚಿತ್ರ ಕಾನೂನುಗಳಿವೆ. ಉತ್ತರ ಕೊರಿಯಾದಲ್ಲಿ ನೀಲಿ ಬಣ್ಣದ ಜೀನ್ಸ್ ಧರಿಸುವುದು ಕಾನೂನುಬಾಹಿರ. ಏಕೆಂದರೆ ಅದು ಅಮೆರಿಕನ್ ಸಾಮ್ರಾಜ್ಯಶಾಹಿಯ ಸಂಕೇತವಾಗಿದೆ. ಇನ್ನು ಸಿಂಗಾಪುರದಲ್ಲಿ ಚೂಯಿಂಗ್ ಗಮ್ ಅನ್ನು ನಿಷೇಧಿಸಲಾಗಿದೆ.
https://twitter.com/faktastisch/status/1227644873135841282?ref_src=twsrc%5Etfw%7Ctwcamp%5Etweetembed%7Ctwterm%5E1227644873135841282%7Ctwgr%5E%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fforgetting-wifes-birthday-in-this-country-is-legal-offence-and-theres-jail-term-too-4471850.html