ಪ್ರಾಚೀನ ಕಾಲದಿಂದಲೂ ಗಿಡ-ಮರಗಳಿಗೆ ಪೂಜೆ ಮಾಡುವ ಸಂಪ್ರದಾಯವಿದೆ. ಜ್ಯೋತಿಷ್ಯ ಹಾಗೂ ವಾಸ್ತುಶಾಸ್ತ್ರದ ಪ್ರಕಾರ ಕೆಲ ಗಿಡ-ಮರಗಳನ್ನು ಪೂಜೆ ಮಾಡುವುದರಿಂದ ಅನೇಕ ಸಮಸ್ಯೆಗಳು ದೂರವಾಗುತ್ತವೆ. ಮನೆಯಲ್ಲಿ ಜಾಗವಿಲ್ಲವಾದ್ರೆ ಮನೆ ಆಸುಪಾಸು ಈ ಗಿಡ-ಮರಗಳು ಕಂಡಲ್ಲಿ ಅವಶ್ಯವಾಗಿ ಪೂಜೆ ಮಾಡಬೇಕು.
ತುಳಸಿ : ವಿಷ್ಣು ಪ್ರಿಯ ತುಳಸಿ ಪ್ರತಿಯೊಬ್ಬರ ಮನೆಯಲ್ಲಿರುತ್ತದೆ. ನಿಮ್ಮ ಮನೆಯಲ್ಲಿ ತುಳಸಿ ಗಿಡವಿಲ್ಲವೆಂದಾದ್ರೆ ಅವಶ್ಯವಾಗಿ ಮನೆಗೆ ತನ್ನಿ. ಬೆಳಿಗ್ಗೆ ಹಾಗೂ ಸಂಜೆ ಅದಕ್ಕೆ ನೀರನ್ನು ಹಾಕಿ. ಸಂಜೆ ತುಳಸಿ ಮುಂದೆ ದೀಪ ಹಚ್ಚಿ.
ಅಶ್ವತ್ಥ ಮರ : ಮನೆಯಲ್ಲಿ ಅಶ್ವತ್ಥ ಗಿಡವಿರುವುದು ಶುಭವಲ್ಲ. ಆದ್ರೆ ಮನೆ ಆಸುಪಾಸು ಅಶ್ವತ್ಥ ಮರವಿದ್ದರೆ ಅದನ್ನು ಅವಶ್ಯವಾಗಿ ಪೂಜಿಸಿ. ಇದ್ರಲ್ಲಿ ಎಲ್ಲ ದೇವಾನುದೇವತೆಗಳು ನೆಲೆಸಿರುತ್ತವೆ. ಅಶ್ವತ್ಥ ಮರಕ್ಕೆ ನೀರು ಹಾಕುವುದ್ರಿಂದ ಎಲ್ಲ ಸಮಸ್ಯೆ ದೂರವಾಗುತ್ತದೆ.
ಬಿಲ್ವ : ಭಗವಂತ ಶಿವ ಬಿಲ್ವ ಪತ್ರೆ ಪ್ರಿಯ. ಬಿಲ್ವ ಪತ್ರೆ ಗಿಡವನ್ನು ಕತ್ತರಿಸುವುದ್ರಿಂದ ವಂಶ ಸಮಾಪ್ತಿಯಾಗುತ್ತದೆ. ಬಿಲ್ವ ಪತ್ರೆ ಬೆಳೆಸುವುದ್ರಿಂದ ವಂಶ ವೃದ್ಧಿಯಾಗುತ್ತದೆ.
ಅಶೋಕ : ಈ ಗಿಡ ಜೀವನದ ಪ್ರತಿಯೊಂದು ದುಃಖವನ್ನೂ ದೂರ ಮಾಡುತ್ತದೆ. ಪ್ರತಿದಿನ ಅಶೋಕ ಮರಕ್ಕೆ ನೀರು ಹಾಕುವುದ್ರಿಂದ ದೇವರ ಕೃಪೆ ಪ್ರಾಪ್ತವಾಗುತ್ತದೆ.
ಬಾಳೆ ಗಿಡ : ಬಾಳೆ ಗಿಡವನ್ನು ಮನೆಯ ಈಶಾನ್ಯ ಭಾಗದಲ್ಲಿ ಬೆಳೆಸುವುದ್ರಿಂದ ಧನ ವೃದ್ಧಿಯಾಗುತ್ತದೆ. ಬಾಳೆ ಗಿಡಕ್ಕೆ ನೀರೆರೆಯುವುದ್ರಿಂದ ವಿಷ್ಣು-ಲಕ್ಷ್ಮಿ ಕೃಪೆ ಸದಾ ಇರುತ್ತದೆ.
ಆಲ : ಆಲದ ಮರವನ್ನು ಪೂಜೆ ಮಾಡುವುದ್ರಿಂದ ಸಂತೋಷ, ಸಮೃದ್ಧಿ ಪ್ರಾಪ್ತಿಯಾಗುತ್ತದೆ.