ಕೆಲವರಿಗೆ ಕಿವಿಯನ್ನು ಸ್ವಚ್ಛಗೊಳಿಸಲು ಇಯರ್ ಡ್ರಾಪ್ ಹಾಕುವ ಅಭ್ಯಾಸವಿರುತ್ತದೆ. ಆದರೆ ಮಳೆಗಾಲದಲ್ಲಿ ನೀವು ಇಯರ್ ಡ್ರಾಪ್ ಹಾಕುವುದನ್ನು ತಪ್ಪಿಸಬೇಕು. ಯಾಕೆಂದರೆ ಇದರಿಂದ ಇದು ನಿಮ್ಮ ಕಿವಿಯ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆಯಂತೆ. ಮಳೆಗಾಲದಲ್ಲಿ ಹೆಚ್ಚಿದ ತೇವಾಂಶವು ನಿಮ್ಮ ಕಿವಿಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಮತ್ತು ಕಿವಿ ಹನಿಗಳನ್ನು ಬಳಸುವುದರಿಂದ ಅದು ಹೇಗೆ ಸಮಸ್ಯೆಗೆ ಕಾರಣವಾಗುತ್ತದೆ ಎಂಬುದನ್ನು ತಿಳಿಯಿರಿ.
ಮಳೆಗಾಲದಲ್ಲಿ ವಾತಾವರಣ ತೇವಾಂಶದಿಂದ ಕೂಡಿರುತ್ತದೆ. ಹೆಚ್ಚಿನ ತೇವಾಂಶದಲ್ಲಿ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳಿಗೆ ಸಂತಾನೋತ್ಪತ್ತಿ ಕಾರ್ಯ ನಡೆಸುತ್ತವೆ. ಈ ಸಮಯದಲ್ಲಿ ನೀವು ಕಿವಿಯೊಳಗೆ ಇಯರ್ ಡ್ರಾಪ್ ಹಾಕಿದರೆ ಅಲ್ಲಿ ತೇವಾಂಶ ಹೆಚ್ಚಾಗಿ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳು ಬೆಳೆದು ಕಿವಿ ಸೋಂಕಿನ ಅಪಾಯ ಕಾಡುತ್ತದೆ. ಈ ಸೋಂಕುಗಳಿಂದ ಕಿವಿಯಲ್ಲಿ ತುರಿಕೆ, ಕೆಂಪಾಗುವಿಕೆ, ಊತ ಮತ್ತು ವಿಸರ್ಜನೆಗೆ ಕಾರಣವಾಗಬಹುದು.
ಅಲ್ಲದೇ ತೇವಾಂಶವು ಇಯರ್ವಾಕ್ಸ್ ಉತ್ಪಾದನೆಯ ಮೇಲೂ ಪರಿಣಾಮ ಬೀರುತ್ತದೆ. ತೇವಾಂಶ ಇಯರ್ವಾಕ್ಸ್ ಅನ್ನು ಮೃದುಗೊಳಿಸುತ್ತದೆ, ಇದು ಕಿವಿಯಲ್ಲಿ ತಡೆಗಳನ್ನು ಉಂಟುಮಾಡುತ್ತದೆ. ಇದರಿಂದ ಕಿವಿಗಳಲ್ಲಿ ರಿಂಗಿಂಗ್ ಅಥವಾ ಗಿಜಿಗುಡುವ ಶಬ್ದಗಳಿಂದ ಕೇಳಿಸುತ್ತದೆ.
ಅಷ್ಟೇ ಅಲ್ಲದೇ ಕೆಲವು ಇಯರ್ ಡ್ರಾಫ್ಸ್ ಹೆಚ್ಚುವರಿ ಇಯರ್ವಾಕ್ಸ್ ಉತ್ಪಾದನೆಯನ್ನು ಉತ್ತೇಜಿಸಬಹುದು, ಇದು ಮತ್ತಷ್ಟು ಸಮಸ್ಯೆಗೆ ಕಾರಣವಾಗಬಹುದು. ಇದರಿಂದ ಕಿರಿಕಿರಿ ಮತ್ತು ಉರಿಯೂತದ ಸಮಸ್ಯೆ ಕಾಡುತ್ತದೆ. ಇದು ಕಿವಿ ಕೇಳದೆ ಇರುವಂತಹ ಸಮಸ್ಯೆಗೆ ಕಾರಣವಾಗಬಹುದು. ಹಾಗಾಗಿ ವೈದ್ಯರ ಸಲಹೆಯಿಲ್ಲದೇ ಯಾವುದೇ ರೀತಿಯ ಇಯರ್ ಡ್ರಾಪ್ಸ್ ಅನ್ನು ಬಳಸಬೇಡಿ.