ವಿಶ್ವದಾದ್ಯಂತ ಸಾವಿರ, ಲಕ್ಷವಲ್ಲ ಬದಲಾಗಿ ಕೋಟಿಗಟ್ಟಲೆ ಜನರು ಪ್ರತಿ ದಿನ 150 ಕ್ಕೂ ಹೆಚ್ಚು ಬಾರಿ ಮೊಬೈಲ್ ಬಳಸ್ತಾರೆ.
ಮೊಬೈಲ್ ಅಗತ್ಯ ವಸ್ತುಗಳಲ್ಲಿ ಒಂದಾಗಿದೆ. ಆದ್ರೆ ಕೆಲವೊಂದು ಸಮಯದಲ್ಲಿ ಮೊಬೈಲ್ ಬಳಕೆ ನಮ್ಮ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಈ ಬಗ್ಗೆ ನಡೆದ ಅಧ್ಯಯನವೊಂದು ಯಾವ ಸಮಯದಲ್ಲಿ ಮೊಬೈಲ್ ಬಳಸಬಾರದು ಎಂಬುದನ್ನು ಹೇಳಿದೆ.
ಬೆಳಿಗ್ಗೆ ಎದ್ದ ತಕ್ಷಣ ಅಪ್ಪಿತಪ್ಪಿಯೂ ಮೊಬೈಲ್ ಬಳಸಬೇಡಿ. ಬೆಳಿಗ್ಗೆ ಎದ್ದ ತಕ್ಷಣ ಮೊಬೈಲ್ ನೋಡಿದ್ರೆ ಒತ್ತಡ ಹಾಗೂ ಆತಂಕ ಹೆಚ್ಚಾಗುತ್ತದೆ. ಇದು ವ್ಯಕ್ತಿಯ ಅಸಂತೋಷಕ್ಕೆ ಕಾರಣವಾಗುತ್ತದೆ.
ಕೆಲಸದ ಮೊದಲು ಮೊಬೈಲ್ ನೋಡಬಾರದು ಎಂದು ತಜ್ಞರು ಸಲಹೆ ನೀಡಿದ್ದಾರೆ. ಮಹತ್ವದ ಕೆಲಸ ಅಥವಾ ಮೀಟಿಂಗ್ ಮೊದಲು ಮೊಬೈಲ್ ನೋಡುವುದು ಕಾರ್ಯಕ್ಷಮತೆಯನ್ನು ಕಡಿಮೆ ಮಾಡುತ್ತದೆಯಂತೆ. ಒತ್ತಡ ಹೆಚ್ಚಾಗಿ ಕೆಲಸದ ಮೇಲೆ ಗಮನ ನೀಡಲು ಸಾಧ್ಯವಾಗುವುದಿಲ್ಲ.
ಕೆಲಸ ಮಾಡುವ ವೇಳೆ ಜನರು ಮಗ್ನರಾಗುತ್ತಾರೆ. ಈ ವೇಳೆ ಮೊಬೈಲ್ ಸಂದೇಶ ಅಥವಾ ಕರೆ ಬಂದ್ರೆ ಏಕಾಗ್ರತೆಗೆ ಧಕ್ಕೆ ಬರುತ್ತದೆ. ಮತ್ತೆ ಹಿಂದಿನಂತೆ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ.
ಪುಸ್ತಕ ಓದುವ ವೇಳೆ ಮನಸ್ಸು ಶಾಂತವಾಗಿರುತ್ತದೆ. ಇದು ಮೆದುಳನ್ನು ಚುರುಕುಗೊಳಿಸುತ್ತದೆ. ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಓದುವ ವೇಳೆ ಫೋನ್ ಕರೆ ಬಂದ್ರೆ ಇದು ಮನಸ್ಸನ್ನು ಹಾಳು ಮಾಡುತ್ತದೆ.
ನಿದ್ರಾಹೀನತೆಗೆ ಮೊಬೈಲ್ ಕಾರಣ. ಮಲಗುವ ಮೊದಲು ಮೊಬೈಲ್ ಬಳಸಬಾರದು. ಇದು ಸುಸ್ತು, ಒತ್ತಡ ಹಾಗೂ ನಿದ್ರಾಹೀನತೆಗೆ ಕಾರಣವಾಗುತ್ತದೆ. ಹಾಗಾಗಿ ಮಲಗಲು 2 ಗಂಟೆ ಮುಂಚಿತವಾಗಿ ಮೊಬೈಲ್ ಬಳಸುವಂತೆ ತಜ್ಞರು ಸಲಹೆ ನೀಡಿದ್ದಾರೆ.