ರೊಟ್ಟಿ, ಚಪಾತಿ ಸೇರಿದಂತೆ ಯಾವುದೋ ತಿಂಡಿಗೆಂದು ಕಲಸಿದ ಹಿಟ್ಟಿನ ಮಿಶ್ರಣವನ್ನು ಫ್ರಿಜ್ ನಲ್ಲಿ ಇಟ್ಟು, ನಂತ್ರ ಬಳಸುವ ಅಭ್ಯಾಸ ಕೆಲವರಿಗಿರುತ್ತದೆ. ಇನ್ನೂ ಕೆಲವರು ಸಮಯವಿದ್ದಾಗ ಬೇಕಾದಷ್ಟು ಹಿಟ್ಟನ್ನು ಕಲಸಿ ಫ್ರಿಜ್ ನಲ್ಲಿ ಇಟ್ಟುಕೊಳ್ತಾರೆ.
ಅದನ್ನು ಎಷ್ಟೋ ಸಮಯದ ಬಳಿಕ ಬಳಸುತ್ತಾರೆ. ಆದ್ರೆ ಫ್ರಿಜ್ ನಲ್ಲಿ ಆಹಾರವಿಟ್ಟು ಸೇವನೆ ಮಾಡಬಾರದು. ಅದರಲ್ಲೂ ಹಿಟ್ಟುಗಳನ್ನು ಫ್ರಿಜ್ ನಲ್ಲಿಟ್ಟು ಮತ್ತೆ ಬಳಸಬಾರದು. ಹಿಟ್ಟಿನಲ್ಲಿ ಉತ್ಪತ್ತಿಯಾಗುವ ಬ್ಯಾಕ್ಟೀರಿಯಾಗಳು ಆರೋಗ್ಯಕ್ಕೆ ಬಹಳ ಹಾನಿಕರ. ಇದರಿಂದ ನಮ್ಮ ಶರೀರದಲ್ಲಿ ಅನೇಕ ಸಮಸ್ಯೆಗಳು ಉದ್ಭವವಾಗುತ್ತವೆ.
ಹಿಟ್ಟನ್ನು ಕಲಸಿದ ನಂತರ ಅದರಲ್ಲಿ ಫರ್ಮಟೇಶನ್ ಪ್ರಕ್ರಿಯೆ ಆರಂಭವಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಬ್ಯಾಕ್ಟಿರಿಯಾಗಳು ಬೆಳೆಯಲು ಪ್ರಾರಂಭವಾಗುತ್ತವೆ. ಅಂತಹ ಸಮಯದಲ್ಲಿ ನೀವು ಹಿಟ್ಟನ್ನು ಫ್ರಿಜ್ ನಲ್ಲಿ ಇಟ್ಟು ಅದನ್ನು ಬಳಸುವುದರಿಂದ ನಿಮ್ಮ ಹೊಟ್ಟೆಯ ಸಮಸ್ಯೆ ಶುರುವಾಗಬಹುದು.
ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ಸೇವಿಸುವುದು ಬಹಳ ಮುಖ್ಯ. ಹಾಗಿರುವಾಗ ನೀವು ಹಳಸಿದ ಹಿಟ್ಟನ್ನು ಸೇವಿಸಿದರೆ ಅದು ನಿಮ್ಮ ರೋಗನಿರೋಧಕ ಶಕ್ತಿಯನ್ನು ದುರ್ಬಲವಾಗಿಸುತ್ತದೆ.
ಹಿಟ್ಟನ್ನು ಕಲಸಿದ ನಂತರ ಅದನ್ನು 2-3 ಗಂಟೆಯ ಅವಧಿಯಲ್ಲೇ ಸೇವಿಸಬೇಕು. ಏಕೆಂದರೆ ಹಿಟ್ಟು ಹಳಸಿದ ನಂತರ ಅದನ್ನು ಸೇವಿಸಿದರೆ ಅದರಿಂದ ಮಲಬದ್ಧತೆ ಉಂಟಾಗಬಹುದು.