
ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಅತಿ ಹೆಚ್ಚು ಸೇವಿಸುವ ಆಹಾರವೆಂದರೆ ಅನ್ನ. ಅಕ್ಕಿಯಿಂದ ವಿವಿಧ ಬಗೆಯ ತಿನಿಸುಗಳನ್ನು ಮಾಡಲಾಗುತ್ತದೆ. ಸಾಮಾನ್ಯವಾಗಿ ಎಲ್ಲರೂ ಕುಕ್ಕರ್‌ನಲ್ಲಿ ಅನ್ನ ಮಾಡಿ ಸೇವಿಸುತ್ತಾರೆ. ಆದರೆ ಕೆಲವರು ಪಾತ್ರೆಯಲ್ಲಿ ಅನ್ನವನ್ನು ಬೇಯಿಸಿ, ಅದರ ನೀರನ್ನು ಚೆಲ್ಲುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ಇದನ್ನು ಗ್ರಾಮೀಣ ಭಾಷೆಯಲ್ಲಿ ಬಾಗಿಸಿದ ಅನ್ನವೆಂದು ಕರೆಯಲಾಗುತ್ತದೆ. ಉತ್ತರ ಭಾರತದಲ್ಲಿ ಈ ಅನ್ನದ ನೀರನ್ನು ಮಾಡ್ ಎಂದು ಕರೆಯಲಾಗುತ್ತದೆ. ಆದರೆ ಈ ರೀತಿ ಅನ್ನವನ್ನು ಬೇಯಿಸುವುದರಿಂದ ಆರೋಗ್ಯಕ್ಕೆ ಸಾಕಷ್ಟು ನಷ್ಟವಾಗುತ್ತದೆ.
ಬೇಯಿಸಿದ ಅನ್ನದ ನೀರನ್ನು ಚೆಲ್ಲಿದರೆ ಬಹುತೇಕ ಪೋಷಕಾಂಶಗಳು ನಷ್ಟವಾಗುತ್ತವೆ. ಹಾಗಾಗಿ ಅನ್ನವನ್ನು ಬಾಗಿಸಿದ ಬಳಿಕ ಉಳಿದ ನೀರನ್ನು ಕುಡಿಯಬಹುದು. ಅನ್ನದ ತಿಳಿಯಲ್ಲಿ ಪೋಷಕಾಂಶಗಳ ಕೊರತೆ ಇಲ್ಲ. ವಿಟಮಿನ್ ಬಿ, ವಿಟಮಿನ್ ಸಿ ಮತ್ತು ವಿಟಮಿನ್ ಇ ಇದರಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಂಡುಬರುತ್ತದೆ. ಇದನ್ನು ಕುಡಿಯುವುದರಿಂದ ದೇಹವು ತ್ವರಿತ ಶಕ್ತಿಯನ್ನು ಪಡೆಯುತ್ತದೆ. ದೇಹದ ಆಯಾಸವು ದೂರವಾಗುತ್ತದೆ. ನಮ್ಮ ಚರ್ಮಕ್ಕೂ ಇದು ಪ್ರಯೋಜನಕಾರಿ. ಇದು ನೇರಳಾತೀತ ಕಿರಣಗಳ ಪರಿಣಾಮವನ್ನು ಮತ್ತು ಸೋಂಕನ್ನು ಕಡಿಮೆ ಮಾಡುವ ಶಕ್ತಿಯನ್ನು ಹೊಂದಿದೆ.
ಅದಕ್ಕಾಗಿಯೇ ಬೇಯಿಸಿದ ಅಕ್ಕಿ ನೀರನ್ನು ಅಥವಾ ಅನ್ನದ ತಿಳಿಯನ್ನು ತಣ್ಣಗಾದ ಬಳಿಕ ಮುಖಕ್ಕೆ ಹಚ್ಚಿಕೊಳ್ಳಬಹುದು. ಇತ್ತೀಚಿನ ದಿನಗಳಲ್ಲಿ ಅನೇಕರು ಬಿಳಿ ಕೂದಲು ಅಥವಾ ಕೂದಲು ಉದುರುವಿಕೆಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಈ ಸಮಸ್ಯೆಗೆ ಅನ್ನದ ತಿಳಿಯಲ್ಲಿ ಪರಿಹಾರವಿದೆ. ಅನ್ನದ ತಿಳಿಯನ್ನು ತಲೆಗೆ ಹಚ್ಚಿಕೊಂಡು 15 ರಿಂದ 20 ನಿಮಿಷಗಳ ಕಾಲ ಹಾಗೇ ಬಿಡಿ. ನಂತರ ಸೌಮ್ಯವಾದ ಶಾಂಪೂ ಮತ್ತು ಕಂಡೀಷನರ್ನಿಂದ ಕೂದಲನ್ನು ಸ್ವಚ್ಛಗೊಳಿಸಿ. ಬೇಯಿಸಿದ ಅಕ್ಕಿ ನೀರಿನಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಕಂಡುಬರುತ್ತವೆ. ಇದನ್ನು ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಬ್ಲ್ಯಾಕ್ ಹೆಡ್ಸ್ ಮತ್ತು ವೈಟ್ ಹೆಡ್ ಸಮಸ್ಯೆ ನಿವಾರಣೆಯಾಗುತ್ತದೆ.
ಅನ್ನದ ತಿಳಿಯನ್ನು ಸೇವನೆ ಮಾಡುವುದರಿಂದ ಕ್ಯಾನ್ಸರ್ ನಂತಹ ಮಾರಣಾಂತಿಕ ಕಾಯಿಲೆಗಳ ಅಪಾಯವೂ ಕಡಿಮೆಯಾಗುತ್ತದೆ ಎಂಬುದು ಹಲವು ಸಂಶೋಧನೆಗಳಲ್ಲಿ ಸಾಬೀತಾಗಿದೆ. ಅಕ್ಕಿ ಬೇಯಿಸಿದ ನೀರಿನಲ್ಲಿ ಸಮೃದ್ಧ ಪ್ರಮಾಣದಲ್ಲಿ ಫೈಬರ್ ಕಂಡು ಬರುತ್ತದೆ. ಇದು ಚಯಾಪಚಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ, ಇದರಿಂದ ಜೀರ್ಣಕ್ರಿಯೆಯನ್ನು ಸುಧಾರಿಸಬಹುದು. ನಿಯಮಿತವಾಗಿ ಅಕ್ಕಿ ಬೇಯಿಸಿದ ನೀರನ್ನು ಕುಡಿಯುವವರ ದೇಹದ ಉಷ್ಣತೆಯು ಸಮತೋಲನದಲ್ಲಿರುತ್ತದೆ.
ನೀವು ಹೈಪೊಟೆನ್ಷನ್ ಅಥವಾ ಕಡಿಮೆ ರಕ್ತದೊತ್ತಡದ ಸಮಸ್ಯೆಯಿಂದ ಬಳಲುತ್ತಿದ್ದರೆ ಅಕ್ಕಿ ಬೇಯಿಸಿದ ನೀರಿಗೆ ಉಪ್ಪನ್ನು ಬೆರೆಸಿ ಕುಡಿಯಿರಿ. ವೈರಾಣು ಜ್ವರಕ್ಕೂ ಇದು ಪರಿಣಾಮಕಾರಿ ಮದ್ದು. ಇದಕ್ಕೆ ಸ್ವಲ್ಪ ಉಪ್ಪು ಬೆರೆಸಿ ಕುಡಿದರೆ ಜ್ವರ ಬೇಗ ಮಾಯವಾಗುತ್ತದೆ. ಅನ್ನದ ತಿಳಿ ಕುಡಿಯುವುದರಿಂದ ರಕ್ತ ಪರಿಚಲನೆ ಸರಿಯಾಗಿ ಆಗುತ್ತದೆ. ದೇಹದ ಅನೇಕ ಸಮಸ್ಯೆಗಳು ದೂರವಾಗುತ್ತವೆ.