ಕೆಲವರಿಗೆ ನಿದ್ದೆ ಬಂದಾಕ್ಷಣ ಎಲ್ಲೆಂದರಲ್ಲಿ ಮಲಗುವ ಅಭ್ಯಾಸವಿರುತ್ತದೆ. ಯಾವ ದಿಕ್ಕಿಗೆ ತಲೆ ಹಾಕಬೇಕು, ಕಾಲು ಹಾಕಬೇಕು ಎಂಬುದು ಕೂಡ ಗೊತ್ತಿರುವುದಿಲ್ಲ. ಮಲಗುವಾಗ ಸರಿಯಾದ ರೀತಿಯಲ್ಲಿ ಮಲಗಿದರೆ ಮಾತ್ರ ಅದರಿಂದ ನಮ್ಮ ಆರೋಗ್ಯ ಹಾಗೂ ಆರ್ಥಿಕ ಪರಿಸ್ಥಿತಿಗೆ ಒಳ್ಳೆಯದಾಗುತ್ತದೆ.
ಮಲಗುವಾಗ ಪಶ್ಚಿಮ ಹಾಗೂ ಉತ್ತರ ದಿಕ್ಕಿಗೆ ಯಾವುದೇ ಕಾರಣಕ್ಕೂ ತಲೆ ಹಾಕಿ ಮಲಗಬಾರದಂತೆ. ಉತ್ತರ ದಿಕ್ಕಿನ ಕಡೆ ತಲೆ ಹಾಕಿ ಮಲಗಿದರೆ ನಿಮ್ಮ ಸಮಸ್ಯೆಗಳು ಹೆಚ್ಚಾಗುತ್ತದೆ ಜತೆಗೆ ನಿಮ್ಮಲ್ಲಿದ್ದ ಸಂಪತ್ತು ಕೂಡ ಇಲ್ಲವಾಗುತ್ತದೆಯಂತೆ. ಹಾಗೇ ಪಶ್ಚಿಮಕ್ಕೆ ತಲೆ ಹಾಕಿ ಮಲಗಿದರೆ ನಿಮ್ಮ ನೆನಪಿನ ಶಕ್ತಿ ಕಡಿಮೆಯಾಗುತ್ತದೆಯಂತೆ.
ಹಾಗಾಗಿ ಮಲಗುವಾಗ ಯಾವುದೇ ಕಾರಣಕ್ಕೂ ಈ ದಿಕ್ಕುಗಳತ್ತ ತಲೆ ಹಾಕಿ ಮಲಗಬೇಡಿ. ಪೂರ್ವ ಹಾಗೂ ದಕ್ಷಿಣ ದಿಕ್ಕಿನ ಕಡೆಗೆ ತಲೆ ಹಾಕಿ ಮಲಗಿದರೆ ನಿಮ್ಮ ಸಂಪತ್ತು, ಆರೋಗ್ಯ ಎರಡೂ ಹೆಚ್ಚಾಗುತ್ತದೆ.