
ನಾವು ಸಾಮಾನ್ಯವಾಗಿ ಎಲ್ಲರ ಮನೆಯ ಸುತ್ತಮುತ್ತ ತೆಂಗಿನ ಸಸಿ ಇರುವುದು ನೋಡುತ್ತೇವೆ. ಉದ್ದವಾಗಿ, ದಟ್ಟವಾಗಿ ಬೆಳೆದ ತೆಂಗಿನ ಸಸಿ ಎಲ್ಲೆಲಿಯೂ ಕಂಡುಬರುತ್ತದೆ. ಆದರೆ ಕೆಲವರು ತೆಂಗಿನ ಸಸಿಯನ್ನು ಮನೆಯ ಸುತ್ತ ಎಲ್ಲೆಂದರಲ್ಲಿ ಸ್ಥಳವಿದ್ದ ಕಡೆ ನೆಡುತ್ತಾರೆ. ಆದರೆ ವಾಸ್ತು ಪ್ರಕಾರ ಇದು ಸರಿಯಲ್ಲವಂತೆ. ತೆಂಗಿನಸಸಿಯನ್ನು ಈ ದಿಕ್ಕಿನಲ್ಲಿ ನೆಡಬಾರದಂತೆ.
ವಾಸ್ತು ಶಾಸ್ತ್ರದ ಪ್ರಕಾರ, ತೆಂಗಿನಸಸಿಯನ್ನು ಮನೆಯ ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ನೆಡಬಾರದಂತೆ. ಈ ದಿಕ್ಕಿನಲ್ಲಿ ತೆಂಗಿನಸಸಿಯನ್ನು ನೆಟ್ಟರೆ ನಕರಾತ್ಮಕ ಶಕ್ತಿ ಹೆಚ್ಚಾಗುತ್ತದೆಯಂತೆ. ಇದರಿಂದ ಮನೆಯವರಿಗೆ ಸಮಸ್ಯೆಯಾಗುತ್ತದೆಯಂತೆ. ಮನೆಯ ಉತ್ತರ ದಿಕ್ಕಿನಲ್ಲಿ ತೆಂಗಿನಸಸಿಯನ್ನು ನೆಟ್ಟರೆ ಇದರಿಂದ ಮನೆಯಲ್ಲಿ ಆರ್ಥಿಕ ಸಮಸ್ಯೆಗಳು ಉಂಟಾಗುತ್ತದೆಯಂತೆ.
ಹಾಗೇ ಪೂರ್ವ ದಿಕ್ಕಿನಲ್ಲಿ ತೆಂಗಿನಸಸಿಯನ್ನು ನೆಡುವುದರಿಂದ ನಿಮ್ಮ ಗೌರವಕ್ಕೆ ಧಕ್ಕೆ ಉಂಟಾಗುತ್ತದೆಯಂತೆ. ಮನೆಯಲ್ಲಿ ಕೌಟುಂಬಿಕ ಕಲಹಗಳು ಹೆಚ್ಚಾಗುತ್ತದೆಯಂತೆ.
ವಾಸ್ತು ಪ್ರಕಾರ ತೆಂಗಿನಸಸಿಯಲ್ಲಿ ತ್ರಿಮೂರ್ತಿಗಳು ನೆಲೆಸಿರುತ್ತಾರಂತೆ. ಹಾಗೇ ಇದು ಲಕ್ಷ್ಮಿದೇವಿಯ ಸ್ವರೂಪವಂತೆ. ಹಾಗಾಗಿ ಈ ಮರವನ್ನು ಮನೆಯ ದಕ್ಷಿಣ ಮತ್ತು ಪಶ್ಚಿಮ ದಿಕ್ಕಿನಲ್ಲಿ ನೆಡಬೇಕಂತೆ. ಇದರಿಂದ ಲಕ್ಷ್ಮಿ ನಾರಾಯಣರ ಆಶೀರ್ವಾದ ದೊರೆಯುತ್ತದೆಯಂತೆ. ಇದರಿಂದ ಮನೆಯಲ್ಲಿ ಸಮೃದ್ಧಿ , ಸಂತೋಷ ನೆಲೆಸಿರುತ್ತದೆಯಂತೆ.