ಪ್ರತಿದಿನ ಬೆಳಿಗ್ಗೆ ನಿತ್ಯ ಕರ್ಮ ಮುಗಿಸಿ ಸ್ನಾನ ಮಾಡಿ ದೇವರಿಗೆ ಪೂಜೆ ಮಾಡುವುದು ಸಂಪ್ರದಾಯ. ಬಹುತೇಕರು ಪೂಜೆ ವೇಳೆ ಹೂವನ್ನು ಹಾಕ್ತಾರೆ. ಆದ್ರೆ ಯಾವ ದೇವರಿಗೆ ಯಾವ ಹೂ ಪ್ರಿಯ ಎಂಬುದು ಬಹುತೇಕರಿಗೆ ತಿಳಿದಿರುವುದಿಲ್ಲ. ದೇವರಿಗೆ ಪ್ರಿಯವಾದ ಹೂ ಅರ್ಪಣೆ ಮಾಡಿಲ್ಲವಾದಲ್ಲಿ ಫಲ ಸಿಗುವುದಿಲ್ಲವೆಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಹಾಗಾಗಿ ಆಯಾ ದೇವರಿಗೆ ಪ್ರಿಯವಾದ ಹೂವನ್ನು ಅರ್ಪಿಸಬೇಕು.
ಭಗವಂತ ಗಣೇಶನಿಗೆ ತುಳಸಿ ಬಿಟ್ಟು ಬೇರೆ ಎಲ್ಲ ಹೂವುಗಳೂ ಪ್ರಿಯ. ಹಾಗಾಗಿ ಎಲ್ಲ ಬಣ್ಣದ ಎಲ್ಲ ಬಗೆಯ ಹೂಗಳನ್ನು ಅರ್ಪಿಸಬಹುದು.
ಭಗವಂತ ಶಿವನಿಗೆ ಬಿಲ್ವಪತ್ರೆ, ಕರವೀರದ ಹೂ, ಎಕ್ಕೆ ಹೂ, ತುಂಬೆ ಹೂವನ್ನು ಅರ್ಪಿಸಿ ಪೂಜೆ ಮಾಡುವುದು ಶುಭಕರ.
ತಾಯಿ ಗೌರಿಗೆ ಭಗವಂತ ಶಂಕರನಿಗೆ ಅರ್ಪಿತವಾದ ಹೂ ಬಹಳ ಇಷ್ಟ. ಇದನ್ನು ಹೊರತುಪಡಿಸಿ ಮಂದಾರದ ಹೂ, ಬಿಳಿಯ ಕಮಲ, ಪಲಾಶ್, ಚಂಪಾ, ಮಲ್ಲಿಯ ಹೂವನ್ನು ಹಾಕಬಹುದು.
ಭಗವಂತ ಕೃಷ್ಣನಿಗೆ ಲಿಲಿ, ಕರವೀರದ ಹೂವನ್ನು ಅರ್ಪಿಸಿ ಪೂಜೆ ಮಾಡಿದ್ರೆ ಪೂಜೆಯ ಫಲ ಸಿಗಲಿದೆ.