ಹಲ್ಲುಗಳಲ್ಲಿ ಅಥವಾ ವಸಡುಗಳಲ್ಲಿ ರಕ್ತಸ್ರಾವವಾಗುತ್ತಿದ್ದರೆ ನಿರ್ಲಕ್ಷ್ಯ ವಹಿಸಬೇಡಿ. ಇದರಿಂದ ಜಗಿಯುವಾಗ ನೋವು, ಹಲ್ಲು ಸಡಿಲವಾಗುವುದು ಅಥವಾ ದುರ್ವಾಸನೆ ಸಹಿತ ಉಸಿರಾಟದಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಈ ಲಕ್ಷಣ ಕಡಿಮೆ ಮಾಡುವ ಕೆಲವು ಮನೆಮದ್ದುಗಳನ್ನು ನೋಡೋಣ.
ದಾಳಿಂಬೆಗೆ ಬ್ಯಾಕ್ಟೀರಿಯಾ ವಿರೋಧಿ ಗುಣವಿದೆ. ಇದು ಹಲ್ಲಿನ ಫ್ಲೇಕ್ಸ್ ವಿರುದ್ಧ ಹೋರಾಡಿ ಬಾಯಿಯನ್ನು ಸ್ವಚ್ಛಗೊಳಿಸುತ್ತದೆ. ದಾಳಿಂಬೆ ರಸವನ್ನು ತೆಗೆದು ಕುಡಿಯುವಾಗ ಯಾವುದೇ ಕೃತಕ ಸಕ್ಕರೆ ಸೇರಿಸದಿರಿ.
ಆಯಿಲ್ ಪುಲ್ಲಿಂಗ್ ಎಂದರೆ ಬಾಯಿಗೆ ಎಣ್ಣೆ ಹಾಕಿ ಐದು ನಿಮಿಷ ಅದರಲ್ಲೇ ಬಾಯಿ ಮುಕ್ಕಳಿಸಿ. ಇದರಿಂದ ಬಾಯಿಯ ಕೆಟ್ಟ ದುರ್ವಾಸನೆ ದೂರವಾಗುತ್ತದೆ ಮಾತ್ರವಲ್ಲ ಒಸಡಿನ ಸಮಸ್ಯೆಗಳೂ ನಿವಾರಣೆಯಾಗುತ್ತವೆ.
ಅಲೋವೇರಾದಿಂದಲೂ ನಿಮ್ಮ ಬಾಯಿಯನ್ನು ಸ್ವಚ್ಛಗೊಳಿಸಬಹುದು. ನೀರಿಗೆ ಅಡುಗೆ ಸೋಡಾ ಮತ್ತು ಅಲೋವೇರಾ ಜೆಲ್ ಸೇರಿಸಿ. ಎರಡು ಹನಿ ಪುದೀನಾ ಎಣ್ಣೆಯನ್ನೂ ಸೇರಿಸಿ. ಇದರಿಂದ ಬಾಯಿಮುಕ್ಕಳಿಸಿ.
ಜೇನುತುಪ್ಪವನ್ನು ನೋವಿರುವ ಜಾಗಕ್ಕೆ ಹಚ್ಚಿಕೊಂಡರೆ, ಬೇವಿನ ಎಲೆಯಿಂದ ಬಾಯಿ ತೊಳೆದುಕೊಂಡರೆ ಎಲ್ಲಾ ನೋವುಗಳು ಕಡಿಮೆಯಾಗುತ್ತವೆ. ಉಪ್ಪುನೀರಿನಿಂದ ಹಲ್ಲು ನೋವು ಮಾತ್ರವಲ್ಲ ಒಸಡಿನ ರಕ್ತಸ್ರಾವವನ್ನೂ ತಡೆಗಟ್ಟಬಹುದು.