alex Certify ನಿಂಬೆರಸದೊಂದಿಗೆ ಈ 4 ಪದಾರ್ಥಗಳನ್ನು ಬೆರೆಸಿ ತಿನ್ನಬೇಡಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಂಬೆರಸದೊಂದಿಗೆ ಈ 4 ಪದಾರ್ಥಗಳನ್ನು ಬೆರೆಸಿ ತಿನ್ನಬೇಡಿ….!

ನಿಂಬೆಹಣ್ಣು ಸರ್ವಗುಣ ಸಂಪನ್ನ ಎಂದೇ ಹೇಳಬಹುದು. ನಿಂಬೆಹಣ್ಣಿನಲ್ಲಿ ಔಷಧಗಳನ್ನೂ ಮೀರಿಸುವಂತಹ ಅನೇಕ ಆರೋಗ್ಯಕಾರಿ ಅಂಶಗಳಿವೆ. ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಕೂಡ ನಿಂಬೆ ಸಮೃದ್ಧವಾಗಿದೆ. ಇದು ರುಚಿಯಾದ ಮತ್ತು ಆರೋಗ್ಯಕರ ಹಣ್ಣು. ಆಹಾರದ ರುಚಿಯನ್ನು ಹೆಚ್ಚಿಸಲು ಇದನ್ನು ಬಳಸಲಾಗುತ್ತದೆ. ಹಲವಾರು ಕಾಯಿಲೆಗಳಿಗೂ ಇದು ಪರಿಣಾಮಕಾರಿ ಮನೆಮದ್ದಾಗಿದೆ. ಆದರೆ ಕೆಲವು ಪದಾರ್ಥಗಳೊಂದಿಗೆ ನಿಂಬೆಯನ್ನು ಸೇವಿಸುವುದು ಆರೋಗ್ಯಕ್ಕೆ ಹಾನಿಕಾರಕ.

ಆಯುರ್ವೇದದ ಪ್ರಕಾರ ಕೆಲವು ಆಹಾರ ಪದಾರ್ಥಗಳೊಂದಿಗೆ ನಿಂಬೆ ಮಿಶ್ರಣವನ್ನು ‘ವಿರುದ್ಧ ಆಹಾರ’ ಎಂದು ಪರಿಗಣಿಸಲಾಗುತ್ತದೆ. ಇದು ಜೀರ್ಣಾಂಗ ವ್ಯವಸ್ಥೆಗೆ ಅಡ್ಡಿಪಡಿಸುತ್ತದೆ ಮತ್ತು ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ನಿಂಬೆಯೊಂದಿಗೆ ಯಾವ 4 ಪದಾರ್ಥಗಳನ್ನು ಸೇವಿಸಬಾರದು ಎಂದು ತಿಳಿಯೋಣ.

ಹಾಲು

ಹಾಲಿನೊಂದಿಗೆ ನಿಂಬೆಹಣ್ಣನ್ನು ಸೇವಿಸುವುದರಿಂದ ಗ್ಯಾಸ್, ಅಜೀರ್ಣ ಮತ್ತು ಅತಿಸಾರದಂತಹ ಹೊಟ್ಟೆಯ ಸಮಸ್ಯೆಗಳು ಉಂಟಾಗಬಹುದು. ನಿಂಬೆಯ ಆಮ್ಲೀಯ ಅಂಶವು ಹಾಲಿನ ಪ್ರೋಟೀನ್‌ಗಳನ್ನು ಒಡೆದು  ಹಾಕುವುದರಿಂದ ಇದು ಸಂಭವಿಸುತ್ತದೆ. ಇದು ಜೀರ್ಣಕ್ರಿಯೆಯ ಪ್ರಕ್ರಿಯೆಯಲ್ಲಿ ಅಡಚಣೆ ಉಂಟುಮಾಡುತ್ತದೆ.

ಮೊಸರು

ಮೊಸರಿನೊಂದಿಗೆ ನಿಂಬೆ ಸೇವನೆಯು ಹೊಟ್ಟೆಗೆ ಹಾನಿಕಾರಕವಾಗಿದೆ. ನಿಂಬೆಯಲ್ಲಿರುವ ಆಮ್ಲವು ಮೊಸರಿನಲ್ಲಿ ಇರುವ ಉತ್ತಮ ಬ್ಯಾಕ್ಟೀರಿಯಾವನ್ನು ನಾಶಪಡಿಸುತ್ತದೆ, ಇದು ಜೀರ್ಣಾಂಗ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ ಮತ್ತು ಆಮ್ಲೀಯತೆಯನ್ನು ಹೆಚ್ಚಿಸುತ್ತದೆ.

ಮೀನು

ಮೀನಿನೊಂದಿಗೆ ನಿಂಬೆಹಣ್ಣು ಸೇವಿಸುವುದರಿಂದ ಪೋಷಣೆ ಕಡಿಮೆಯಾಗುತ್ತದೆ. ನಿಂಬೆ ಆಮ್ಲವು ಮೀನಿನಲ್ಲಿರುವ ಪ್ರೋಟೀನ್‌ನ ಜೀರ್ಣಕ್ರಿಯೆಯನ್ನು ತಡೆಯುತ್ತದೆ. ಇದರಿಂದಾಗಿ ದೇಹವು ಮೀನು ಒದಗಿಸುವ ಅಗತ್ಯ ಪೋಷಕಾಂಶಗಳನ್ನು ಪಡೆಯುವುದಿಲ್ಲ.

ಮೊಟ್ಟೆ

ಮೊಟ್ಟೆಯೊಂದಿಗೆ ನಿಂಬೆಹಣ್ಣನ್ನು ಸೇವಿಸುವುದರಿಂದ ಹೊಟ್ಟೆಯಲ್ಲಿ ಭಾರ ಮತ್ತು ಅಜೀರ್ಣ ಉಂಟಾಗುತ್ತದೆ. ನಿಂಬೆಯಲ್ಲಿರುವ ಆಮ್ಲವು ಮೊಟ್ಟೆಯಲ್ಲಿರುವ ಪ್ರೋಟೀನ್ ಅನ್ನು ಜೀರ್ಣಿಸಿಕೊಳ್ಳಲು ಅಡ್ಡಿಪಡಿಸುತ್ತದೆ. ಇದರಿಂದ ಹೊಟ್ಟೆ ಕೆಟ್ಟು ಹೋಗಬಹುದು.

ಈ ಆಹಾರಗಳ ಹೊರತಾಗಿ ನಿಂಬೆಯ ಅತಿಯಾದ ಸೇವನೆ ಕೂಡ ಸಮಸ್ಯೆ ಉಂಟುಮಾಡುತ್ತದೆ. ಇದರಿಂದ ಹೊಟ್ಟೆಯ ಕಿರಿಕಿರಿ, ಆಮ್ಲೀಯತೆ ಮತ್ತು ಬಾಯಿ ಹುಣ್ಣುಗಳಂತಹ ಸಮಸ್ಯೆಯಾಗುತ್ತದೆ. ಆದ್ದರಿಂದ ನಿಂಬೆಯನ್ನು ಸಮತೋಲಿತ ಪ್ರಮಾಣದಲ್ಲಿ ಸೇವಿಸಬೇಕು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...