ಡಿಟಾಕ್ಸ್ ಪಾನೀಯಗಳು ದೇಹವನ್ನು ಶುದ್ಧೀಕರಿಸಲು ಮತ್ತು ನಿರ್ವಿಷಗೊಳಿಸಲು ಸಹಾಯ ಮಾಡುತ್ತವೆ. ಈ ಪಾನೀಯಗಳು ಸಾಮಾನ್ಯವಾಗಿ ಹಣ್ಣುಗಳು, ತರಕಾರಿಗಳು ಮತ್ತು ಗಿಡಮೂಲಿಕೆಗಳಂತಹ ನೈಸರ್ಗಿಕ ಪದಾರ್ಥಗಳನ್ನು ಹೊಂದಿರುತ್ತವೆ. ಏಕೆಂದರೆ ಅವುಗಳು ಶುದ್ಧೀಕರಣ ಗುಣಲಕ್ಷಣಗಳನ್ನು ಹೊಂದಿರುತ್ತವೆ. ಡಿಟಾಕ್ಸ್ ಡ್ರಿಂಕ್ಸ್ ದೇಹದಿಂದ ವಿಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ ಎಂಬುದು ಅನೇಕರ ನಂಬಿಕೆ. ಆದರೆ ಇದಕ್ಕೆ ಸೀಮಿತ ವೈಜ್ಞಾನಿಕ ಪುರಾವೆಗಳಿವೆ.
ನಮ್ಮಲ್ಲಿ ಹಲವರು ಡಿಟಾಕ್ಸ್ ಪಾನೀಯಗಳನ್ನು ಸೇವಿಸುತ್ತಾರೆ. ಈ ಸಮಯದಲ್ಲಿ ನಾವು ಮಾಡುವ ಸಣ್ಣದೊಂದು ಪ್ರಮಾದ ಭಾರೀ ಅಪಾಯವನ್ನೇ ತಂದೊಡ್ಡಬಹುದು. ಆಯುರ್ವೇದದ ಪ್ರಕಾರ ಕೆಲವು ನಿರ್ದಿಷ್ಟ ಹಣ್ಣುಗಳು ಮತ್ತು ಹಸಿ ತರಕಾರಿಗಳ ರಸಗಳ ಸಂಯೋಜನೆಯು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಅಷ್ಟೇ ಅಲ್ಲ ಈ ಕೆಟ್ಟ ಕಾಂಬಿನೇಷನ್‌ಗಳಿಂದ ನಮ್ಮ ಲಿವರ್ ಕೂಡ ಹಾಳಾಗಬಹುದು.
ಅನೇಕರು ಲಿವರ್ ಅನ್ನು ಸ್ವಚ್ಛಗೊಳಿಸಲು ಡಿಟಾಕ್ಸ್ ಪಾನೀಯಗಳನ್ನು ತಯಾರಿಸುತ್ತಾರೆ. ಅದರಲ್ಲಿ ಹಸಿರು ಸೊಪ್ಪು, ತರಕಾರಿಗಳು, ಹೂಕೋಸು, ಬೀಟ್ರೂಟ್, ಪಾಲಕ್ ಬೆರೆಸಿ ಜ್ಯೂಸ್ ತಯಾರಿಸುತ್ತಾರೆ. ಆದರೆ ಪಾಲಕ್ ಮತ್ತು ಕಿತ್ತಳೆಯ ಸಂಯೋಜನೆ ಆರೋಗ್ಯಕ್ಕೆ ಅಪಾಯಕಾರಿ. ಡಿಟಾಕ್ಸ್ ಡ್ರಿಂಕ್ಸ್ ಸೇವನೆಗೂ ಮುನ್ನ ಇಂತಹ ಡೇಂಜರಸ್ ಕಾಂಬಿನೇಷನ್‌ಗಳ ಬಗ್ಗೆ ತಿಳಿದುಕೊಂಡಿರಬೇಕು.
ಡಿಟಾಕ್ಸ್ ಪಾನೀಯಗಳಿಂದ ಏನು ಉಪಯೋಗ?
ಡಿಟಾಕ್ಸ್ ಪಾನೀಯವು ದೇಹದ ವಿವಿಧ ಅಂಗಗಳಾದ ಉಸಿರಾಟದ ಪ್ರದೇಶ, ಹೊಟ್ಟೆ ಮತ್ತು ಮೂತ್ರಪಿಂಡಗಳನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ. ಇದು ದೇಹಕ್ಕೆ ಬಹಳ ಮುಖ್ಯವಾದ ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಡಿಟಾಕ್ಸ್ ಪಾನೀಯಗಳು ದೇಹಕ್ಕೆ ಅಗತ್ಯವಾದ ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತವೆ.
ಈ ಕಾರಣದಿಂದಾಗಿ, ದೇಹದ ವಿವಿಧ ಭಾಗಗಳಲ್ಲಿ ಶಕ್ತಿಯು ಹೆಚ್ಚಾಗುತ್ತದೆ, ಇದು ದೇಹಕ್ಕೆ ಬಹಳ ಮುಖ್ಯವಾಗಿದೆ. ಡಿಟಾಕ್ಸ್ ಪಾನೀಯವು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಿದೆ.