ಧರ್ಮದಲ್ಲಿ ಪ್ರತಿ ದಿನದ ಪ್ರತಿಯೊಂದು ಕೆಲಸಕ್ಕೂ ಕೆಲವೊಂದು ನಿಯಮಗಳನ್ನು ವಿಧಿಸಲಾಗಿದೆ. ಈ ನಿಯಮಗಳನ್ನು ಭವಿಷ್ಯ ಪುರಾಣದಲ್ಲಿ ನೋಡಬಹುದಾಗಿದೆ. ಭೋಜನ ಕೂಡ ನಮ್ಮ ದಿನ ನಿತ್ಯದ ಕೆಲಸಗಳಲ್ಲಿ ಬಹು ಮುಖ್ಯ ಕೆಲಸ. ಭೋಜನ ಮಾಡುವಾಗ ನಾವು ಮಾಡುವ ತಪ್ಪುಗಳು ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿರುತ್ತದೆ.
ಪೂರ್ವ ದಿಕ್ಕಿಗೆ ಮುಖ ಮಾಡಿ ಭೋಜನ ಮಾಡುವುದ್ರಿಂದ ಆಯಸ್ಸು ವೃದ್ಧಿಯಾಗುತ್ತದೆ. ಅದೇ ಪಶ್ಚಿಮಕ್ಕೆ ಮುಖ ಮಾಡಿ ಊಟ ಮಾಡುವುದ್ರಿಂದ ಧನ ಲಾಭವಾಗುತ್ತದೆ.
ಉತ್ತರ ದಿಕ್ಕಿಗೆ ಮುಖ ಮಾಡಿ ಆಹಾರ ಸೇವನೆ ಮಾಡುವುದ್ರಿಂದ ಗೌರವ ಪ್ರಾಪ್ತಿಯಾಗುತ್ತದೆ. ದಕ್ಷಿಣ ದಿಕ್ಕಿಗೆ ಮುಖ ಮಾಡಿ ಭೋಜನ ಮಾಡಿದಲ್ಲಿ ಹೆಸರು ಲಭಿಸುತ್ತದೆ.
ಊಟದ ಮಧ್ಯೆ ತಟ್ಟೆ ಬಿಟ್ಟು ಏಳಬಾರದು. ಭೋಜನದ ಮಧ್ಯೆ ಪದೇ ಪದೇ ಎದ್ದಲ್ಲಿ ಹಣ ವ್ಯಯವಾಗುತ್ತದೆ.
ಬಿಟ್ಟ ಆಹಾರವನ್ನು ಮತ್ತೆ ಸೇವನೆ ಮಾಡಬಾರದು. ಇದ್ರಿಂದ ಆಯಸ್ಸು ಕಡಿಮೆಯಾಗುತ್ತದೆ. ಹಾಗೆ ಅಗತ್ಯಕ್ಕಿಂತ ಹೆಚ್ಚು ಆಹಾರವನ್ನು ಸೇವನೆ ಮಾಡಬಾರದು.
ಯಾರಿಗೂ ಕೆಟ್ಟ ಆಹಾರವನ್ನು ನೀಡಬಾರದು. ನಾವೂ ಕೆಟ್ಟ ಆಹಾರವನ್ನು ತಿನ್ನಬಾರದು. ಆಹಾರ ಸೇವನೆ ಮಾಡಿದ ನಂತ್ರ ಹಾಗೆ ಹೋಗಬಾರದು. ಸ್ವಲ್ಪ ನೀರು ಕುಡಿದೇ ಹೊರಗೆ ಹೋಗಬೇಕು.
ಭೋಜನವನ್ನು ಖುಷಿ-ಖುಷಿಯಾಗಿ ತಿನ್ನಬೇಕು. ಆಹಾರದಲ್ಲಿ ಉಪ್ಪು-ಹುಳಿ ಕಡಿಮೆಯಿದ್ದಲ್ಲಿ ಅದ್ರ ಬಗ್ಗೆ ಗಲಾಟೆ ಮಾಡಬಾರದು.