ಶಾರೀರಿಕ ಸಂಬಂಧ ಬೆಳೆಸುವ ವೇಳೆ ಯಾವ ವ್ಯಕ್ತಿ ಕೂಡ ತನ್ನ ಸಂಗಾತಿ ಮನಸ್ಸು ನೋಯಿಸಲು ಇಷ್ಟಪಡುವುದಿಲ್ಲ. ಇಬ್ಬರಿಗೂ ಖುಷಿ ಸಿಗಬೇಕೆಂದು ಬಯಸ್ತಾರೆ. ಆದ್ರೆ ಕೆಲವೊಮ್ಮೆ ನಾವು ಮಾಡುವ ತಪ್ಪುಗಳು ಶಾರೀರಿಕ ಸಂಬಂಧ ಬೆಳೆಸಿದಾಗ ಸಿಗುವ ಸಂಪೂರ್ಣ ಸುಖ ನಮಗೆ ಸಿಗದಂತೆ ಮಾಡುತ್ತದೆ.
ಸಾಮಾನ್ಯವಾಗಿ ಶಾರೀರಿಕ ಸಂಬಂಧ ಬೆಳೆಸಿದ ವೇಳೆ ಸಂಗಾತಿಗೆ ( ಇದ್ರಲ್ಲಿ ಮಹಿಳೆಯರೂ ಸೇರಿದ್ದಾರೆ) ಮುತ್ತು ನೀಡಲು ಇಷ್ಟಪಡುವುದಿಲ್ಲ. ಲೈಂಗಿಕ ಭಂಗಿ ಇದಕ್ಕೆ ಕಾರಣವಾಗಿರಬಹುದು. ಇಲ್ಲ ಲೈಂಗಿಕ ಸುಖ ಪಡೆಯುವ ವೇಳೆ ಮುತ್ತು ಅಡ್ಡಿಯಾಗಬಹುದೆಂದು ಅವರು ಭಾವಿಸುತ್ತಾರೆ. ಆದ್ರೆ ತಜ್ಞರು ಸಂಭೋಗದ ವೇಳೆ ಸಂಗಾತಿಗೆ ಮುತ್ತು ಕೊಡುವಂತೆ ಸಲಹೆ ನೀಡ್ತಾರೆ.
ಆಕ್ರಮಣಕಾರಿ ಸಂಗಾತಿ ಅನೇಕರಿಗೆ ಇಷ್ಟವಾಗ್ತಾರೆ. ಹಾಗಂತ ಸಂಗಾತಿ ಸಿದ್ದವಿಲ್ಲದ ವೇಳೆ ನಿಮ್ಮ ಆಕ್ರಮಣ ಪ್ರದರ್ಶನ ಸರಿಯಲ್ಲ. ಸಂಗಾತಿಯ ಕಿವಿ, ಭುಜ, ಕುತ್ತಿಗೆ ಅಥವಾ ದೇಹದ ಇನ್ನಾವುದೋ ಭಾಗವನ್ನು ಕಚ್ಚುವ ಮೊದಲು ನಿಮ್ಮ ಸಂಗಾತಿ ಆ್ಯಕ್ಟಿವ್ ಆಗಿದ್ದಾರಾ ಎಂಬುದನ್ನು ನೋಡಿಕೊಳ್ಳಿ. ನಿಮ್ಮ ಸಂಗಾತಿ ಆ್ಯಕ್ಟಿವ್ ಆಗಿಲ್ಲವಾದ್ರೆ ಅವರು ಭಯಗೊಳ್ಳುವ ಸಾಧ್ಯತೆಯಿರುತ್ತದೆ.
ದೇಹದ ಖಾಸಗಿ ಅಂಗ ಸಂಭೋಗದಲ್ಲಿ ಮಹತ್ವದ ಪಾತ್ರವಹಿಸುತ್ತದೆ. ಇದ್ರಲ್ಲಿ ಎರಡು ಮಾತಿಲ್ಲ. ಹಾಗಂತ ದೇಹದ ಉಳಿದ ಭಾಗಗಳನ್ನು ನಿರ್ಲಕ್ಷ್ಯಿಸುವುದು ಸರಿಯಲ್ಲ.
ಪ್ರೀತಿಯಲ್ಲಿ ಭಾವೋದ್ರೇಕಕ್ಕೆ ಒಳಗಾಗೋದು ಸಹಜ. ಹಾಗಂತ ಸಂಗಾತಿ ಮೇಲಿರುವಾಗ ಪೂರ್ತಿ ಭಾರವನ್ನು ಅವರ ಮೇಲೆ ಹೇರುವುದು ಸರಿಯಲ್ಲ. ಇದ್ರಿಂದ ಅವರಿಗೆ ಉಸಿರಾಡಲು ತೊಂದರೆಯಾಗಬಹುದು.
ಕೆಲವರು ಜಿಮ್ ಗೆ ಹೋಗಿ ವ್ಯಾಯಾಮ ಮಾಡಿದಂತೆ ಶಾರೀರಿಕ ಸಂಬಂಧ ಬೆಳೆಸ್ತಾರೆ. ಆದ್ರೆ ಇದು ಸಂಗಾತಿಗೆ ಇಷ್ಟವಾಗದೆ ಹೋಗಬಹುದು. ಬಹುತೇಕ ಮಂದಿ ನಿಧಾನವಾಗಿ ಶಾರೀರಿಕ ಸಂಬಂಧ ಬೆಳೆಸಲು ಇಷ್ಟಪಡ್ತಾರೆ. ಹಾಗೆ ನಿಧಾನವಾಗಿ ಅಂತಿಮ ಘಟ್ಟ ತಲುಪಲು ಬಯಸ್ತಾರೆ.