ನಮ್ಮ ದೈನಂದಿನ ಜೀವನಕ್ಕೆ ಸಂಬಂಧಿಸಿದ ಅನೇಕ ಸಂಗತಿಗಳನ್ನು ಚಾಣಕ್ಯ ನೀತಿಯಲ್ಲಿದೆ. ಸ್ನೇಹ ಸಂಬಂಧದ ಬಗ್ಗೆಯೂ ಚಾಣಕ್ಯ ಹೇಳಿದ್ದಾನೆ. ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಸ್ನೇಹಿತನ ಅಗತ್ಯವಿರುತ್ತದೆ. ಈತನ ಆಯ್ಕೆಯನ್ನು ನಾವೇ ಮಾಡ್ತೇವೆ. ಯಾರು ನಮಗೆ ಸ್ನೇಹಿತರಾಗಬಲ್ಲರು ಎಂಬ ಆಯ್ಕೆ ನಮ್ಮದೇ ಜವಾಬ್ದಾರಿಯಾಗಿರುತ್ತದೆ.
ಚಾಣಕ್ಯ, ಸ್ನೇಹಿತರ ಆಯ್ಕೆಗೆ ಒಂದು ನೀತಿ ಹೇಳಿದ್ದಾರೆ. ಅದನ್ನು ನಾವು ಪಾಲಿಸಿದ್ರೆ ಎಂದೂ ಸ್ನೇಹಿತರ ಆಯ್ಕೆಯಲ್ಲಿ ಮೋಸವಾಗಲು ಸಾಧ್ಯವಿಲ್ಲ. ನಮ್ಮ ಮುಂದೆ ನಮ್ಮನ್ನು ಹೊಗಳುವ, ನಮ್ಮ ಬಗ್ಗೆ ಹೆಮ್ಮೆಯ ಮಾತನಾಡುವ ವ್ಯಕ್ತಿ ನಮ್ಮ ಹಿಂದೆ ನಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದರೆ, ನಮ್ಮ ಕೆಲಸಕ್ಕೆ ಅಡ್ಡಿ ಮಾಡುತ್ತಿದ್ದರೆ ಅಂಥವರನ್ನು ಎಂದೂ ಸ್ನೇಹಿತರನ್ನಾಗಿ ಆಯ್ಕೆ ಮಾಡಿಕೊಳ್ಳಬಾರದು. ಅಂಥ ವ್ಯಕ್ತಿಗಳಿಂದ ತಕ್ಷಣ ದೂರ ಸರಿಯಬೇಕು.
ಒಳಗೆ ವಿಷವಿಟ್ಟುಕೊಂಡು ಸಿಹಿ ಮಾತನಾಡುವ ಅವ್ರು ನಷ್ಟವನ್ನುಂಟು ಮಾಡ್ತಾರೆ. ಎಂದೂ ಕೆಟ್ಟ ಮಿತ್ರನ ಮೇಲೆ ಭರವಸೆಯಿಡಬಾರದು. ಹಾಗೆ ಒಳ್ಳೆ ಮಿತ್ರನ ಮೇಲೂ ಹೆಚ್ಚಿನ ಭರವಸೆ ಬೇಡ. ಭವಿಷ್ಯದಲ್ಲಿ ಗಲಾಟೆಯಾದ್ರೆ ಆತ ನಮ್ಮ ಗುಟ್ಟನ್ನು ಹೊರಹಾಕುವ ಸಾಧ್ಯತೆಯಿರುತ್ತದೆ ಎನ್ನುತ್ತಾರೆ ಚಾಣಕ್ಯ.