ಈ ಬಾರಿಯ ಪಿತೃ ಪಕ್ಷ ಸೆಪ್ಟೆಂಬರ್ 10ರಿಂದ ಶುರುವಾಗಿದ್ದು ಸೆಪ್ಟೆಂಬರ್ 25ರಂದು ಮುಗಿಯಲಿದೆ. ಸೆಪ್ಟೆಂಬರ್ 25ರಂದು ಮಹಾಲಯ ಅಮಾವಾಸ್ಯೆ ಆಚರಿಸಲಾಗುತ್ತದೆ. ಪಿತೃ ಪಕ್ಷದಲ್ಲಿ ಪೂರ್ವಜರಿಗೆ ಪಿಂಡದಾನ ಮಾಡಲಾಗುತ್ತದೆ. ಪೂರ್ವಜರು ಸಾವನ್ನಪ್ಪಿದ ದಿನ ತಿಳಿಯದವರು ಎಲ್ಲರ ಹೆಸರಿನಲ್ಲಿ ಮಹಾಲಯ ಅಮಾವಾಸ್ಯೆ ದಿನ ಪಿಂಡದಾನ ಮಾಡ್ತಾರೆ. ಶ್ರಾದ್ಧ ಮಾಡ್ತಾರೆ.
ಮಹಾಲಯ ಅಮಾವಾಸ್ಯೆ ದಿನ ಕೆಲ ಕೆಲಸಗಳನ್ನು ಮಾಡಬಾರದು ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ.
ಮಹಾಲಯ ಅಮಾವಾಸ್ಯೆ ದಿನ ಯಾವುದೇ ಕಾರಣಕ್ಕೂ ಯಾವುದೇ ಹೊಸ ವಸ್ತುವನ್ನು ಖರೀದಿ ಮಾಡಬೇಡಿ. ಹಾಗೆಯೇ ಕೂದಲು ಅಥವಾ ಉಗುರು ಕತ್ತರಿಸಬೇಡಿ. ಹೀಗೆ ಮಾಡಿದ್ರೆ ಪಿತೃ ದೋಷಕ್ಕೆ ಒಳಗಾಗಬೇಕಾಗುತ್ತದೆ.
ಪಿತೃ ಪಕ್ಷದ ಅಮಾವಾಸ್ಯೆಯಂದು ಪೂರ್ವಜರ ಹೆಸರಿನಲ್ಲಿ ಪಿಂಡದಾನ ಮಾಡಿ. ನಿಮಗೆ ಪೂರ್ವಜರ ಸಾವಿನ ತಿಥಿ ತಿಳಿದಿಲ್ಲವೆಂದ್ರೆ ಮಹಾಲಯ ಅಮಾವಾಸ್ಯೆ ದಿನ ಅಗತ್ಯವಾಗಿ ಪಿಂಡದಾನ ಮಾಡಿ.
ಮಹಾಲಯ ಅಮಾವಾಸ್ಯೆಯ ದಿನದಂದು ಮಾಂಸ, ಮೀನು, ಮೊಟ್ಟೆ, ಮದ್ಯ ಇತ್ಯಾದಿಗಳನ್ನು ಸೇವಿಸಬೇಡಿ, ಈ ದಿನ ಸಾತ್ವಿಕ ಅಥವಾ ಸರಳವಾದ ಆಹಾರವನ್ನು ಮಾತ್ರ ಸೇವಿಸಿ.
ಅಮಾವಾಸ್ಯೆ ದಿನ ಮನೆಗೆ ಯಾವುದೇ ವ್ಯಕ್ತಿ ಬಂದರೂ ಅವರನ್ನು ಬರಿಗೈನಲ್ಲಿ ಕಳುಹಿಸಬೇಡಿ. ಭಿಕ್ಷುಕರಿಗೆ ಅವಶ್ಯ ವಸ್ತುಗಳನ್ನು ನೀಡಿ. ಬಡ ಹಾಗೂ ನಿರ್ಗತಿಕ ವ್ಯಕ್ತಿಯನ್ನು ಬರಿಗೈನಲ್ಲಿ ಕಳುಹಿಸಬೇಡಿ. ಬಡವರಿಗೆ ಅವಮಾನ ಮಾಡಬೇಡಿ. ಇದ್ರಿಂದ ದೊಡ್ಡ ಸಮಸ್ಯೆ ಎದುರಿಸಬೇಕಾಗುತ್ತದೆ.
ಮಹಾಲಯ ಅಮಾವಾಸ್ಯೆಯಂದು ನೀವು ಪ್ರಾಣಿ, ಪಕ್ಷಿಗಳಿಗೆ ಆಹಾರ ನೀಡಲು ಮರೆಯಬೇಡಿ. ಮನೆ ಮುಂದೆ ಕಾಗೆ ಬಂದು ಕುಳಿತ್ರೆ ಅದಕ್ಕೆ ಆಹಾರವನ್ನು ನೀಡಿ. ಹಾಗೆಯೇ ನಾಯಿ, ಆಕಳಿಗೆ ಕೂಡ ನೀವು ಆಹಾರವನ್ನು ನೀಡಬೇಕು. ಪ್ರಾಣಿಗಳ ರೂಪದಲ್ಲಿ ಪಿತೃಗಳು ಮನೆಗೆ ಬರ್ತಾರೆ ಎಂಬ ನಂಬಿಕೆಯಿದೆ.