ಮನೆಯಲ್ಲಿರುವ ಪ್ರತಿಯೊಂದು ವಸ್ತುವು ವಾಸ್ತು ಶಾಸ್ತ್ರಕ್ಕೆ ಸಂಬಂಧಿಸಿದೆ. ನಿರ್ದಿಷ್ಟ ವಾಸ್ತು ನಿಯಮಗಳನ್ನು ಪಾಲಿಸದಿದ್ದರೆ ಮನೆಯಲ್ಲಿ ನಕಾರಾತ್ಮಕತೆ ನೆಲೆಸಬಹುದು. ಸಂತೋಷ ಮತ್ತು ಶಾಂತಿ ಹಾಳಾಗುವ ಸಾಧ್ಯತೆ ಇರುತ್ತದೆ. ಮನೆಯ ಅಂದವನ್ನು ಹೆಚ್ಚಿಸಲು ಅನೇಕರು ಗಿಡಗಳನ್ನು ಇಡುತ್ತಾರೆ. ವಾಸ್ತು ಶಾಸ್ತ್ರದಲ್ಲಿ ಮನೆಯಲ್ಲಿ ಗಿಡಗಳನ್ನು ಇಡಲು ಕೆಲವು ನಿಯಮಗಳನ್ನು ತಿಳಿಸಲಾಗಿದೆ. ಆದರೆ ಕೆಲವೊಂದು ಪ್ಲಾಂಟ್‌ಗಳನ್ನು ಮನೆಯಲ್ಲಿ ಇಡುವುದು ಅಶುಭವೆಂದು ಪರಿಗಣಿಸಲಾಗುತ್ತದೆ.
ಒಣ ಗಿಡ – ಮನೆಯಲ್ಲಿ ಯಾವುದೇ ಸಸ್ಯಗಳನ್ನು ಇರಿಸಿದ್ದರೂ ಅವು ಒಣಗದಂತೆ ನೋಡಿಕೊಳ್ಳಬೇಕು. ಮನೆಯಲ್ಲಿ ಒಣ ಗಿಡಗಳನ್ನು ಇಟ್ಟುಕೊಳ್ಳುವುದು ನಕಾರಾತ್ಮಕತೆಗೆ ಕಾರಣವಾಗುತ್ತದೆ. ಕೆಲಸದಲ್ಲಿ ಯಶಸ್ಸು ದೊರೆಯುವುದಿಲ್ಲ.
ಬೋನ್ಸಾಯ್ – ವಾಸ್ತುಶಾಸ್ತ್ರದ ಪ್ರಕಾರ ಬೋನ್ಸಾಯ್ ಗಿಡವನ್ನು ಇಡುವುದು ಅಶುಭವೆಂದು ಪರಿಗಣಿಸಲಾಗಿದೆ. ಈ ಗಿಡವನ್ನು ಮನೆಯೊಳಗೆ ಇಡಬಾರದು. ಇದು ಪ್ರಗತಿಯನ್ನು ತಡೆಯುತ್ತದೆ ಮತ್ತು ನಕಾರಾತ್ಮಕತೆಯನ್ನು ತರುತ್ತದೆ. ಅದನ್ನು ಮನೆಯ ಹೊರಗೆ ಇಡಬಹುದು.
ಕಳ್ಳಿ ಗಿಡ – ಕಳ್ಳಿಗಿಡವನ್ನು ಮನೆಯಲ್ಲಿ ಇಡುತ್ತಾರೆ. ವಾಸ್ತುಶಾಸ್ತ್ರದ ಪ್ರಕಾರ ಕ್ಯಾಕ್ಟಸ್ ಮನೆಗೆ ಅಶುಭವೆಂದು ಹೇಳಲಾಗುತ್ತದೆ. ಮುಳ್ಳಿನ ಗಿಡವನ್ನು ಮನೆಯಲ್ಲಿ ಇಡಬಾರದು ಅದು ದುರಾದೃಷ್ಟವನ್ನು ತರುತ್ತದೆ. ಮನೆಯಲ್ಲಿ ನಕಾರಾತ್ಮಕತೆ ಹರಡುತ್ತದೆ.
ನಿಂಬೆ ಅಥವಾ ನೆಲ್ಲಿಕಾಯಿ – ತೋಟಗಳಲ್ಲಿ ನಿಂಬೆ ಅಥವಾ ನೆಲ್ಲಿಕಾಯಿ ಗಿಡಗಳನ್ನು ನೆಡುತ್ತಾರೆ. ಆದರೆ ಮನೆಯೊಳಗೆ ಇವುಗಳನ್ನು ಇಡಬಾರದು. ನಿಂಬೆ ಹಾಗೂ ನೆಲ್ಲಿಕಾಯಿ ಗಿಡಗಳನ್ನು ಮನೆಯೊಳಗಿಡುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ಇದು ಮನೆಯಲ್ಲಿ ತೊಂದರೆಗಳನ್ನು ಹೆಚ್ಚಿಸುತ್ತದೆ.